Operation Aaghat 3.0: ದೆಹಲಿಯಲ್ಲಿ ಖಾಕಿ ಭರ್ಜರಿ ಕಾರ್ಯಾಚರಣೆ; ಒಂದೇ ದಿನ 285 ಮಂದಿ ಬಂಧನ, ರಾಶಿ ರಾಶಿ ಶಸ್ತ್ರಾಸ್ತ್ರ-ಮಾದಕ ವಸ್ತು ವಶ!
ಆಪರೇಷನ್ ಆಘಾತ್ 3.0 ಹೆಸರಿನಲ್ಲಿ ದೆಹಲಿ ಪೊಲೀಸರು ಶುಕ್ರವಾರ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ, ಅಬಕಾರಿ ಕಾಯ್ದೆ, ಎನ್‌ಡಿಪಿಎಸ್ ಕಾಯ್ದೆ ಮತ್ತು ಜೂಜಾಟ ಕಾಯ್ದೆಗಳ ಅಡಿಯಲ್ಲಿ 285 ಜನರನ್ನು ಬಂಧನಕ್ಕೊಳಪಡಿಸಿದ್ದಾರೆ.

ನವದೆಹಲಿ: ಹೊಸ ವರ್ಷಾಚರಣೆಗೆ ದಿನಗಣನೆ ಆರಂಭವಾಗಿದ್ದು, ಈ ನಡುವೆ ಭದ್ರತೆಗೆ ಸಿದ್ಧತೆ ಆರಂಭಿಸಿರುವ ದೆಹಲಿ ಪೊಲೀಸರು ಶನಿವಾರ ಮಹತ್ವದ ಕಾರ್ಯಾಚರಣೆ ನಡೆಸಿದ್ದಾರೆ.
ಆಪರೇಷನ್ ಆಘಾತ್ 3.0 ಹೆಸರಿನಲ್ಲಿ ದೆಹಲಿ ಪೊಲೀಸರು ಶುಕ್ರವಾರ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ, ಅಬಕಾರಿ ಕಾಯ್ದೆ, ಎನ್‌ಡಿಪಿಎಸ್ ಕಾಯ್ದೆ ಮತ್ತು ಜೂಜಾಟ ಕಾಯ್ದೆಗಳ ಅಡಿಯಲ್ಲಿ 285 ಜನರನ್ನು ಬಂಧನಕ್ಕೊಳಪಡಿಸಿದ್ದಾರೆ.
ದೆಹಲಿ ಆಗ್ನೇಯ ಜಿಲ್ಲೆಯ ಪೊಲೀಸರು ಸುಮಾರು ಎರಡು ಡಜನ್ ಅಕ್ರಮ ಶಸ್ತ್ರಾಸ್ತ್ರಗಳು, ಲಕ್ಷಾಂತರ ನಗದು, ಅಕ್ರಮ ಮದ್ಯ, ಮಾದಕ ವಸ್ತುಗಳು ಮತ್ತು ಕದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಹೊಸ ವರ್ಷದ ಆಚರಣೆಗೆ ಮುಂಚಿತವಾಗಿ ದೆಹಲಿ ಪೊಲೀಸರು ಶುಕ್ರವಾರ ನೂರಾರು ಜನರನ್ನು ಬಂಧಿಸಿದ್ದು, ಅವರ ಬಳಿಯಿಂದ ಶಸ್ತ್ರಾಸ್ತ್ರಗಳು, ಮಾದಕ ದ್ರವ್ಯಗಳು ಮತ್ತು ದೊಡ್ಡ ಮೊತ್ತದ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಹೊಸ ವರ್ಷದ ಹಬ್ಬಗಳು ಪ್ರಾರಂಭವಾಗುವ ಮೊದಲು ಸಂಘಟಿತ ಅಪರಾಧಗಳ ಮೇಲೆ ನಿಗಾ ಇಡುವ ಪ್ರಯತ್ನದಲ್ಲಿ, ಆಗ್ನೇಯ ದೆಹಲಿ ಪೊಲೀಸರು ರಾತ್ರಿಯಿಡೀ ಅನೇಕ ಸ್ಥಳಗಳಲ್ಲಿ ಸಂಘಟಿತ ದಾಳಿ ನಡೆಸಿದ್ದಾರೆ.
ಪೂರ್ವ ತಡೆ ಕ್ರಮವಾಗಿ 504 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಅಪರಾಧ ಹಿನ್ನೆಲೆಯುಳ್ಳ116 ಮಂದಿಯನ್ನು ಕೂಡ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆ ವೇಳೆ 21 ದೇಶೀ ಪಿಸ್ತೂಲ್‌ಗಳು, 20 ಜೀವಂತ ಗುಂಡುಗಳು, 27 ಚಾಕುಗಳು, 12,258 ಅಕ್ರಮ ಮದ್ಯದ ಕ್ವಾರ್ಟರ್‌ಗಳು, 6.01 ಕೆಜಿ ಗಾಂಜಾ ಮತ್ತು ರೂ.2.30 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ 310 ಮೊಬೈಲ್ ಫೋನ್‌ಗಳು, 231 ದ್ವಿಚಕ್ರ ವಾಹನಗಳು ಮತ್ತು ಒಂದು ನಾಲ್ಕು ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 1,306 ಜನರನ್ನು ಪೂರ್ವತಡೆ ಕ್ರಮದಡಿ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಡಿಸಿಪಿ ಹೆಮಂತ್ ತಿವಾರಿ ಮಾತನಾಡಿ, ಹೊಸ ವರ್ಷ ಆಚರಣೆಗೂ ಮುನ್ನ ಕಾನೂನು ಮತ್ತು ಸುವ್ಯವಸ್ಥೆ ಬಲಪಡಿಸುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗಿದೆ” ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



