drugs

ಡ್ರಗ್ಸ್ ದಂಧೆ: ಕಾನೂನು ಮತ್ತಷ್ಟು ಬಿಗಿಗೊಳಿಸಲು ಸರ್ಕಾರ ನಿರ್ಧಾರ
ರಾಜ್ಯದಲ್ಲಿ ಡ್ರಗ್ಸ್ ನಿಯಂತ್ರಣ ದೃಷ್ಟಿಯಿಂದ ಕಾನೂನನ್ನು ಮತ್ತಷ್ಟು ಬಿಗಿಗೊಳಿಸಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.

ಬೆಂಗಳೂರು ಪೊಲೀಸರ ಬೃಹತ್ ಕಾರ್ಯಾಚರಣೆ; ಸುರಂಗದೊಳಗೆ ಅಡಗಿಸಿಟ್ಟಿದ್ದ 1 ಟನ್ ಗೂ ಅಧಿಕ ಗಾಂಜಾ ವಶ; ನಾಲ್ವರ ಬಂಧನ
ಡ್ರಗ್ ವಿರುದ್ಧ ಬೆಂಗಳೂರು ನಗರ ಪೊಲೀಸರು ಸಮರ ಮುಂದುವರಿಸಿದ್ದು, ಕೇಂದ್ರ ವಿಭಾಗದ ಪೊಲೀಸರು ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ ಸುರಂಗದೊಳಗೆ ಅಡಗಿಸಿಟ್ಟಿದ್ದ 1 ಟನ್ 350 ಕೆ.ಜಿ, 300 ಗ್ರಾಂ ತೂಕದ ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿ, ನಾಲ್ವರು ಕುಖ್ಯಾತ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.

ಸ್ಯಾಂಡಲ್'ವುಡ್ ಡ್ರಗ್ಸ್ ದಂಧೆ: 30 ಮಂದಿ ಹೆಸರು ಬಾಯ್ಬಿಟ್ಟ ಸಂಜನಾ, ರಾಗಿಣಿ, ಮತ್ತೋರ್ವ ಪ್ರಮುಖ ನಟಿ ಮನೆ ಮೇಲೆ ಸಿಸಿಬಿ ದಾಳಿ ಸಾಧ್ಯತೆ!
ಮಾದಕ ವಸ್ತು ಮಾರಾಟ ಜಾಲದ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ವಿಚಾರಣೆ ವೇಳೆ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರು ರಾಜಕೀಯ ಗಣ್ಯರ ಪುತ್ರರು, ಹಿರಿಯ ಸರ್ಕಾರಿ ಅಧಿಕಾರಿಗಳು ಸೇರಿದಂತೆ 30 ಮಂದಿ ಪ್ರಮುಖರ ಹೆಸರನ್ನು ಬಹಿರಂಗಪಡಿಸಿದ್ದಾರೆಂದು ತಿಳಿದುಬಂದಿದೆ.

ಬೆಂಗಳೂರು: ಬೆಲ್ಜಿಯಂನಿಂದ ಬಂದ ಎಲೆಕ್ಟ್ರಿಕ್ ಮಸಾಜರ್ ನಲ್ಲಿ 1 ಕೋಟಿ ರೂ. ಮೌಲ್ಯದ ಡ್ರಗ್ಸ್ ಪತ್ತೆ
ಎಲೆಕ್ಟ್ರಿಕ್ ಮಸಾಜರ್ ಒಳಗೆ ಮಾದಕ ವಸ್ತುಗಳನ್ನಿಟ್ಟು ಸಾಗಿಸುತ್ತಿದ್ದ ಕೃತ್ಯವನ್ನು ಭೇದಿಸಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು 1ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನಟಿ ಕಂಗನಾ ಡ್ರಗ್ಸ್ ಸೇವಿಸುವಂತೆ ಒತ್ತಾಯಿಸಿದ್ದರು: ಯುವ ನಟನ ಹಳೆಯ ವಿಡಿಯೋ ವೈರಲ್
ನಟ ಸುಶಾಂತ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿ, ಬಾಲಿವುಡ್‌ನಲ್ಲಿ ಹಲವರಿಗೆ ಡ್ರಗ್ಸ್ ವ್ಯಸನ ಇರುವುದಾಗಿ ಆರೋಪ ಮಾಡಿದ್ದ ನಟಿ ಕಂಗನಾ ರನೌತ್ ಅವರನ್ನೇ ಡ್ರಗ್ಸ್ ಉರುಳು ಸುತ್ತಿಕೊಳ್ಳುವಂತೆ ಕಾಣುತ್ತಿದೆ.

ನಟಿ ಸಂಜನಾ ಗಲ್ರಾನಿ ಮೈಮೇಲೆ ಎಳೆದುಕೊಂಡ ವಿವಾದಗಳ ಸರಮಾಲೆ!
ಬಹುಭಾಷಾ ನಟಿ ಸಂಜನಾ ಗಲ್ರಾನಿ ಅವರು ಸದ್ಯ ಡ್ರಗ್ಸ್ ಪ್ರಕರಣ ಸಂಬಂಧ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಆದರೆ ಈ ಹಿಂದೆ ಹಲವು ಕಿರಿಕ್ ಪ್ರಕರಣಗಳಲ್ಲಿ ಸಂಜನಾ ಹೆಸರು ಕೇಳಿಬಂದಿತ್ತು.

ರಾಗಿಣಿ, ಆದಿತ್ಯ ಆಳ್ವ, ವಿರೇನ್ ಖನ್ನಾ: ಎತ್ತಣಿಂದೆತ್ತಣ ಸಂಬಂಧ? ಡ್ರಗ್ಸ್ ನಂಟಿನ ಮಾಹಿತಿ ಇಲ್ಲಿದೆ
ಮಾಜಿ ಸಚಿವ ದಿವಂಗತ ಜೀವರಾಜ್ ಆಳ್ವ ಅವರ ಪುತ್ರ ಆದಿತ್ಯ ಆಳ್ವ ಮತ್ತು ವಿರೇನ್ ಖನ್ನ ಹೆಸರು ಡ್ರಗ್ ಮಾಫಿಯಾದಲ್ಲಿ ಕೇಳಿ ಬಂದಿದ್ದು, ವಿಶೇಷವಾಗಿ ವಲಸಿಗರಿಗೆ ಪೂರೈಕೆ ಮಾಡುತ್ತಿರುವ ವಿಷಯ ಎಲ್ಲರಲ್ಲೂ ಆಘಾತ ಮೂಡಿಸಿದೆ.

ಪಾರ್ಟಿಗೆ ಹೋದಾಗಲೆಲ್ಲಾ ಡ್ರಗ್ಸ್ ಸೇವನೆ ಮಾಡುವಂತೆ ಸ್ನೇಹಿತ ಬಲವಂತ ಮಾಡುತ್ತಿದ್ದ: ವಿಚಾರಣೆ ವೇಳೆ ನಟಿ ರಾಗಿಣಿ ಹೇಳಿಕೆ
ಯಾವುದೇ ಪಾರ್ಟಿಗೆ ಹೋದರೂ ಸ್ನೇಹಿತ ರವಿಶಂಕರ್ ಡ್ರಗ್ಸ್ ಸೇವನೆ ಮಾಡುವಂತೆ ಬಲವಂತ ಮಾಡುತ್ತಿದ್ದ ಎಂದು ವಿಚಾರಣೆ ವೇಳೆ ನಟಿ ರಾಗಿಣಿ ದ್ವಿವೇದಿ ಹೇಳಿಕೆ ನೀಡಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ಕಳೆದ 10 ವರ್ಷಗಳ ಡ್ರಗ್ಸ್ ಕೇಸ್ ವಿವರ ನೀಡಿ: ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ
ರಾಜ್ಯದಲ್ಲಿ ಮಾದಕ ವಸ್ತು ನಿಯಂತ್ರಣ ಕಾಯ್ದೆ (ಎನ್'ಡಿಪಿಎಸ್) ಅಡಿ ಕಳೆದ 10 ವರ್ಷಗಳಿಂದ ತೆಗೆದುಕೊಂಡ ಕಾನೂನು ಕ್ರಮಗಳ ಬಗ್ಗೆ ಕೂಡಲೇ ಮಾಹಿತಿ ಒದಗಿಸುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದಿದ್ದಾರೆ.

