ರಾಜ್ಯ

30 ಸಾವಿರ ಚದರ ಅಡಿ ಜಾಗದಲ್ಲಿ ಬರೋಬ್ಬರೀ 42 ಬಗೆಯ ಗೋಧಿ ಬೆಳೆದು ಮಾದರಿಯಾದ ಹುಬ್ಬಳ್ಳಿ ರೈತ!

ಎರಡನೇ ಬಾರಿಗೆ ಇಷ್ಟೊಂದು ವಿಧದ ಗೋಧಿಯನ್ನು ಬೆಳೆಯುತ್ತಿದ್ದಾರೆ. ಕಳೆದ ವರ್ಷವೂ ಇದೇ ರೀತಿಯ ಪ್ರಯೋಗ ಮಾಡಿದ್ದರು, ಆದರೆ ಇಳುವರಿ ತೃಪ್ತಿಕರವಾಗಿರಲಿಲ್ಲ.

30 ಸಾವಿರ ಚದರ ಅಡಿ ಜಾಗದಲ್ಲಿ ಬರೋಬ್ಬರೀ 42 ಬಗೆಯ ಗೋಧಿ ಬೆಳೆದು ಮಾದರಿಯಾದ ಹುಬ್ಬಳ್ಳಿ ರೈತ!
ಸಾಂದರ್ಭಿಕ ಚಿತ್ರ
Published On :

ಹುಬ್ಬಳ್ಳಿ: ಹುಬ್ಬಳ್ಳಿ ಜಿಲ್ಲಾ ಕೇಂದ್ರದಿಂದ 15 ಕಿ.ಮೀ ದೂರದಲ್ಲಿರುವ ಮಳಲಿ ಗ್ರಾಮದ ರೈತ ಚಂದ್ರಪ್ಪ ಹಾದಿಮನಿ, ತಮ್ಮ 30,000 ಚದರ ಅಡಿ ಕೃಷಿ ಭೂಮಿಯಲ್ಲಿ 42 ವಿಧದ ಗೋಧಿಯನ್ನು ಬೆಳೆಸಿದ್ದಾರೆ,

ಈ 42 ಬಗೆಯ ಗೋಧಿಗಳಲ್ಲಿ ಯಾವುದು ಸ್ಥಳೀಯ ಮಣ್ಣು ಮತ್ತು ಹವಾಮಾನಕ್ಕೆ ಹೊಂದಿಕೊಳ್ಳುತ್ತದೆ ಎಂಬುದನ್ನು ಪರೀಕ್ಷಿಸಲು ಈ ಪ್ರಯೋಗ ನಡೆಸಲಾಗಿದೆ. ಇವುಗಳಲ್ಲಿ ಪ್ರಾಚೀನ ಸಿಂಧೂ ಕಣಿವೆಯಲ್ಲಿ ಬೆಳೆಸಲಾದ ಪೈಗಂಬರಿ ಸೇರಿದಂತೆ ಕೆಲವು ಅಪರೂಪದ ಪ್ರಭೇದಗಳು ಸೇರಿವೆ. ಹಾದಿಮನಿ ಅವರ ಗೋಧಿ ಬೆಳೆ ಕೆಲವು ವಾರಗಳಲ್ಲಿ ಕೊಯ್ಲಿಗೆ ಸಿದ್ಧವಾಗಲಿದೆ.

ಚಂದ್ರಪ್ಪ ಹಾದಿಮನಿ ಅವರು ಸಹಜ ಸಮೃದ್ಧದಿಂದ ಸಂಗ್ರಹಿಸಿದ ಬೀಜಗಳೊಂದಿಗೆ ಎಲ್ಲಾ ವಿಧದ ಗೋಧಿಯನ್ನು ಬೆಳೆಸಿದ್ದಾರೆ. ಎರಡನೇ ಬಾರಿಗೆ ಇಷ್ಟೊಂದು ವಿಧದ ಗೋಧಿಯನ್ನು ಬೆಳೆಯುತ್ತಿದ್ದಾರೆ. ಕಳೆದ ವರ್ಷವೂ ಇದೇ ರೀತಿಯ ಪ್ರಯೋಗ ಮಾಡಿದ್ದರು, ಆದರೆ ಇಳುವರಿ ತೃಪ್ತಿಕರವಾಗಿರಲಿಲ್ಲ. ಈ ವರ್ಷ, ಅದು ಉತ್ತಮ ಯಶಸ್ಸನ್ನು ಪಡೆಯುತ್ತೇವೆ ಎಂದು ನಾವು ಭಾವಿಸಿರುವುದಾಗಿ ಸಹಜ ಸಮೃದ್ಧಿಯ ನಿರ್ದೇಶಕ ಜಿ ಕೃಷ್ಣ ಪ್ರಸಾದ್ ತಿಳಿಸಿದ್ದಾರೆ.

ಈ ಪ್ರಭೇದಗಳನ್ನು ರಬಿ ಬೆಳೆಯಾಗಿ ಬೆಳೆಸಿರುವುದಾಗಿ ಹೇಳಿದರು. ಗೋಧಿ ಮಳೆಗಾಲದ ನಂತರ ಬೆಳೆಯುವ ಸಮಶೀತೋಷ್ಣ ಬೆಳೆಯಾಗಿದ್ದು, ಇದಕ್ಕೆ ಹೆಚ್ಚಿನ ನೀರಿನ ಅಗತ್ಯವಿಲ್ಲ. ಈ ಎಲ್ಲಾ ಪ್ರಭೇದಗಳನ್ನು ನಾವು ಕರ್ನಾಟಕ, ಒಡಿಶಾ, ಗುಜರಾತ್, ಮಹಾರಾಷ್ಟ್ರ, ಪಂಜಾಬ್ ಮತ್ತು ಅಸ್ಸಾಂ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ತಂದಿದ್ದೇವೆ" ಎಂದು ಹಾದಿಮನಿ ಮಾಹಿತಿ ನೀಡಿದರು.

ಕೃಷಿ ಮಾಡುವ ಮೊದಲು ಪ್ಲಾಟ್‌ಗಳನ್ನು ವಿಂಗಡಿಸಿ ಸಂಖ್ಯೆಗಳನ್ನು ನೀಡಲಾಗಿದೆ. "ನಾವು ಬೆಳವಣಿಗೆ ಮತ್ತು ಇಳುವರಿಯನ್ನು ಅಧ್ಯಯನ ಮಾಡುತ್ತಿದ್ದೇವೆ, ಸ್ಥಳೀಯವಾಗಿ ಕೃಷಿ ಮಾಡಲು ಉತ್ತಮ ಪ್ರಭೇದಗಳನ್ನು ಕಂಡುಹಿಡಿಯಲು ಅವುಗಳನ್ನು ವರ್ಗೀಕರಿಸುತ್ತಿದ್ದೇವೆ. ಕೆಲವು ಪ್ರಕೃತಿಯಲ್ಲಿ ಬಹಳ ವಿಶಿಷ್ಟವಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ತಾವು ಬೆಳೆಸಿರುವ ಕಪ್ಪು ಗೋಧಿ ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ ಎಂದು ಹಾದಿಮನಿ ತಿಳಿಸಿದ್ದಾರೆ. ಈ ಪ್ಲಾಟ್‌ಗೆ ಭೇಟಿ ನೀಡಿದ ಹಿರಿಯ ಕೃಷಿ ವಿಜ್ಞಾನಿ ಕುಮಾರ್ ಲಮಾನಿ ಮಾತನಾಡಿ, ಹಾದಿಮನಿ ಅವರ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ವಿಜ್ಞಾನಿಗಳು ನೀರಾವರಿಗೆ ಅಗತ್ಯವಿರುವ ಬೆಳೆಯನ್ನು ಅಭಿವೃದ್ಧಿಪಡಿಸಿದ್ದಾರೆ, ಆದರೆ ಅಂತಹ ಬೆಳೆಗಳು ಜಾನುವಾರು ಮೇವಿಗೆ ಒಳ್ಳೆಯದಲ್ಲ, ಒಣಭೂಮಿಯ ಪ್ರಭೇದಗಳು ಮಾತ್ರ ಮಾನವ ಸೇವನೆ ಮತ್ತು ಜಾನುವಾರು ಮೇವಿಗೆ ಉತ್ತಮವಾಗಿವೆ ಅವರು ಹೇಳಿದರು.

ಕೆಲವು ಪ್ರಭೇದಗಳಿಗೆ ವಿಶಿಷ್ಟ ಇತಿಹಾಸವಿದೆ. ಉದಾಹರಣೆಗೆ, ಅಣ್ಣಿಗೇರಿ ಮತ್ತು ಸುತ್ತಮುತ್ತ ಬೆಳೆಯುವ ಅಮೃತ್ ಗೋಧಿಯು ಅಣ್ಣಿಗೆರೆ ದೇವಾಲಯದ ದೇವತೆಯಾದ ಅಮೃತೇಶ್ವರನಿಗೆ ಸಂಬಂಧಿಸಿದೆ. ಮತ್ತೊಂದು ವಿಧವಾದ ಬಿಜಿಗ, ಸವದತ್ತಿಯ ರೈತರಲ್ಲಿ ಜನಪ್ರಿಯವಾಗಿದೆ. ಕೆಲವು ಪ್ರಭೇದಗಳು ಗುಜರಾತ್‌ನಂತಹ ಸ್ಥಳಗಳಿಂದ ಬಂದಿವೆ ಎಂದು ತಿಳಿಸಿದ್ದಾರೆ.

ಪೈಗಂಬರಿ ಒಂದು ದುಂಡಗಿನ ಧಾನ್ಯದ ವಿಧವಾಗಿದ್ದು, ಇದನ್ನು ಸಿಂಧೂ ಕಣಿವೆ ನಾಗರಿಕತೆಯ ಉತ್ತುಂಗದಲ್ಲಿದ್ದಾಗ ವ್ಯಾಪಕವಾಗಿ ಬೆಳೆಸಲಾಗುತ್ತಿತ್ತು. ಇದನ್ನು ಗುಜರಾತ್ ಮೂಲದ ಕೃಷಿ ತಜ್ಞ ಪದಮ್ ಜೈನ್ ಕಂಡುಹಿಡಿದರು. ಅವರು ನಮ್ಮೊಂದಿಗೆ ಈ ಪ್ರಬೇಧವನ್ನ ಹಂಚಿಕೊಂಡರು. ಅಲ್ಲಿನ ಹವಾಮಾನದಿಂದಾಗಿ ಇದು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ಕೃಷಿಗೆ ಸೂಕ್ತವಾಗಿದೆ.

ಪೈಗಂಬರಿ ಕೃಷಿ ಹೆಚ್ಚಾಗಿ ವಾಯುವ್ಯ ಭಾರತದಲ್ಲಿ ಅಂದರೆ ಸಿಂಧ್, ಪಂಜಾಬ್ ಮತ್ತು ಸೌರಾಷ್ಟ್ರ ಗಳಲ್ಲಿ ಕೇಂದ್ರೀಕೃತವಾಗಿತ್ತು. ಕಪ್ಪು ಮತ್ತು ಕೆಂಪು ಬಣ್ಣಗಳಲ್ಲಿ ಗೋಧಿ ಲಭ್ಯವಿದೆ" ಎಂದು ಪ್ರಸಾದ್ ಹೇಳಿದರು. ಸರ್ಬತಿ, ಮುಂಡಾ ಪಿಸಾ, ಗೋದಾವರಿ, ಡಬ್ಲಿ, ಕೆಂಪು ಅಮೃತ್, ಬರ್ನಲ್ಲಾ, ಗರೂರ್, ಜೇವ್, ಸ್ವರ್ಣ ಮತ್ತು ಕುದ್ರತ್ ತಳಿಯ ಗೋಧಿಗಳು ಕೂಡ ಹಾದಿಮನಿಯವರ ಜಮೀನಿನಲ್ಲಿ ಕಂಡು ಬರುತ್ತವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.