Drug Case

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ: ಸಿಸಿಬಿ ನೋಟಿಸ್ ಬಂದಿದೆ, ವಿಚಾರಣೆಗೆ ಹಾಜರಾಗುತ್ತೇನೆ- ನಿರೂಪಕಿ ಅನುಶ್ರೀ
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ನೋಟಿಸ್ ಬಗ್ಗೆ ಸ್ಪಷ್ಪಪಡಿಸಿರುವ ನಟಿ, ಜನಪ್ರಿಯ ನಿರೂಪಕಿ ಅನುಶ್ರೀ, ಇಂದು ಸಿಸಿಬಿ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.

ಸ್ಯಾಂಡಲ್'ವುಡ್ ಡ್ರಗ್ಸ್ ಪ್ರಕರಣ: ರಾಗಿಣಿ, ಸಂಜನಾ ಸೇರಿ ಐವರು ಆರೋಪಿಗಳ ವಿಚಾರಣೆಗೆ ಇಡಿಗೆ ಅನುಮತಿ
ಸ್ಯಾಂಡಲ್'ವುಡ್ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ ಸೇರಿದಂತೆ ಬಂಧನಕ್ಕೊಳಗಾಗಿರುವ ಐವರು ಆರೋಪಿಗಳ ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿದೆ.

ಸುಶಾಂತ್ ಗಾಗಿ ಡ್ರಗ್ಸ್ ಖರೀದಿಸಿದ್ದೆ: ತಪ್ಪೊಪ್ಪಿಕೊಂಡ ರಿಯಾ ಚಕ್ರವರ್ತಿ
ಲಿವಿಂಗ್ ಇನ್ ರಿಲೇಷನ್ ಶಿಪ್ ಪಾರ್ಟನರ್ ಸುಶಾಂತ್ ಸಿಂಗ್ ರಜಪೂತ್ ಗಾಗಿ ತಾನು ಡ್ರಗ್ಸ್ ಖರೀದಿಸಿದ್ದಾಗಿ ಜಾಮೀನು ಅರ್ಜಿಯಲ್ಲಿ ರಿಯಾ ಚಕ್ರವರ್ತಿ ತಪ್ಪೊಪ್ಪಿಕೊಂಡಿದ್ದಾರೆ.

ಡ್ರಗ್ಸ್ ಪ್ರಕರಣದ ತನಿಖೆ ಮಾಹಿತಿ ಸೋರಿಕೆ: ಸಿಸಿಬಿ ಅಧಿಕಾರಿ, ಮುಖ್ಯ ಪೇದೆ ಅಮಾನತು
ಚಂದನವನಕ್ಕೆ ಮಾದಕ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿನ ಮಾಹಿತಿಗಳನ್ನು ಆರೋಪಿಗಳಿಗೆ ಸೋರಿಕೆ ಮಾಡಿದ ಆರೋಪದಡಿ ಸಿಸಿಬಿ ಅಧಿಕಾರಿ ಹಾಗೂ ಮುಖ್ಯಪೇದೆಯನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

'ಬ್ರಹ್ಮಗಂಟು' ಗೀತಾಗೆ ಡ್ರಗ್ಸ್ ನಂಟು?; 'ಗಟ್ಟಿ ಮೇಳ' ವಿಕ್ರಾಂತ್ ವಿಚಾರಣೆ
ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ ಮಾಫಿಯಾ ತನಿಖೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಾಗಿ ಸಿಸಿಬಿ ಜೊತೆಗೆ ಆಂತರಿಕ ಭದ್ರತಾ ವಿಭಾಗ ಡ್ರಗ್ ಮಾಫಿಯಾದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಎಂದು ತಿಳಿದುಕೊಳ್ಳುವಲ್ಲಿ ಭಾರೀ ಪ್ರಯತ್ನ ಮಾಡುತ್ತಿದೆ.

ಬಾಲಿವುಡ್ ಡ್ಯಾನ್ಸರ್ ಕಿಶೋರ್ ಶೆಟ್ಟಿಯೊಂದಿಗೆ ಡ್ರಗ್ ಸೇವಿಸಿದ್ದ ಯುವತಿ ಬಂಧನ
ಮಾದಕ ಜಾಲದಡಿ ಬಾಲಿವುಡ್ ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಶೋರ್ ಜತೆಗೆ ಡ್ರಗ್ ಪಾರ್ಟಿ ಮಾಡಿದ್ದ ಯುವತಿಯೋರ್ವಳನ್ನು ಪೊಲೀಸರು ಬಂಧಿಸಿದ್ದಾರೆ.

ಡ್ರಗ್ಸ್ ಕೇಸ್: ಆದಿತ್ಯ ಆಳ್ವ ದೇಶ ಬಿಟ್ಟು ಹೋಗದಂತೆ ತಡೆಯಲು ಸಿಸಿಬಿ ಲುಕ್ ಔಟ್ ನೋಟಿಸ್
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಆರನೇ ಆರೋಪಿಯಾಗಿರುವ ಆದಿತ್ಯ ಆಳ್ವ ದೇಶ ಬಿಟ್ಟು ಪರಾರಿಯಾಗದಂತೆ ತಡೆಯಲು ಸಿಸಿಬಿ ಪೊಲೀಸರು ಲುಕ್ ಔಟ್ ನೋಟಿಸ್ ನೀಡಿದ್ದಾರೆ.

ಡ್ರಗ್ಸ್ ಪ್ರಕರಣ: 'ಲೂಸ್ ಮಾದ' ಯೋಗಿ, ಕ್ರಿಕೆಟರ್ ಅಯ್ಯಪ್ಪ ವಿಚಾರಣೆ ನಡೆಸಿದ ಆಂತರಿಕ ಭದ್ರತಾ ವಿಭಾಗ ಪೊಲೀಸರು
ಸ್ಯಾಂಡಲ್‌ವುಡ್ ಡ್ರಗ್ ಜಾಲದ ಸಂಬಂಧ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ನಟ ಲೂಸ್ ಮಾದ ಯೋಗಿ ಮತ್ತು ಕ್ರಿಕೆಟರ್ ಅಯ್ಯಪ್ಪ ಅವರನ್ನು ವಿಚಾರಣೆಗೆ ಒಳಪಡಿಸಿದೆ.

ಡ್ರಗ್ಸ್ ಪ್ರಕರಣ ತನಿಖೆಯಲ್ಲಿ ಹಸ್ತಕ್ಷೇಪ ಮಾಡಲ್ಲ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್
ಡ್ರಗ್ಸ್ ಪ್ರಕರಣ ಸಂಬಂಧ ಸಿಸಿಬಿ ಪೊಲೀಸ್ ಅಧಿಕಾರಿಗಳ ತನಿಖೆಯಲ್ಲಿ ನಾವು ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ. ಪೊಲೀಸರಿಗೆ ಯಾರ ಮೇಲೆ ಅನುಮಾನ ಇದೆಯೋ ಅವರನ್ನು ಕರೆಸಿ ವಿಚಾರಣೆ ನಡೆಸಲಿ. ತಪ್ಪೇನಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಶುಕ್ರವಾರ ಹೇಳಿದ್ದಾರೆ.

