ಡ್ರಗ್ಸ್ ಪ್ರಕರಣದ ತನಿಖೆ ಮಾಹಿತಿ ಸೋರಿಕೆ: ಸಿಸಿಬಿ ಅಧಿಕಾರಿ, ಮುಖ್ಯ ಪೇದೆ ಅಮಾನತು
ಚಂದನವನಕ್ಕೆ ಮಾದಕ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿನ ಮಾಹಿತಿಗಳನ್ನು ಆರೋಪಿಗಳಿಗೆ ಸೋರಿಕೆ ಮಾಡಿದ ಆರೋಪದಡಿ ಸಿಸಿಬಿ ಅಧಿಕಾರಿ ಹಾಗೂ ಮುಖ್ಯಪೇದೆಯನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು: ಚಂದನವನಕ್ಕೆ ಮಾದಕ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿನ ಮಾಹಿತಿಗಳನ್ನು ಆರೋಪಿಗಳಿಗೆ ಸೋರಿಕೆ ಮಾಡಿದ ಆರೋಪದಡಿ ಸಿಸಿಬಿ ಅಧಿಕಾರಿ ಹಾಗೂ ಮುಖ್ಯಪೇದೆಯನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಿಸಿಬಿ ಸಹಾಯಕ ಪೊಲೀಸ್ ಆಯುಕ್ತ ಎಂ ಆರ್ ಮುದವಿ ಹಾಗೂ ಅವರಿಗೆ ಸಹಕರಿಸಿದ ಮುಖ್ಯ ಪೇದೆ ಮಲ್ಲಿಕಾರ್ಜುನ್ ಅವರನ್ನು ಅಮಾನತು ಗೊಳಿಸಲಾಗಿದೆ.
ಬಂಧಿತ ಆರೋಪಿ ವಿರೇನ್ ಖನ್ನಾ ಬಳಿ 50 ಲಕ್ಷಕ್ಕೆ ಡೀಲ್ ಕುದುರಿಸಿದ್ದ ಎಸಿಪಿ ಮುದವಿ ಅವರು ಪೇದೆ ಮಲ್ಲಿಕಾರ್ಜುನ ಮೂಲಕ ಖನ್ನಾಗೆ ಮೊಬೈಲ್ ನೀಡಿ ಸಹಕರಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ.ಎಸಿಪಿ ಮುದವಿ ರಾತ್ರಿ 10:30 ರ ನಂತರ ಮೊಬೈಲ್ ಕೊಟ್ಟು ಡೀಲ್ ಕುದುರಿಸಿದ್ದರು ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


