Dies

ಚಿಕ್ಕೋಡಿ: ಹೃದಯಾಘಾತದಿಂದ 32 ವರ್ಷದ ಯೋಗ ಶಿಕ್ಷಕಿ ಸಾವು
ಆರತಿ ದಿಲೀಪ್ ಜೋಗಲೆ ಮೃತ ಶಿಕ್ಷಕಿ, ಅವರಿಗೆ ಯಾವುದೇ ರೀತಿಯ ಅನಾರೋಗ್ಯದ ಲಕ್ಷಣಗಳು ಕಂಡುಬಂದಿಲ್ಲ ಎಂದು ವರದಿಯಾಗಿದೆ. ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

20 ವರ್ಷಗಳ ಕಾಲ ಕೋಮಾದಲ್ಲಿದ್ದ ಸೌದಿ ಅರೇಬಿಯಾ ರಾಜಕುಮಾರ 'ಸ್ಲೀಪಿಂಗ್ ಪ್ರಿನ್ಸ್' ನಿಧನ
ರಾಜಕುಮಾರ ತಲಾಲ್ 36 ವರ್ಷ ವಯಸ್ಸಿನವರಾಗಿದ್ದರು. ಎಲ್ಲ ರೀತಿಯ ವೈದ್ಯಕೀಯ ಚಿಕಿತ್ಸೆಗಳ ಹೊರತಾಗಿಯೂ ಅವರು ಚೇತರಿಸಿಕೊಳ್ಳುವ ಆಶಾಭಾವನೆಯನ್ನು ಅವರ ಕುಟುಂಬವು ಹೊಂದಿತ್ತು.

ವಿಶ್ವದ ಅತ್ಯಂತ ಹಿರಿಯ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ ಅಪಘಾತದಲ್ಲಿ ನಿಧನ: ಪ್ರಧಾನಿ ಮೋದಿ ಸಂತಾಪ
ಸಂಜೆ ಜಲಂಧರ್ನಲ್ಲಿರುವ ತಮ್ಮ ಮನೆಯ ಹೊರಗೆ ವಾಕಿಂಗ್ ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಶೂಟಿಂಗ್ ವೇಳೆ ದುರಂತ: ಸ್ಥಳದಲ್ಲಿಯೇ ಸ್ಟಂಟ್ಮ್ಯಾನ್ ಮೋಹನ್ ರಾಜ್ ಸಾವು; ಅಪಘಾತದ ವಿಡಿಯೋ ವೈರಲ್
ತಮಿಳು ಸಿನಿಮಾದ ಸ್ಟಾರ್ ನಟ ಆರ್ಯ ಅವರ ಹೊಸ ಸಿನಿಮಾದ ಶೂಟಿಂಗ್ನಲ್ಲಿ ಕಾರು ಸ್ಟಂಟ್ ಮಾಡುವ ಸನ್ನಿವೇಶ ಇತ್ತು. ಇದಕ್ಕಾಗಿ ಸಾಹಸ ಕಲಾವಿದ ರಾಜು ಅವರಿಂದ ಕಾರು ಸ್ಟಂಟ್ ಮಾಡಿಸಲಾಗುತ್ತಿತ್ತು.

ಬೆಂಗಳೂರು: ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಲು ಬಂದಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು
ದೇವನಹಳ್ಳಿಯ ಚನ್ನರಾಯಪಟ್ಟಣದಲ್ಲಿ ಕೆಐಎಡಿಬಿಯಿಂದ ಭೂಸ್ವಾಧೀನ ಮಾಡುತ್ತಿರುವುದನ್ನು ವಿರೋಧಿಸಿ ರೈತ ಸಂಘಟನೆಗಳು ಇಂದು ಫ್ರೀಡಂ ಪಾರ್ಕ್ನಲ್ಲಿ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಲು ಈಶ್ವರ್ ಬಂದಿದ್ದರು.

ಬಳ್ಳಾರಿ: ಕಮಲಾಪುರದ ಅಟಲ್‌ಜೀ ಮೃಗಾಲಯದಲ್ಲಿ ಹೆಣ್ಣು ಹುಲಿ 'ದೇವಿ' ಸಾವು
18 ರಿಂದ 19 ವರ್ಷದ ದೇವಿ ಮಾನವ-ವನ್ಯಜೀವಿ ಸಂಘರ್ಷದಲ್ಲಿ ಸಿಲುಕಿ ತೀವ್ರವಾಗಿ ಗಾಯಗೊಂಡು ನಿತ್ರಾಣವಾಗಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಶ್ರೀಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿತ್ತು.

ಮಧ್ಯಪ್ರದೇಶ: ಹಾಸ್ಟೆಲ್ ಕಟ್ಟಡದಿಂದ ಜಿಗಿದು MBBS ಪ್ರಥಮ ವರ್ಷದ ವಿದ್ಯಾರ್ಥಿ ಆತ್ಮಹತ್ಯೆ!
ಜಬಲ್ ಪುರ ನೇತಾಜಿ ಸುಭಾಷ್ ಚಂದ್ರ ಬೋಸ್ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಸಂಖ್ಯೆ 4 ರ ನಾಲ್ಕನೇ ಮಹಡಿಯಿಂದ ಮಧ್ಯಾಹ್ನ 12.30 ರ ಸುಮಾರಿಗೆ ಶಿವಾಂಶ್ ಗುಪ್ತಾ ಎಂಬ ವಿದ್ಯಾರ್ಥಿ ಜಿಗಿದಿದ್ದಾನೆ

ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಮಿಶಾ ಅಗರ್ವಾಲ್ ಹಠಾತ್ ನಿಧನ; 25ನೇ ಹುಟ್ಟು ಹಬ್ಬಕ್ಕೆ ಎರಡೇ ದಿನ ಇರುವಾಗಲೇ ಸಾವು!
ಮಿಶಾ ಸೋಶಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೇಟರ್ ಹಾಗೂ ರೀಲ್ಸ್ ಮೂಲಕ ಪ್ರಸಿದ್ಧರಾಗುವ ಮೂಲಕ ಅಪಾರ ಫಾಲೋವರ್ಸ್ ಪಡೆದಿದ್ದಾರೆ.

ನಾಗ್ಪುರ ಹಿಂಸಾಚಾರ: ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಇಂದು ಸಾವು!
ವೆಲ್ಡರ್ ಆಗಿದ್ದ ಅನ್ಸಾರಿ ಸೋಮವಾರ ರಾತ್ರಿ 11 ಗಂಟೆ ಸುಮಾರಿನಲ್ಲಿ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಒಂದಾದ ನಾಗ್ಪುರ ರೈಲು ನಿಲ್ದಾಣದಿಂದ ಇಟಾರ್ಸಿಗೆ ರೈಲಿನಲ್ಲಿ ತೆರಳಲು ಮನೆಯಿಂದ ಹೊರಟಿದ್ದರು ಎನ್ನಲಾಗಿದೆ.

