Delhi

News headlines 16-01-2026 | ಲಕ್ಕುಂಡಿಯಲ್ಲಿ ನಿಧಿಗಾಗಿ ಉತ್ಖನನ; ಇಡೀ ಗ್ರಾಮವೇ ಸ್ಥಳಾಂತರ?; ಕುರ್ಚಿ ಕದನದ ನಡುವೆ ದೆಹಲಿಗೆ ಡಿ.ಕೆ ಶಿವಕುಮಾರ್; ಚಿನ್ನಸ್ವಾಮಿ ಕ್ರೀಡಾಂಗಣ ಸಮಸ್ಯೆಗೆ ಪರಿಹಾರ ಸೂಚಿಸಿದ RCB

ಜನವರಿ 16ಕ್ಕೆ ದೆಹಲಿಗೆ DCM ಡಿ.ಕೆ ಶಿವಕುಮಾರ್: ಅಸ್ಸಾಂ ಚುನಾವಣೆ ಕುರಿತು ಚರ್ಚೆ; ಪ್ರಿಯಾಂಕಾ ಗಾಂಧಿ ಭೇಟಿ ಸಾಧ್ಯತೆ
ಶಿವಕುಮಾರ್ ಅವರು, ಸೋಮವಾರ ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದರು. ಈ ವೇಳೆ ಇಬ್ಬರೂ ನಾಯಕರು ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿದರು.

ಜನವರಿ 22ರ ಬಳಿಕ ದೆಹಲಿಗೆ ಸಿಎಂ ಸಿದ್ದರಾಮಯ್ಯ: ಸಂಪುಟ ಪುನಾರಚನೆ ಕುರಿತು ಚರ್ಚೆ
ಮುಂದಿನ ಎರಡು ವರ್ಷಗಳ ಅವಧಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ಷಮತೆ ಆಧಾರಿತ ಸಚಿವ ಸಂಪುಟ ಪುನಾರಚನೆಗೆ ಹೈಕಮಾಂಡ್ ಚಿಂತನೆ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಕ್ಷಮತೆ ತೃಪ್ತಿಕರವಾಗಿಲ್ಲ ಎಂದು ಪರಿಗಣಿಸಲಾದ 8ರಿಂದ 10 ಸಚಿವರ ಕಾರ್ಯಕ್ಷಮತೆಯನ್ನು ಪರಿಶೀಲನೆ ನಡೆಸುತ್ತಿದೆ.

Watch | ದೆಹಲಿ ಮಸೀದಿ ಬಳಿ ಅತಿಕ್ರಮಣ ತೆರವು ವೇಳೆ ಹಿಂಸಾಚಾರ: ಐವರ ಬಂಧನ

ದೆಹಲಿ: ಮಸೀದಿ ಬಳಿ ತೆರವು ಕಾರ್ಯಾಚರಣೆ ವೇಳೆ ಘರ್ಷಣೆ; FIR ದಾಖಲು, ಐವರು ಆರೋಪಿಗಳ ಬಂಧನ; Video
ಸುಮಾರು 20 ರಿಂದ 25 ಜನರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಇದರಲ್ಲಿ ಐದು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಲ್ಲು ತೂರಾಟ ಘಟನೆಯಲ್ಲಿ ಭಾಗಿಯಾಗಿರುವವರನ್ನು ಗುರುತಿಸಲು ಪ್ರಯತ್ನಗಳು ನಡೆಯುತ್ತಿವೆ.

ದೆಹಲಿ: ರಾಮಲೀಲಾ ಮೈದಾನದ ಮಸೀದಿ ಬಳಿ ಅತಿಕ್ರಮಣ ತೆರವು ಕಾರ್ಯಾಚರಣೆ ವೇಳೆ ಘರ್ಷಣೆ; ಪೊಲೀಸರ ಮೇಲೆ ಕಲ್ಲು ತೂರಾಟ, ಐವರಿಗೆ ಗಾಯ; Video
ದೆಹಲಿ ಹೈಕೋರ್ಟ್ ಆದೇಶದಂತೆ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಅಧಿಕಾರಿಗಳು ಸೈಯದ್ ಫೈಜ್ ಇಲಾಹಿ ಮಸೀದಿ ಮತ್ತು ತುರ್ಕಮನ್ ಗೇಟ್‌ನಲ್ಲಿರುವ ಹತ್ತಿರದ ಸ್ಮಶಾನಕ್ಕೆ ಹೊಂದಿಕೊಂಡಿರುವ ಭೂಮಿಯನ್ನು ಕೆಡವಲು ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ಘರ್ಷಣೆಗಳು ಭುಗಿಲೆದ್ದಿದೆ.

ದೆಹಲಿ: ಯುವಕನಿಗೆ ಒದ್ದು, ಹೊಡೆದು ಕೊಂದ ಆರು ಬಾಲಕರು!
ಈ ಘಟನೆ ಸೋಮವಾರ ಸಂಜೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಬಾಲಕರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ದೆಹಲಿ ವಾಯು ಗುಣಮಟ್ಟ ಅತ್ಯಂತ 'ಗಂಭೀರ'; ದಟ್ಟವಾದ ಮಂಜು; 128 ವಿಮಾನ ರದ್ದು
ಹದಗೆಡುತ್ತಿರುವ ಹವಾಮಾನ ಪರಿಸ್ಥಿತಿಯಿಂದಾಗಿ ದೆಹಲಿ ವಿಮಾನ ನಿಲ್ದಾಣದಿಂದ ನಿರ್ಗಮಿಸುವ ಮತ್ತು ಆಗಮಿಸುವ ಕನಿಷ್ಠ 128 ವಿಮಾನಗಳನ್ನು ರದ್ದುಗೊಳಿಸಲಾಗಿದೆ.

Operation Aaghat 3.0: ದೆಹಲಿಯಲ್ಲಿ ಖಾಕಿ ಭರ್ಜರಿ ಕಾರ್ಯಾಚರಣೆ; ಒಂದೇ ದಿನ 285 ಮಂದಿ ಬಂಧನ, ರಾಶಿ ರಾಶಿ ಶಸ್ತ್ರಾಸ್ತ್ರ-ಮಾದಕ ವಸ್ತು ವಶ!
ಆಪರೇಷನ್ ಆಘಾತ್ 3.0 ಹೆಸರಿನಲ್ಲಿ ದೆಹಲಿ ಪೊಲೀಸರು ಶುಕ್ರವಾರ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ, ಅಬಕಾರಿ ಕಾಯ್ದೆ, ಎನ್‌ಡಿಪಿಎಸ್ ಕಾಯ್ದೆ ಮತ್ತು ಜೂಜಾಟ ಕಾಯ್ದೆಗಳ ಅಡಿಯಲ್ಲಿ 285 ಜನರನ್ನು ಬಂಧನಕ್ಕೊಳಪಡಿಸಿದ್ದಾರೆ.

