England

ರವಿಶಾಸ್ತ್ರಿ ನಂತರ ಭಾರತದ ಇಬ್ಬರು ಕೋಚ್ಗಳಿಗೆ ಕೊರೋನಾ ದೃಢ; ಪ್ರಕರಣ ಹೆಚ್ಚಾದರೆ 5ನೇ ಟೆಸ್ಟ್ ಅನುಮಾನ!
ಟೀಂ ಇಂಡಿಯಾದ ಮುಖ್ಯ ಕೋಚ್ ರವಿಶಾಸ್ತ್ರಿಗೆ ಕೊರೋನಾ ದೃಢಪಟ್ಟ ಬೆನ್ನಲ್ಲೇ ಭಾರತದ ಬೌಲಿಂಗ್ ತರಬೇತುದಾರ ಭರತ್ ಅರುಣ್ ಮತ್ತು ಫೀಲ್ಡಿಂಗ್ ತರಬೇತುದಾರ ಆರ್. ಶ್ರೀಧರ್ ಗೆ ಕೊರೋನಾ ವಕ್ಕರಿಸಿದೆ.

4ನೇ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಜಯ, ಭಾರತಕ್ಕೆ 2-1 ಅಂತರ ಮುನ್ನಡೆ!
ರೋಹಿತ್ ಶರ್ಮಾರ ಭರ್ಜರಿ ಶತಕದ ನೆರವಿನೊಂದಿಗೆ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ.

4ನೇ ಟೆಸ್ಟ್: ಇಂಗ್ಲೆಂಡ್ ಗೆಲುವಿಗೆ 368 ರನ್ ಗುರಿ ನೀಡಿದ ಭಾರತ
ಭರವಸೆಯ ಆಟಗಾರರಾದ ರಿಷಭ್ ಪಂತ್(50) ಹಾಗೂ ಶಾರ್ದೂಲ್ ಠಾಕೂರ್(60) ಅವರು ಬಾರಿಸಿದ ಅರ್ಧಶತಕದ ಬಲದಿಂದ ಟೀಮ್ ಇಂಡಿಯಾ ನಾಲ್ಕನೇ ಟೆಸ್ಟ್ ಗೆಲುವಿಗೆ ಇಂಗ್ಲೆಂಡ್ ತಂಡಕ್ಕೆ 368 ರನ್ ಗಳ ಗುರಿ ನೀಡಿದೆ.

4ನೇ ಟೆಸ್ಟ್: ರೋಹಿತ್ 127, ಪೂಜಾರ 61, ಭಾರತಕ್ಕೆ 171 ಇನ್ಸಿಂಗ್ಸ್ ಮುನ್ನಡೆ
ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ(127) ಹಾಗೂ ಚೇತೇಶ್ವರ್ ಪೂಜಾರ(61) ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಟೀಮ್ ಇಂಡಿಯಾ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ವಿರುದ್ಧ ದಿನದ ಗೌರವ ಸಾಧಿಸಿದೆ.

ಕ್ರಿಕೆಟ್: ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾಗೆ ಭಾರಿ ಆಘಾತ; ರವೀಂದ್ರ ಜಡೇಜಾಗೆ ಗಾಯ!
ಲೀಡ್ಸ್ ನಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದ ಸೋಲಿನ ಆಘಾತದಲ್ಲಿರುವ ಟೀಂ ಇಂಡಿಯಾಗೆ ಮತ್ತೊಂದು ಮರ್ಮಾಘಾತ ಎದುರಾಗಿದ್ದು, ತಂಡದ ಆಲ್ ರೌಂಡರ್ ರವೀಂದ್ರ ಜಡೇಜಾ ಗಾಯದ ಸಮಸ್ಯೆಯಿಂದಾಗಿ ಆಸ್ರತ್ರೆಗೆ ದೌಡಾಯಿಸಿದ್ದಾರೆ.

3ನೇ ಟೆಸ್ಟ್: ಇತಿಹಾಸ ನಿರ್ಮಿಸಿದ ಆಂಡರ್ಸನ್, ಈ ಸಾಧನೆ ಮಾಡಿದ ಏಕೈಕ ಬೌಲರ್
ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಅಜಿಂಕ್ಯ ರಹಾನೆ ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ನ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ ಇತಿಹಾಸ ನಿರ್ಮಿಸಿದ್ದಾರೆ.

3ನೇ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಇನ್ನಿಂಗ್ಸ್ ಮತ್ತು 76 ರನ್ ಗಳ ಹೀನಾಯ ಸೋಲು
ಮತ್ತೆ ಟೀಂ ಇಂಡಿಯಾ ಮಧ್ಯಮ ಕ್ರಮಾಂಕ ಕೈ ಕೊಟ್ಟ ಹಿನ್ನಲೆಯಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 76 ರನ್ ಗಳ ಹೀನಾಯ ಸೋಲು ಕಂಡಿದೆ.

3ನೇ ಟೆಸ್ಟ್: ಭಾರತದ ವಿರುದ್ಧ ಭಾರೀ ಇನ್ನಿಂಗ್ಸ್ ಮುನ್ನಡೆ ಸಾಧಿಸಿದ ಇಂಗ್ಲೆಂಡ್
ನಾಯಕ ಜೋ ರೂಟ್ (121 ರನ್) ಇವರ ಭರ್ಜರಿ ಶತಕದ ನೆರವಿನಿಂದ ಇಂಗ್ಲೆಂಡ್ ಇಲ್ಲಿ ನಡೆದಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತದ ವಿರುದ್ಧ ಭರ್ಜರಿ ಮುನ್ನಡೆ ಸಾಧಿಸಿದೆ.

3ನೇ ಟೆಸ್ಟ್: ಕೊಹ್ಲಿಯನ್ನು ಅಣುಕಿಸುವಂತೆ ಸಂಭ್ರಮಿಸಿದ ಜೇಮ್ಸ್ ಆಂಡರ್ಸನ್, ವಿಡಿಯೋ ವೈರಲ್!
ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ ಜೇಮ್ಸ್ ಆಂಡರ್ಸನ್ ಕೊಹ್ಲಿ ಸಂಭ್ರಮಿಸಿದ್ದಂತೆಯೇ ಸಂಭ್ರಮಿಸಿ ಅಣುಕಿಸಿರುವ ವಿಡಿಯೋ ವೈರಲ್ ಆಗಿದೆ.

