direction

ನಿರ್ದೇಶನಕ್ಕೆ ಮರಳಿದ ಕಿಚ್ಚ ಸುದೀಪ್: ಸಲ್ಲು ಭಾಯ್'ಗೆ ಆ್ಯಕ್ಷನ್ ಕಟ್ ಹೇಳಲು ಸಿದ್ಧತೆ!
ಕಿಚ್ಚ ಸುದೀಪ್ ಮತ್ತೆ ನಿರ್ದೇಶನಕ್ಕೆ ಬರುತ್ತಾರೆ ಎಂಬ ವದಂತಿಗಳು ಕೆಲವು ದಿನಗಳಿಂದ ಹರಿದಾಡುತ್ತಿದ್ದು, ಈ ನಡುವೆ ದೊಡ್ಡದೊಂದು ಸುದ್ದಿ ಹೊರಗೆ ಬಂದಿದೆ. ಈ ಸುದ್ದಿ ಸಿನಿಪ್ರಿಯರಿಗೆ ಹಾಗೂ ಕಿಚ್ಚನ ಅಭಿಮಾನಿಗಳಿಗೆ ಭರ್ಜರಿ ಭೋಜನವಾಗಲಿದೆ.

ಸಿನಿಮಾ ಒಂದು ಸಂಕೀರ್ಣ ಕಲೆ, ಸವಾಲು ನನಗೆ ತುಂಬಾ ಇಷ್ಟ: ಸೂರಜ್ ಗೌಡ
ನಟ ಸೂರಜ್ ಗೌಡ ಗೆ ನಿನ್ನ ಸನಿಹಕೆ ನಾಲ್ಕನೇ ಸಿನಿಮಾವಾಗಿದೆ, ನಿರ್ದೇಶಕರಾಗಿ ಮೊದಲ ಚಿತ್ರವಾಗಿದೆ, ಮದುವೆಯ ಮಮತೆಯ ಕರೆಯೋಲೆ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ಸೂರಜ್ ಗೌಡ ಪ್ರತಿ ಬಾರಿಯೂ ಹೊಸ ಸವಾಲನ್ನು ಸ್ವೀಕರಿಸುತ್ತಾರೆ.

'ಮಾಫಿಯಾ' ದಿಂದ ಗುರುದತ್ತ ಗಾಣಿಗ ಔಟ್: ಪ್ರಜ್ವಲ್ ಗೆ 'ದೇವಕಿ' ನಿರ್ದೇಶಕ ಲೋಹಿತ್ ಆ್ಯಕ್ಷನ್ ಕಟ್!
ಪ್ರಜ್ವಲ್ ದೇವರಾಜ್ ನಟನೆಯ 35ನೇ ಸಿನಿಮಾಗೆ ಗುರುದತ್ ಗಾಣಿಗ ನಿರ್ದೇಶನ ಮಾಡಬೇಕಿತ್ತು, ಆದರೆ ಇತ್ತೀಚಿನ ಮಾಹಿತಿಯ ಪ್ರಕಾರ, ಚಿತ್ರದಿಂದ ಗುರುದತ್ತ ಗಾಣಿಗ ಔಟ್ ಆಗಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಹೊಸ ಸಿನಿಮಾ ಪೋಸ್ಟರ್ ಆನ್ ಲೈನಲ್ಲಿ ಲೀಕ್
ವಿಭಿನ್ನ, ವಿಕ್ಷಿಪ್ತ ಸ್ಕ್ರಿಪ್ಟ್ ಹೆಣೆಯುವುದಕ್ಕೆ ಹೆಸರಾದ ಉಪೇಂದ್ರ ಅವರ ಹೊಸ ಪೋಸ್ಟರ್ ನಲ್ಲಿ ದೊಡ್ಡ ನಾಮದ ಚಿತ್ರವಿದೆ. ಅಲ್ಲದೆ ಕಥೆ- ಚಿತ್ರಕತೆ- ಸಂಭಾಷಣೆ- ನಿರ್ದೇಶನ ಉಪೇಂದ್ರ ಎಂದು ಬರೆಯಲಾಗಿದೆ.

'ಇಂದಿರಾ ಗಾಂಧಿ ಕುರಿತ ಎಮರ್ಜೆನ್ಸಿ ಸಿನಿಮಾವನ್ನು ನನ್ನ ಹೊರತಾಗಿ ಯಾರೂ ಉತ್ತಮವಾಗಿ ನಿರ್ದೇಶಿಸಲು ಸಾಧ್ಯವೇ ಇಲ್ಲ!'
ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಕುರಿತ 'ಎಮರ್ಜೆನ್ಸಿ' ಸಿನಿಮಾವನ್ನು ಬಾಲಿವುಡ್ ನಟಿ ಕಂಗನಾ ರಣಾವತ್ ನಿರ್ದೇಶಿಸಲಿದ್ದಾರೆ.

'ಅನಿರೀಕ್ಷಿತ' ಮೂಲಕ ಮಿಮಿಕ್ರಿ ದಯಾನಂದ್ ನಿರ್ದೇಶನಕ್ಕೆ ಪ್ರವೇಶ
ಮಿಮಿಕ್ರಿ ಮೂಲಕ ಖ್ಯಾತಿ ಹೆಚ್ಚಿಸಿಕೊಂಡವರು ದಯಾನಂದ್. ಅವರು ಮಿಮಿಕ್ರಿ ದಯಾನಂದ್ ಎಂದೇ ಫೇಮಸ್. ಈಗ ಅವರು ನಿರ್ದೇಶನಕ್ಕೆ ಇಳಿದಿದ್ದಾರೆ. ಲಾಕ್ಡೌನ್ ಟೈಮನಲ್ಲೇ ಸಿನಿಮಾ ಕೂಡ ಸಿದ್ಧಪಡಿಸಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಮುಂದಿನ ಆ್ಯಕ್ಷನ್- ಥ್ರಿಲ್ಲರ್ ಸಿನಿಮಾಗೆ ಮಂಜು ಅಥರ್ವ ಡೈರೆಕ್ಷನ್!
ತಮ್ಮ ಮುಂದಿನ ಸಿನಿಮಾವನ್ನು ಬಿಗ್ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡಲಿದೆ ಎಂದು ಈ ಮೊದಲು ನಿಖಿಲ್ ಕುಮಾರಸ್ವಾಮಿ ಹೇಳಿದ್ದರು. ಜಾಗ್ವಾರ್ ನಾಯಕನ ಮುಂದಿನ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿರುವುದನ್ನು ದೃಢಪಡಿಸಿದೆ

ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ನಿರ್ಮಾಪಕ ಶಶಿಧರ್ ಸಿದ್ಧತೆ!
ದಿಶಾ ಎಂಟರ್ ಪ್ರೈಸಸ್ ಅಡಿಯಲ್ಲಿ D/o ಪಾರ್ವತಮ್ಮ ಸಿನಿಮಾ ನಿರ್ಮಿಸಿದ್ದ ನಿರ್ಮಾಪಕ ಕೆಎಂ ಶಶಿಧರ್ ತಮ್ಮ 2ನೇ ಸಿನಿಮಾ ಶೂಟಿಂಗ್ ಗಾಗಿ ಕಾಯುತ್ತಿದ್ದಾರೆ. ಪ್ರಜ್ವಲ್ ದೇವರಾಜ್ ಮತ್ತು ರಚಿತಾ ರಾಮ್ ನಟನೆಯ ಮುಂದಿನ ಸಿನಿಮಾಗಾಗಿ ಕಾಯುತ್ತಿದ್ದಾರೆ.

ಶಿವಣ್ಣ ಮುಂದಿನ ಸಿನಿಮಾಗೆ ರಾಮ್ ಧುಳಿಪುಡಿ ನಿರ್ದೇಶಕ
ಸಂಭಾಷಣೆ ಮತ್ತು ಚಿತ್ರಕಥೆ ಹಾಗೂ ಕಾರ್ಯಕಾರ್ ನಿರ್ಮಾಣದ ನಂತರ ರಾಮ್ ಧುಲಿಪುಡಿ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಮುಂದಿನ ಸಿನಿಮಾವನ್ನು ರಾಮ್ ಧುಲಿಪುಡಿ ನಿರ್ದೇಶಿಸಲಿದ್ದಾರೆ.

