exam

ಕೊರೋನಾ ಆತಂಕದ ನಡುವೆಯೇ ಇಂದಿನಿಂದ ಎಸ್ಎಸ್ಎಲ್'ಸಿ ಪರೀಕ್ಷೆ: 8.5 ಲಕ್ಷ ವಿದ್ಯಾರ್ಥಿಗಳು ಭಾಗಿ
ಕೊರೋನಾ ಆತಂಕದ ನಡುವಲ್ಲೂ ರಾಜ್ಯಾದ್ಯಂತ ಎಸ್ಎಸ್ಎಲ್'ಸಿ ಪರೀಕ್ಷೆ ಗುರುವಾರದಿಂದ ಆರಂಭವಾಗುತ್ತಿದ್ದು, ಲಾಕ್'ಡೌನ್ ಕಾರಣದಿಂದ ಮುಂದೂಡಲಾಗಿದ್ದ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಲು ಸರ್ಕಾರ ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿದೆ.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಪದವಿಪೂರ್ವ ಪರೀಕ್ಷೆ ವೇಳಾ ಪಟ್ಟಿ ಪರಿಷ್ಕರಣೆ ಸಾಧ್ಯತೆ
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್) ವೇಳಾಪಟ್ಟಿ ಪದವಿಪೂರ್ವ ವಿದ್ಯಾರ್ಥಿಗಳ ಪರೀಕ್ಷೆಯನ್ನು ಪರಿಷ್ಕರಿಸಬಹುದಾಗಿದೆ. ಸರ್ಕಾರದ ಪರಿಷ್ಕೃತ ಲಾಕ್‌ಡೌನ್ ಮಾನದಂಡಗಳಿಗೆ ಒಳಪಟ್ಟಿರುತ್ತದೆ, ಅದು ಜೂನ್ 30 ರೊಳಗೆ ಅಂತಿಮ ನಿರ್ಧಾರ ಹೊರಬೀಳಲಿದೆ.

ಬೆಂಗಳೂರು: ವರ್ಷದಿಂದ ಫಲಿತಾಂಶಕ್ಕಾಗಿ ಕಾಯುತ್ತಿರುವ 20 ಸಾವಿರ ಉದ್ಯೋಕಾಂಕ್ಷಿಗಳ ಬದುಕು ಅತಂತ್ರ
ಒಂದು ವರ್ಷದ ಹಿಂದೆ ಸರಿಯಾಗಿ 20 ಸಾವಿರ ಅಭ್ಯರ್ಥಿಗಳು ಲೋಕೋಪಯೋಗಿ ಇಲಾಖೆಯ ಎಂಜಿನೀಯರಿಂಗ್ ಹುದ್ದೆಗಳ ನೇಮಕಾತಿಗಾಗಿ ಕೆಪಿಎಸ್ ಸಿ ಮೂಲಕ ಪರೀಕ್ಷೆ ಬರೆದಿದ್ದರು. ಆದರೆ ಸದ್ಯ ಕಾನೂನಾತ್ಮಕ ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಅಡ್ವೋಕೇಟ್ ಜನರಲ್ ಅವರ ಸಲಹೆ ಕೇಳಿದೆ.

ರಾಜ್ಯದ ಎಸ್ಎಸ್ಎಲ್ ಸಿ ಪರೀಕ್ಷೆ ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಣೆ
ರಾಜ್ಯದಲ್ಲಿ ಜೂ 25ರಿಂದ ನಿಗದಿಯಾಗಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

10, 12 ನೇ ತರಗತಿ ವಿದ್ಯಾರ್ಥಿಗಳು ಬಾಕಿ ಇರುವ ಬೋರ್ಡ್ ಪರೀಕ್ಷೆ ಬಿಟ್ಟುಬಿಡಬಹುದು, ಆದರೆ...: ಸಿಐಸಿಎಸ್ಇ
ಸಿಐಸಿಎಸ್ಇ ಮಂಡಳಿಯ 10 ಮತ್ತು 12 ನೇ ತರಗತಿ ವಿದ್ಯಾರ್ಥಿಗಳು ಬಾಕಿ ಇರುವ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗದಿರಲು ನಿರ್ಧರಿಸಬಹುದು, ಆದರೆ ಮಂಡಳಿಯ ಪೂರ್ವ ಪರೀಕ್ಷೆಗಳಲ್ಲಿ ಅಥವಾ ಆಂತರಿಕ ಮೌಲ್ಯಮಾಪನದಲ್ಲಿ ಅವರ ಸಾಧನೆಗೆ ಅನುಗುಣವಾಗಿ ಅಂಕಗಳನ್ನು ನೀಡಬಹುದು ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಎಸ್ಎಸ್'ಎಲ್'ಸಿ ಪೂರ್ವ ಸಿದ್ಧತಾ ಸಭೆ: ಶಿಕ್ಷಕರು, ಸಿಬ್ಬಂದಿಗಳಲ್ಲಿ ನೈತಿಕ ಸ್ಥೈರ್ಯ ಹೆಚ್ಚಿಸಿದ ಸಚಿವ ಸುರೇಶ್ ಕುಮಾರ್
ಜೂನ್.25 ರಂದು ಎಸ್ಎಸ್ಎಲ್'ಸಿ ಪರೀಕ್ಷೆ ಆರಂಭಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಪರೀಕ್ಷೆ ಕುರಿತು ಪೂರ್ವ ಸಿದ್ಧತಾ ಸಭೆ ನಡೆಸಿದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಸಭೆಯಲ್ಲಿ ಶಿಕ್ಷಕರು ಹಾಗೂ ಸಿಬ್ಬಂದಿಗಳಲ್ಲಿ ನೈತಿಕ ಸ್ಥೈರ್ಯ ಹೆಚ್ಚಿಸಿದರು.

ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ: ಪರೀಕ್ಷಾ ಕೇಂದ್ರ ಬದಲಿಸಿದ 17,000 ವಿದ್ಯಾರ್ಥಿಗಳು
ಇದೇ ಜೂನ್ 18 ರಂದು ಬಾಕಿ ಇರುವ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಕೊರೋನಾ ಭೀತಿಯಿಂದಾಗಿ ಸುಮಾರು 17,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ತಮ್ಮ ಪರೀಕ್ಷಾ ಕೇಂದ್ರಗಳನ್ನು ಬದಲಿಸಿಕೊಂಡಿದ್ದಾರೆ.

ಸಾಧ್ಯವಾದಷ್ಟು ಬೇಗ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ನಡೆಸಲು ಸಿದ್ಧ: ಮಾನವ ಸಂಪನ್ಮೂಲ ಸಚಿವಾಲಯ
ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಬಾಕಿ ಉಳಿದಿರುವ 10 ಮತ್ತು 12ನೇ ತರಗತಿಯ 29 ಪ್ರಮುಖ ವಿಷಯಗಳಿಗೆ ಪರೀಕ್ಷೆ ನಡೆಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಸಿದ್ದತೆ ಮಾಡಿಕೊಂಡಿದೆ.

ಕೊರೋನಾ ಎಫೆಕ್ಟ್: ಸಂಕಷ್ಟದಲ್ಲಿರುವ ನೀಟ್, ಕೆ-ಸೆಟ್ ವಿದ್ಯಾರ್ಥಿಗಳ ನೆರವಿಗೆ ಬಂದ ಸರ್ಕಾರ; ಆ್ಯಪ್, ವೆಬ್'ಸೈಟ್ ಮೂಲಕ ತರಬೇತಿ
ಕೊರೋನಾ ವೈರಸ್ ಪರಿಣಾಮ ವಿದ್ಯಾರ್ಥಿಗಳು ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಪ್ರಮುಖವಾಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಂತೂ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ನೀಟ್ ಹಾಗೂ ಕೆ-ಸೆಟ್ ಪರೀಕ್ಷಾ ಆಕಾಂಕ್ಷಿಗಳ ನೆರವಿಗೆ ಬಂದಿರುವ ರಾಜ್ಯ ಸರ್ಕಾರ, ಆ್ಯಪ್ ಹಾಗೂ ವೆಬ್'ಸೈಟ್ ಗಳ ಮೂಲಕ ತರಬೇತಿ ನೀಡಲಿದೆ.

