deer

ಕಲಘಟಗಿ: ಜಿಂಕೆ ಬೇಟೆಯಾಡಿದ ಮೂವರು ಆರೋಪಿಗಳ ಬಂಧನ
ವದಂತಿ ಆಧರಿಸಿ ಅರಣ್ಯಾಧಿಕಾರಿಗಳು ದಿಢೀರ್ ತಪಾಸಣೆ ನಡೆಸಿ ವಾಹನಗಳನ್ನು ಪರಿಶೀಲಿಸಿದಾಗ ಜಿಂಕೆ ಮಾಂಸ ಇರುವುದು ಪತ್ತೆಯಾಗಿದೆ.

ಕೊಡಗು: ಜಿಂಕೆ ಬೇಟೆಯಾಡಿದ ಇಬ್ಬರ ಬಂಧನ, ಮೂವರು ಆರೋಪಿಗಳು ನಾಪತ್ತೆ
ಜಿಂಕೆಯನ್ನು ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಮೂವರು ತಲೆಮರೆಸಿಕೊಂಡಿದ್ದಾರೆ. ಪೊನ್ನಂಪೇಟೆ ಅರಣ್ಯ ವಲಯದ ಅಧಿಕಾರಿಗಳು ಹಾಗೂ ನಾಗರಹೊಳೆಯ ಕಲ್ಲಲ್ಲ ವನ್ಯಜೀವಿ ವಲಯದ ಅಧಿಕಾರಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಮತ್ತೆ 3 ಜಿಂಕೆಗಳ ಸಾವು
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸೋಂಕಿನಿಂದ ಮತ್ತೆ 3 ಜಿಂಕೆಗಳು ಸಾವನ್ನಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬನ್ನೇರುಘಟ್ಟ ಉದ್ಯಾನವನದಲ್ಲಿ ಮತ್ತೊಂದು ದುರಂತ: ಚಿರತೆ ಮರಿಗಳ ಸಾವು ಬೆನ್ನಲ್ಲೇ 15 ಜಿಂಕೆಗಳ ನಿಗೂಢ ಸಾವು!
ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ವನ್ಯಜೀವಿಗಳ ಸಾವು ಮುಂದುವರೆದಿದೆ. ಕಳೆದ ಒಂದು ವಾರದಲ್ಲಿ ಬರೋಬ್ಬರಿ 15 ಜಿಂಕೆಗಳು ಸಾವನ್ನಪ್ಪಿರುವುದು ವರದಿಯಾಗಿದೆ.

ನಾಗರಹೊಳೆ ಹುಲಿ ಸಂರಕ್ಷಿತಾರಣ್ಯದಲ್ಲಿ ಜಿಂಕೆ ಕೊಂಬಿಗೆ ಮೀನಿನ ಬಲೆ ಸಿಲುಕಿ ಪರದಾಟ; ಫೊಟೋ ವೈರಲ್
ಕರ್ನಾಟಕದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜಿಂಕೆಯೊಂದರ ಕೊಂಬಿಗೆ ಮೀನು ಹಿಡಿಯುವ ಬಲೆ ಸಿಲುಕಿರುವ ಫೊಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಿರ್ಬಂಧಿತ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗಿದೆ.

ಮಹಾರಾಷ್ಟ್ರ: ಸೊಲ್ಲಾಪುರದಲ್ಲಿ ಸೇತುವೆಯಿಂದ ಹಾರಿ 12 ಜಿಂಕೆಗಳು ಸಾವು, ಎರಡು ಗಾಯ
ಸೊಲ್ಲಾಪುರ ಜಿಲ್ಲೆಯ ಸೊಲ್ಲಾಪುರ-ಮಂಡ್ರೂಪ್ ಬೈಪಾಸ್ ರಸ್ತೆಯಲ್ಲಿ ಸೇತುವೆಯಿಂದ ಹಾರಿ 12 ಜಿಂಕೆಗಳು ಮೃತಪಟ್ಟಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಮರಾಜನಗರ: ಬೈಕ್ ಗೆ ಜಿಂಕೆ ಢಿಕ್ಕಿ, ಜಿಂಕೆ ಸಾವು, ಸವಾರನಿಗೆ ಗಂಭೀರ ಗಾಯ
ಜಿಂಕೆಗೆ ಬೈಕ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಜಿಂಕೆ ಮೃತಪಟ್ಟಿದ್ದು, ಸವಾರನ ಸ್ಥಿತಿ ಗಂಭೀರವಾಗಿರುವ ಘಟನೆ ಚಾಮರಾಜನಗರದ ಉಡಿಗಾಲ ಗ್ರಾಮದ ಸಮೀಪ ನಡೆದಿದೆ.

ಕುಂದಾಪುರ: 30 ಅಡಿ ಆಳದ ಬಾವಿಗೆ ಬಿದ್ದಿದ್ದ ಜಿಂಕೆಯ ರಕ್ಷಣೆ
ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಅಸೋಡು ಗ್ರಾಮದಲ್ಲಿ ಬಾವಿಯಲ್ಲಿ ಬಿದ್ದ ಜಿಂಕೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ರಕ್ಷಿಸಿದ್ದಾರೆ.

ಬೆಂಗಳೂರು: ಜಿಂಕೆಗೆ ಬೈಕ್ ಡಿಕ್ಕಿ; ಸ್ಥಳದಲ್ಲೇ ಸವಾರ-ಜಿಂಕೆ ದುರ್ಮರಣ
ಜಿಂಕೆಗೆ ಬೈಕ್ ಡಿಕ್ಕಿಯಾಗಿ ಸವಾರ ಮತ್ತು ಜಿಂಕೆ ಎರಡು ಸಾವಿಗೀಡಾಗಿರುವ ಘಟನೆ ನೆಲಮಂಗಲ ತಾಲೂಕಿನ ಅಪ್ಪಗೊಂಡನಹಳ್ಳಿ ಬಳಿ ನಡೆದಿದೆ.

