District Consumer Disputes Redressal Commission

ಮಾರ್ಗಮಧ್ಯೆ ಕೆಟ್ಟು ನಿಂತ ಬಸ್, ತಲೆಕೆಡಿಸಿಕೊಳ್ಳದ KKRTC: ಸಾರಿಗೆ ಇಲಾಖೆಯ ಬೆವರಿಳಿಸಿದ ವಿದ್ಯಾರ್ಥಿನಿ; ₹33,700 ಪರಿಹಾರಕ್ಕೆ ಕೋರ್ಟ್ ಆದೇಶ
ಮಾರ್ಗಮಧ್ಯೆ ಸ್ಲೀಪರ್ ಬಸ್ ಕೆಟ್ಟುನಿಂತು ಪ್ರಯಾಣಿಕರಿಗೆ ತೊಂದರೆಯಾದರೂ ಪರ್ಯಾಯ ವ್ಯವಸ್ಥೆ ಮಾಡದ ಕೆಕೆಆರ್‌ಟಿಸಿ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗವು ಮಹತ್ವದ ಆದೇಶ ಹೊರಡಿಸಿದ್ದು, ಸಂಕಷ್ಟಕ್ಕೀಡಾಗಿದ್ದ ವಿದ್ಯಾರ್ಥಿನಿಗೆ ಒಟ್ಟು 33,700 ಪರಿಹಾರ ನೀಡುವಂತೆ ಆಯೋಗವು ಆದೇಶಿಸಿದೆ. ಆ ಕುರಿತ ವರದಿ ಇಲ್ಲಿದೆ:

ಪೂರ್ವ ಸೂಚನೆಯಿಲ್ಲದೆ ಲಾರಿ ಜಪ್ತಿ: ಗ್ರಾಹಕರಿಗೆ ಪರಿಹಾರ ನೀಡಲು ಮಣಪ್ಪುರಂ ಫೈನಾನ್ಸ್‌ಗೆ ಆದೇಶ
ಹಣಕಾಸು ಕಂಪನಿಯು ಯಾವುದೇ ಪೂರ್ವ ಸೂಚನೆ ನೀಡದೆ ಅಥವಾ ನ್ಯಾಯಾಲಯದ ಆದೇಶವನ್ನು ಪಡೆಯದೆ ತನ್ನ ಏಜೆಂಟ್‌ಗಳ ಮೂಲಕ ಲಾರಿಯನ್ನು ಮರು ಸ್ವಾಧೀನಪಡಿಸಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.

ದೋಷಪೂರಿತ ಇವಿ ಬ್ಯಾಟರಿ: ಪರಿಹಾರ ನೀಡುವಂತೆ ಎಂಜಿ ಮೋಟಾರ್ಸ್‌ಗೆ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ಆದೇಶ
ಸಾತ್ವಿಕ್ ಬಿನ್ ನಾಗೇಶ್ವರ ರಾವ್ ಎಂಬುವವರು 2023 ರಲ್ಲಿ ಕಾವೇರಿ ಮೋಟಾರ್ಸ್‌ನಿಂದ 10,35,497 ರೂಪಾಯಿಗೆ ಎಲೆಕ್ಟ್ರಿಕ್ ಕಾರನ್ನು ಖರೀದಿಸಿದ್ದರು. ಇದರ ಜೊತೆಗೆ, ಮೂರು ವರ್ಷಗಳ ಇ-ಶೀಲ್ಡ್ ನಿರ್ವಹಣಾ ಯೋಜನೆಗಾಗಿ ಅವರು 8,700 ರೂಪಾಯಿಗಳನ್ನು ಪಾವತಿಸಿದ್ದರು.

ತಪ್ಪಾದ ಸೈಜ್ ಶೂ ಡೆಲಿವರಿ: Ajio ಗೆ 10 ಸಾವಿರ ರೂ. ದಂಡ ವಿಧಿಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ
ಚಿಕ್ಕಮಗಳೂರಿನ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ರಿಲಯನ್ಸ್ ರಿಟೇಲ್ ಲಿಮಿಟೆಡ್ ಒಡೆತನದ ಇ-ಕಾಮರ್ಸ್ ವೆಬ್‌ಸೈಟ್ ಅಜಿಯೋಗೆ 10,000 ರೂ. ದಂಡ ವಿಧಿಸಿದೆ. ಅಜಿಯೋ 9,294 ರೂ. ಮೌಲ್ಯದ ನೈಕ್ ಶೂಗಳನ್ನು ತಪ್ಪಾದ ಗಾತ್ರದೊಂದಿಗೆ ವಿತರಿಸಿದ್ದಕ್ಕಾಗಿ ಮತ್ತು ನಂತರ ಸರಿಯಾದ ಗಾತ್ರದ ಶೂಗಳನ್ನು ನೀಡಲು ನಿರಾಕರಿಸಿದ್ದಕ್ಕೆ ಪ್ರತಿಯಾಗಿ ಈ ದಂಡ ವಿಧಿಸಲಾಗಿದೆ.

