ರಾಜ್ಯ

ಕೋವಿಡ್-19 ಪಾಸ್ ದುರುಪಯೋಗವಾದರೆ ಕ್ರಮ: ಡಿಜಿಪಿ ಪ್ರವೀಣ್ ಸೂದ್ ಎಚ್ಚರಿಕೆ 

ಲಾಕ್ ಡೌನ್ ಸಮಯದಲ್ಲಿ ಅಗತ್ಯ ಕರ್ತವ್ಯಗಳಿಗಾಗಿ ವ್ಯಕ್ತಿಗಳು ಮತ್ತು ವಾಹನಗಳ ಸಂಚಾರಕ್ಕಾಗಿ ನೀಡಲಾದ ಪಾಸ್‌ಗಳ ದುರುಪಯೋಗದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿರುವ ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ತುರ್ತು ಪಾಸ್, ಬೇಕಾಬಿಟ್ಟಿ ಸುತ್ತಾಡಲು ನೀಡಿರುವ ಪರವಾನಗಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ

ಕೋವಿಡ್-19 ಪಾಸ್ ದುರುಪಯೋಗವಾದರೆ ಕ್ರಮ: ಡಿಜಿಪಿ ಪ್ರವೀಣ್ ಸೂದ್ ಎಚ್ಚರಿಕೆ 
ಡಿಜಿಪಿ ಪ್ರವೀಣ್ ಸೂದ್
Published On :

ಬೆಂಗಳೂರು: ಲಾಕ್ ಡೌನ್ ಸಮಯದಲ್ಲಿ ಅಗತ್ಯ  ಕರ್ತವ್ಯಗಳಿಗಾಗಿ ವ್ಯಕ್ತಿಗಳು ಮತ್ತು ವಾಹನಗಳ ಸಂಚಾರಕ್ಕಾಗಿ ನೀಡಲಾದ ಪಾಸ್‌ಗಳ ದುರುಪಯೋಗದ  ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿರುವ ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ತುರ್ತು ಪಾಸ್, ಬೇಕಾಬಿಟ್ಟಿ ಸುತ್ತಾಡಲು ನೀಡಿರುವ ಪರವಾನಗಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ

ನೀಡಲಾದ ಎಲ್ಲಾ  ಪಾಸ್‌ಗಳು ಮೇ 3 ರವರೆಗೆ ಮಾನ್ಯವಾಗಿರುತ್ತವೆ ಎಂದು ತಿಳಿಸಿರುವ ಅವರು, ತುರ್ತು ದಿನದ  ಪಾಸ್‌ಗಳನ್ನು ಹೊರತುಪಡಿಸಿ ಬೆಂಗಳೂರು ಪೊಲೀಸರು ಯಾವುದೇ ಹೊಸ ಪಾಸ್‌ಗಳನ್ನು  ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಎಲೆಕ್ಟ್ರಾನಿಕ್ / ಭೌತಿಕ ಸೇರಿ ಎಲ್ಲಾ ಪಾಸ್‌ಗಳು ಮೇ 3 ರವರೆಗೆ ಮಾನ್ಯವಾಗಿರುತ್ತದೆ.  (ಬೆಂಗಳೂರು ಆಯುಕ್ತರು) ಹೆಚ್ಚಿನ ಪಾಸ್‌ಗಳನ್ನು ನೀಡಬೇಕಾಗಿಲ್ಲ. ಕೇವಲ ಪಾಸ್  ಹೊಂದಿದ್ದ ಮಾತ್ರಕ್ಕೆ ಅದು ಎಲ್ಲೆಂದರಲ್ಲಿ ಸುತ್ತಾಡಲು ನೀಡಿರುವ ಪರವಾನಗಿ ಅಲ್ಲ. ಸರ್ಕಾರವು ವ್ಯಾಖ್ಯಾನಿಸಿದಂತೆ ಅಗತ್ಯ  ಕರ್ತವ್ಯಗಳಿಗಾಗಿ ಪಾಸ್ ಅನ್ನು ನೀಡಲಾಗುತ್ತದೆ. ಒಂದು ವೇಳೆ ಪಾಸ್ ದುರುಪಯೋಗವಾದರೆ, ಅದನ್ನು ರದ್ದುಪಡಿಸುವ ಮತ್ತು ದಂಡ ವಿಧಿಸುವುದಕ್ಕೆ ಕಾರಣವಾಗುತ್ತದೆ ”ಎಂದು ಕರ್ನಾಟಕ ಡಿಜಿಪಿ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.