ರಾಜ್ಯಕೋವಿಡ್-19 ಪಾಸ್ ದುರುಪಯೋಗವಾದರೆ ಕ್ರಮ: ಡಿಜಿಪಿ ಪ್ರವೀಣ್ ಸೂದ್ ಎಚ್ಚರಿಕೆ
ಲಾಕ್ ಡೌನ್ ಸಮಯದಲ್ಲಿ ಅಗತ್ಯ ಕರ್ತವ್ಯಗಳಿಗಾಗಿ ವ್ಯಕ್ತಿಗಳು ಮತ್ತು ವಾಹನಗಳ ಸಂಚಾರಕ್ಕಾಗಿ ನೀಡಲಾದ ಪಾಸ್ಗಳ ದುರುಪಯೋಗದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿರುವ ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ತುರ್ತು ಪಾಸ್, ಬೇಕಾಬಿಟ್ಟಿ ಸುತ್ತಾಡಲು ನೀಡಿರುವ ಪರವಾನಗಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ