Economic Crisis

ಶ್ರೀಲಂಕಾ ಅಧ್ಯಕ್ಷ ಗೋಟಬಯಾ ರಾಜಪಕ್ಸ ಕುಟುಂಬ ಸಮೇತ ಮಾಲ್ಡೀವ್ಸ್ ಗೆ ಪರಾರಿ!
ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾದ ಜನರ ಆಕ್ರೋಶಕ್ಕೆ ತುತ್ತಾಗಿರುವ ಅಧ್ಯಕ್ಷ ಗೊಟಬಯ ರಾಜಪಕ್ಸ, ಬುಧವಾರ ಮುಂಜಾನೆ ಕುಟುಂಬ ಸಮೇತ ದೇಶ ಬಿಟ್ಟು ಮಾಲ್ಡೀವ್ಸ್‌ಗೆ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ವಿದೇಶಕ್ಕೆ ಪರಾರಿ ಯತ್ನ: ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿ ಜೊತೆ ಗಲಾಟೆ; ಗೋಟಬಯ, ಮಾಜಿ ಸಚಿವ ಬೆಸಿಲ್ ಗೆ ಫ್ಲೈಟ್ ಮಿಸ್
ಈ ಹಿಂದೆ ರಾಜಿನಾಮೆ ಘೋಷಣೆ ಮಾಡಿದ್ದ ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸೆಗೆ ವಿಮಾನ ನಿಲ್ದಾಣದಲ್ಲಿ ಮತ್ತೆ ತೀವ್ರ ಮುಖಭಂಗವಾಗಿದ್ದು, ಸಂಘರ್ಷ ಪೀಡಿತ ಶ್ರೀಲಂಕಾವನ್ನು ತೊರೆಯಲು ಯತ್ನಿಸಿದ್ದ ರಾಜಪಕ್ಸೆ ಅವರು ವಿಮಾನ ನಿಲ್ದಾಣದ ಸಿಬ್ಬಂದಿಗಳ ಜೊತೆಗಿನ ಗಲಾಟೆಯಿಂದಾಗಿ ಹಲವು ಬಾರಿ ವಿಮಾನಗಳನ್ನು ಮಿಸ್ ಮಾಡಿಕೊಂಡು ನಿಲ್ದಾಣದಲ್ಲೇ ಸಿಲುಕಿದ ಘಟನೆ ವರದಿಯಾಗಿದೆ.

ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ಕರೆನ್ಸಿ ನೋಟುಗಳ ಮುದ್ರಣದ ಯೋಜನೆ ಇಲ್ಲ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಕೋವಿಡ್-19 ಸಾಂಕ್ರಾಮಿಕದಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯಿಂದ ಹೊರಬರಲು ಕರೆನ್ಸಿ ನೋಟುಗಳ ಮುದ್ರಣ ಯೋಜನೆ ಪ್ರಸ್ತಾವನೆ ಇಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಗೆ ತಿಳಿಸಿದ್ದಾರೆ.

ಮಹಾರಾಷ್ಟ್ರ ಐತಿಹಾಸಿಕ ಆರ್ಥಿಕ ಬಿಕ್ಕಟ್ಟನ್ನುಎದುರಿಸುತ್ತಿದೆ: ಶರದ್ ಪವಾರ್
ಮಹಾರಾಷ್ಟ್ರ ಚಾರಿತ್ರಿಕ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ. ಆರ್ಥಿಕ ಬಿಕ್ಕಟ್ಟಿನ ಕಾರಣ ಸರ್ಕಾರಕ್ಕೆ ಪರ್ಯಾಯ ಆಯ್ಕೆಗಳಿಲ್ಲ ಆದರೆ, ಸಾಲ ಪಡೆಯುವುದರ ಮೂಲಕ ರಾಜ್ಯದಲ್ಲಿನ ಪ್ರವಾಹ ಪೀಡಿತ ಜನರಿಗೆ ನೆರವು ನೀಡಬೇಕು ಎಂದಿದ್ದಾರೆ.

ಆರ್ಥಿಕ ಬಿಕ್ಕಟ್ಟಿಗೆ ಸಹಕಾರಿಯಾಗಲಿದೆ ತಂಬಾಕು ಉತ್ಪನ್ನಗಳ ಮೇಲಿನ ಕೋವಿಡ್ ಸೆಸ್!
ಭಾರತ ಸರಕಾರವು ಘೋಷಿಸಿರುವ ವಿಶೇಷ ಆರ್ಥಿಕ ಪ್ಯಾಕೇಜ್‍ಗೆ ಪೂರಕವಾಗಿ, ತಂಬಾಕು ಉತ್ಪನ್ನಗಳ ಮೇಲೆ ಕೋವಿಡ್ ಸೆಸ್ ವಿಧಿಸುವಂತೆ ಸಾರ್ವಜನಿಕ ಆರೋಗ್ಯ ತಜ್ಞರು, ವೈದ್ಯರು ಹಾಗು ಅರ್ಥಶಾಸ್ತ್ರಜ್ಞರ ಸಹಕಾರದೊಂದಿಗೆ ಜಿ.ಎಸ್.ಟಿ. ಕೌನ್ಸಿಲ್‍ಗೆ ಕೋರಿದ್ದಾರೆ.

ಆಟೋ ಮೊಬೈಲ್; ವಾಹನ ನೋಂದಣಿಯಲ್ಲೂ ಗಣನೀಯ ಕುಸಿತ
ಆರ್ಥಿಕ ಹಿನ್ನಡೆಯಿಂದಾಗಿ ಭಾರತದ ಆಟೋ ಮೊಬೈಲ್ ಕ್ಷೇತ್ರ ಗಂಭೀರ ಸಮಸ್ಯೆ ಎದುರಿಸುತ್ತಿದ್ದು, ಇದಕ್ಕೆ ಇಂಬು ನೀಡುವಂತೆ ವಾಹನ ನೋಂದಣಿಯಲ್ಲೂ ಗಣನೀಯ ಪ್ರಮಾಣದ ಕುಸಿತ ಉಂಟಾಗಿದೆ ಎಂದು ತಿಳಿದುಬಂದಿದೆ.

ನಾಯಕತ್ವದ ಕೊರತೆಯಲ್ಲಿ ಕುಸಿದ ವೆನಿಜುಯೆಲಾ ಆರ್ಥಿಕತೆ!
ಜಗತ್ತಿನ ತೈಲ ದಾಹವನ್ನ ತೀರಿಸುತ್ತಾ ಬಂದ ವೆನಿಜುಯೆಲಾ ತನ್ನ ಜನರ ಆಹಾರ-ಬಟ್ಟೆ-ನೀರಿನಂತ ಅತ್ಯಂತ ಮೂಲಭೂತ ಬೇಡಿಕೆಗಳನ್ನ ಕೂಡ ತೀರಿಸಲಾಗದ ದೈನೇಸಿ ಸ್ಥಿತಿಗೆ ಬಂದದ್ದು ಬಾಹ್ಯ ಕಾರಣಗಳಿಗಿಂತ ತನ್ನ ನಾಯಕರಲ್ಲಿ ಇದ್ದ ದೂರದೃಷ್ಟಿಯ ಕೊರತೆಯಿಂದ ಎಂದು ಧಾರಾಳವಾಗಿ ಹೇಳಬಹದು.

ಆರ್ಥಿಕ ಸಂಕಷ್ಟ, ದಿವಾಳಿ ಅಂಚಿನಲ್ಲಿರುವ ಪಾಕ್ ಗೆ ಸೌದಿಯಿಂದ 6 ಬಿಲಿಯನ್ ಡಾಲರ್ ನೆರವು
ಆರ್ಥಿಕ ದೀವಾಳಿಯ ಅಂಚಿಗೆ ತಲುಪಿರುವ ಪಾಕಿಸ್ಥಾನಕ್ಕೆ ಸೌದಿ ಅರೇಬಿಯ ನೆರವು ನೀಡಲು ಮುಂದಾಗಿದ್ದು, ಪಾಕ್ ಸರ್ಕಾರಕ್ಕೆ 6 ಬಿಲಿಯನ್ ಡಾಲರ್ ಹಣದ ನೆರವು ನೀಡುವುದಾಗಿ ಹೇಳಿದೆ.

ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಿಸಿ ತಟ್ಟದ ಏಕೈಕ ದೇಶ ಭಾರತ: ಪ್ರಧಾನಿ ಮೋದಿ
ಜಗತ್ತನ್ನು ಕಾಡುತ್ತಿರುವ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಿಸಿ ತಟ್ಟದ ಏಕೈಕ ದೇಶ ಭಾರತ, ಇದಕ್ಕೆ ಮುಖ್ಯ ಕಾರಣ ಸರ್ಕಾರ ಜಾರಿಗೊಳಿಸುತ್ತಿರುವ ನೀತಿಗಳು ಎಂದು...

