ಎಸ್ಎಸ್'ಎಲ್'ಸಿ ಪೂರ್ವ ಸಿದ್ಧತಾ ಸಭೆ: ಶಿಕ್ಷಕರು, ಸಿಬ್ಬಂದಿಗಳಲ್ಲಿ ನೈತಿಕ ಸ್ಥೈರ್ಯ ಹೆಚ್ಚಿಸಿದ ಸಚಿವ ಸುರೇಶ್ ಕುಮಾರ್
ಜೂನ್.25 ರಂದು ಎಸ್ಎಸ್ಎಲ್'ಸಿ ಪರೀಕ್ಷೆ ಆರಂಭಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಪರೀಕ್ಷೆ ಕುರಿತು ಪೂರ್ವ ಸಿದ್ಧತಾ ಸಭೆ ನಡೆಸಿದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಸಭೆಯಲ್ಲಿ ಶಿಕ್ಷಕರು ಹಾಗೂ ಸಿಬ್ಬಂದಿಗಳಲ್ಲಿ ನೈತಿಕ ಸ್ಥೈರ್ಯ ಹೆಚ್ಚಿಸಿದರು.

ಕಲಬುರಗಿ: ಜೂನ್.25 ರಂದು ಎಸ್ಎಸ್ಎಲ್'ಸಿ ಪರೀಕ್ಷೆ ಆರಂಭಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಪರೀಕ್ಷೆ ಕುರಿತು ಪೂರ್ವ ಸಿದ್ಧತಾ ಸಭೆ ನಡೆಸಿದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಸಭೆಯಲ್ಲಿ ಶಿಕ್ಷಕರು ಹಾಗೂ ಸಿಬ್ಬಂದಿಗಳಲ್ಲಿ ನೈತಿಕ ಸ್ಥೈರ್ಯ ಹೆಚ್ಚಿಸಿದರು.
ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಗಳಲ್ಲಿ ಎಸ್ಎಸ್ಎಲ್'ಸಿ ಪೂರ್ವ ಸಿದ್ಧತಾ ಸಭೆ ನಡೆಸಿದ ಅವರು, ಕೊರೋನಾ ಸಂದರ್ಭದಲ್ಲಿ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷೆ ವೇಳೆ ಯಾವುದೇ ರೀತಿಯ ಲೋಕಗಳಾಗಂತೆ ನಾವೆಲ್ಲರೂ ಪರೀಕ್ಷಾ ವಾರಿಯರ್ಸ್ ರೀತಿ ಕೆಲಸ ಮಾಡಬೇಕೆಂದು ಸೂಚನೆ ನೀಡಿದ್ದಾರೆ.
ಈ ಸಮಯದಲ್ಲಿ ಕರ್ತವ್ಯನಿರ್ವಹಿಸುವುದು ದೊಡ್ಡ ಸವಾಲಾಗಿದೆ. ಅಲ್ಲದೆ, ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸಲು ಇದೊಂದು ಅವಕಾಶ ಕೂಡ ಹೌದು. ಪರೀಕ್ಷೆಗೆ ಬರುವ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿ. ಮಕ್ಕಳು ವಿಶ್ವಾಸದಿಂದ ಪರೀಕ್ಷೆ ಬರೆಯುವುದನ್ನು ನೋಡಿ. ಪರೀಕ್ಷೆಯು ಟಿವಿ ಚಾನೆಲ್ ಗಳ ಬ್ರೇಕಿಂಗ್ ಸುದ್ದಿಯಾಗದಂತೆ ನೋಡಿಕೊಳ್ಳುವುದು ಡಿಡಿಪಿಐ ಹಾಗೂ ಬಿಇಒಗಳ ಕರ್ತವ್ಯವಾಗಿದೆ. ಇಂತಹ ಸುದ್ದಿಗಳು ವಿದ್ಯಾರ್ಥಿಗಳನ್ನು ಕುಗ್ಗಿಸುತ್ತದೆ. ಪರೀಕ್ಷೆಗೂ ಮುನ್ನವೇ ಹಾಲ್ ಟಿಕೆಟ್ ವಿದ್ಯಾರ್ಥಿಗಳ ಕೈಸೇರಬೇಕು. ಪರೀಕ್ಷಾ ವೇಳಾಪಟ್ಟಿಗಳ ಕುರಿತು ವಿದ್ಯಾರ್ಥಿಗಳಿಂದ ಯಾವುದೇ ದೂರುಗಳೂ ಬರಬಾರದು.
ಪರೀಕ್ಷೆ ಆರಂಭಗೊಳ್ಳುವ ಎರಡು ದಿನಗಳಿಗೂ ಮುನ್ನವೇ ಪ್ರತೀಯೊಬ್ಬ ವಿದ್ಯಾರ್ಥಿಗೆ 2 ಮಾಸ್ಕ್ ಗಲನ್ನು ನೀಡಿ.ೆ ಇದರಿಂದ ಅವರಿಗೆ ಮಾಸ್ಕ್ ಕುರಿತು ಯಾವುದೇ ಸಮಸ್ಯೆಗಳಾಗಬಾಹರದು. ಪರೀಕ್ಷಾ ಕೊಠಡಿಗೆ ಮಕ್ಕಳು ಬೆಳಿಗ್ಗೆ 9 ಗಂಟೆಗೆ ಹಾಜರಿರಬೇಕು. ಇದರಿಂದ ಅವರ ಆರೋಗ್ಯ ಪರಿಶೀಲನೆ ಮಾಡಲು, ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳಲು ಕಾಲಾವಕಾಶ ಸಿಕ್ಕಂತಾಗುತ್ತದೆ. ಕೊಠಡಿಯಲ್ಲಿರುವ ಸೂಪರ್ ವೈಸರ್ ಗಳೂ ಕೂಡ ಕೈಗಳಿಗೆ ಕಡ್ಡಾಯವಾಗಿ ಕವಚಗಳನ್ನು ಧರಿಸಿರಬೇಕು.
ಮಕ್ಕಳೇ ಅವರವರ ಮನೆಗಳಿಂಗ ನೀರಿನ ಬಾಟಲಿಗಳನ್ನು ತರಬೇಕು. ಅಲ್ಲದೆ, ಪರೀಕ್ಷಾ ಕೇಂದ್ರಗಳಲ್ಲಿ ಶಾಲೆಯ ಆಡಳಿತ ಮಂಡಳಿ ಕೂಡ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿರಬೇಕು. ಪರೀಕ್ಷಾ ಕೊಠಡಿಯಲ್ಲಿ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲನೆ ಮಾಡಬೇಕು. ಪ್ರತೀ ವಿದ್ಯಾರ್ಥಿಗಳ ನಡುವೆ 3 ಅಡಿಗಳ ಅಂತರವಿರಬೇಕು. ಪ್ರತೀ ಕೊಠಡಿಯಲ್ಲಿ 20-25 ವಿದ್ಯಾರ್ಥಿಗಳಷ್ಟೇ ಪರೀಕ್ಷೆ ಬರೆಯಬೇಕು. ದಿನಕ್ಕೆರಡು ಬಾರಿ ಶಾಲೆಗಳ ಶೌಚಾಲಯಗಳನ್ನು ಸ್ವಚ್ಛಗೊಳಿಸಬೇಕು. ಜೂನ್ 10-20ರವರೆಗೂ ಪರೀಕ್ಷೆ ನಡೆಯಲಿದ್ದು, ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


