Farm bill

ಕೃಷಿ ಸಂಬಂಧಿತ ಮಸೂದೆಗೆ ವಿರೋಧ: ಮೈಸೂರು ಬ್ಯಾಂಕ್ ಸರ್ಕಲ್ ಸೇರಿ ಬೆಂಗಳೂರಿನ ವಿವಿಧೆಡೆ ಪ್ರತಿಭಟನೆ
ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿದಂತೆ ಕೃಷಿಗೆ ಸಂಬಂಧಿಸಿದ ಮಸೂದೆಗಳನ್ನು ವಿರೋಧಿಸಿ 35ಕ್ಕೂ ಅಧಿಕ ರೈತ ಸಂಘಟನೆಗಳು ಶುಕ್ರವಾರ ರಾಜ್ಯಾದ್ಯಂತ ಹೆದ್ದಾರಿ ಬಂದ್ ನಡೆಸಿ ಪ್ರತಿಭಟನೆ ನಡೆಸುತ್ತಿದ್ದು, ಬೆಂಗಳೂರಿನ ಹೊರವಲಯ ಮತ್ತು ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ರೈತರು ರಸ್ತೆ ತಡೆ ನಡೆಸುತ್ತಿದ್ದಾರೆ.

ನೂತನ ಕೃಷಿ ಮಸೂದೆ ಬಗ್ಗೆ ರೈತರನ್ನು ಹಾದಿ ತಪ್ಪಿಸಲಾಗುತ್ತಿದೆ: ಪ್ರಧಾನಿ ಮೋದಿ ಆರೋಪ
ಹಿಂದಿನ ಸರ್ಕಾರಗಳು ತಂದಿದ್ದ ಹಲವು ಭರವಸೆಗಳು, ಕಾನೂನುಗಳು ಜಟಿಲವಾಗಿದ್ದವು, ರೈತರಿಗೆ ಅರ್ಥವಾಗುತ್ತಿರಲಿಲ್ಲ. ಆದರೆ ನಮ್ಮ ಎನ್ ಡಿಎ ಸರ್ಕಾರ ಸತತವಾಗಿ ಪರಿಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದು ರೈತರ ಕಲ್ಯಾಣಕ್ಕಾಗಿ ಹಲವು ಸುಧಾರಣೆಗಳನ್ನು ತರುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಪಂಜಾಬ್: ಕೃಷಿ ಮಸೂದೆ ವಿರೋಧಿಸಿ ಮೂರು ದಿನಗಳ ರೈಲು ತಡೆ ಪ್ರತಿಭಟನೆ ಆರಂಭ, ರೈಲು ಸಂಚಾರ ಸೇವೆ ಸ್ಥಗಿತ
ಕೇಂದ್ರ ಸರ್ಕಾರದ ಮೂರು ಕೃಷಿ ಮಸೂದೆಯನ್ನು ವಿರೋಧಿಸಿ ಪಂಜಾಬ್ ರಾಜ್ಯದಲ್ಲಿ ರೈತರು ಮೂರು ದಿನಗಳ ರೈಲು ತಡೆ ಪ್ರತಿಭಟನೆಯನ್ನು ಗುರುವಾರ ಆರಂಭಿಸಿದ್ದು, ಈ ಹಿನ್ನೆಲೆಯಲ್ಲಿ ಫೆರೋಜ್ ಪುರ್ ರೈಲ್ವೆ ವಿಭಾಗ ವಿಶೇಷ ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ.

ಶುಕ್ರವಾರ ಕರ್ನಾಟಕ ಬಂದ್ ಇಲ್ಲ, ಕೇವಲ ಹೆದ್ದಾರಿ ಮಾತ್ರ ಬಂದ್
ಕರ್ನಾಟಕ ಬಂದ್ ಇರುವುದಿಲ್ಲ ಆದರೆ , ಹೆದ್ದಾರಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ರೈತ ಮುಖಂಡ ಕರುಬೂರು ಶಾಂತಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಸಂಸದರ ವರ್ತನೆಯಿಂದ ತೀವ್ರ ಅಸಮಾಧಾನ, ನಿದ್ರೆ ಮಾಡಿಲ್ಲ; ಒಂದು ದಿನದ ಉಪವಾಸ ಸತ್ಯಾಗ್ರಹ ಕುಳಿತ ಉಪಸಭಾಪತಿ
ಕೃಷಿ ಮಸೂದೆ ಮಂಡನೆ ವೇಳೆ ಗದ್ದಲ ಮಾಡಿದ್ದ ರಾಜ್ಯಸಭೆ ಸದಸ್ಯರ ವರ್ತನೆ ಕುರಿತಂತೆ ಉಪಸಭಾಪತಿ ಹರಿವಂಶ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಂಸದರ ವರ್ತನೆ ವಿರುದ್ಧ ಸಂಸತ್ ಆವರಣದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಕುಳಿತಿದ್ದಾರೆ.

ಧರಣಿ ಅಂತ್ಯಗೊಳಿಸಿ ವಿಪಕ್ಷಗಳ ಅಧಿವೇಶನ ಬಹಿಷ್ಕಾರ ಪ್ರತಿಭಟನೆಗೆ ಕೈ ಜೋಡಿಸಿದ ಅಮಾನತುಗೊಂಡ ರಾಜ್ಯಸಭಾ ಸದಸ್ಯರು
ರಾಜ್ಯಸಭೆಯಲ್ಲಿ ಗದ್ದಲ ವೇರ್ಪಡಿಸಿ ಅಮಾನತುಗೊಂಡು ಧರಣಿ ನಡೆಸುತ್ತಿದ್ದ 8 ರಾಜ್ಯಸಭಾ ಸದಸ್ಯರು ತಮ್ಮ ಧರಣಿ ಅಂತ್ಯಗೊಳಿಸಿದ್ದು, ವಿಪಕ್ಷ ನಾಯಕರು ಆರಂಭಿಸಿರುವ ಅಧಿವೇಶನ ಬಹಿಷ್ಕಾರ ಪ್ರತಿಭಟನೆಗೆ ಕೈ ಜೋಡಿಸಿದ್ದಾರೆ.

ಅಮಾನತುಗೊಂಡ ರಾಜ್ಯಸಭೆ ಸದಸ್ಯರಿಂದ ಅಹೋರಾತ್ರಿ ಧರಣಿ, ಹಲವು ವಿಪಕ್ಷ ನಾಯಕರ ಬೆಂಬಲ
ಕೃಷಿ ಮಸೂದೆ ವಿರೋಧಿಸಿ ರಾಜ್ಯಸಭೆಯಲ್ಲಿ ಕೋಲಾಹಲ ಮಾಡಿ ಅಮಾನತು ಶಿಕ್ಷೆಗೊಳಪಟ್ಟಿರುವ 8 ರಾಜ್ಯಸಭೆ ಸದಸ್ಯರು ಸಂಸತ್ ಆವರಣದಲ್ಲಿ ಆಹೋರಾತ್ರಿ ಧರಣಿ ನಡೆಸಿದ್ದಾರೆ.

ಉಪ ಸಭಾಪತಿಗಳ ವಿರುದ್ಧದ ಅವಿಶ್ವಾಸ ನಿರ್ಣಯ ನಿಯಮಗಳಿಗೆ ವಿರುದ್ಧ, ಅಶಿಸ್ತಿನ ವರ್ತನೆ ಖಂಡನೀಯ: ವೆಂಕೆಯ್ಯ ನಾಯ್ಡು
ಕೃಷಿ ಮಸೂದೆ ವಿಚಾರವಾಗಿ ವಿಪಶ್ರಗಳು ಸಲ್ಲಿಸಿದ್ದ ಉಪ ಸಭಾಪತಿಗಳ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ರಾಜ್ಯಸಭಾ ಸ್ಪೀಕರ್ ವೆಂಕೆಯ್ಯ ನಾಯ್ಡು ಅವರು ತಿರಸ್ಕರಿಸಿದ್ದು, ಸದಸ್ಯರ ಅಶಿಸ್ತಿನ ವರ್ತನೆ ದುರದೃಷ್ಟಕರ, ಖಂಡನೀಯ ಎಂದು ಹೇಳಿದ್ದಾರೆ.

ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆ, ಕೃಷಿ ಉತ್ಪನ್ನಗಳ ಖರೀದಿ ಪ್ರಕ್ರಿಯೆ ಮುಂದುವರಿಯಲಿದೆ: ರೈತರಿಗೆ ಪ್ರಧಾನಿ ಮೋದಿ ಭರವಸೆ
ಕೃಷಿ ಬೆಳೆಗಳ ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆ, ಕೃಷಿ ಉತ್ಪನ್ನಗಳ ಖರೀದಿ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಪ್ರಧಾನಿ ಮೋದಿ ರೈತರಿಗೆ ಭರವಸೆ ನೀಡಿದ್ದಾರೆ.

