Deepika Padukone

Deepika-Ranveer ಮೊದಲ ಮಗುವಿನ ನಿರೀಕ್ಷೆಯಲ್ಲಿ ತಾರಾ ದಂಪತಿ
ಬಾಲಿವುಡ್ ನ ಕ್ಯೂಟ್ ಕಪಲ್ ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ಬಾಳಲ್ಲಿ ಮಗುವಿನ ಆಗಮನವಾಗಲಿದೆ. ಇಂದು ಇನ್ಸ್ಟಾಗ್ರಾಂ ಮೂಲಕ ಜೋಡಿ ಸಿಹಿಸುದ್ದಿಯನ್ನು ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ.

'ಫೈಟರ್'ನಲ್ಲಿ ವಾಯುಪಡೆ ಸಮವಸ್ತ್ರದಲ್ಲಿ ಚುಂಬನ: ಹೃತಿಕ್, ದೀಪಿಕಾ ಸೇರಿದಂತೆ ನಿರ್ಮಾಪಕರಿಗೆ ಲೀಗಲ್ ನೋಟಿಸ್!
ಸಿದ್ಧಾರ್ಥ್ ಆನಂದ್ ನಿರ್ದೇಶನದ ಫೈಟರ್ ಚಿತ್ರದಲ್ಲಿನ ಚುಂಬನದ ದೃಶ್ಯಕ್ಕೆ ಸಂಬಂಧಿಸಿದಂತೆ ಲೀಗಲ್ ನೋಟಿಸ್ ಕಳುಹಿಸಲಾಗಿದೆ. ಚುಂಬನದ ದೃಶ್ಯವು ಭಾರತೀಯ ವಾಯುಪಡೆಯ ಘನತೆಗೆ ಧಕ್ಕೆ ತರುತ್ತದೆ ಎಂದು ಆರೋಪಿಸಲಾಗಿದೆ. ಏಕೆಂದರೆ ಈ ದೃಶ್ಯವನ್ನು ವಾಯುಪಡೆಯ ಸಮವಸ್ತ್ರದಲ್ಲಿ ಚಿತ್ರೀಕರಿಸಲಾಗಿದೆ.

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ: 'ಫೈಟರ್' ಚಿತ್ರ ಜನವರಿಯಲ್ಲಿ ತೆರೆಗೆ
ಚಿತ್ರ ಬಿಡುಗಡೆಗೆ ಮುನ್ನ ಬಾಲಿವುಡ್ ನಟರು ದೇವಸ್ಥಾನಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವುದು ಇತ್ತೀಚೆಗೆ ಜೋರಾಗಿದೆ. ಶಾರೂಕ್ ಖಾನ್ ಇತ್ತೀಚೆಗೆ ಜಮ್ಮುವಿನ ವೈಷ್ಣೋದೇವಿ ಮತ್ತು ಶಿರಡಿ ಸಾಯಿಬಾಬನ ದರ್ಶನ ಪಡೆದಿದ್ದರು.

ಫೈಟರ್ ಟೀಸರ್ ರಿಲೀಸ್: ಪೈಲಟ್‌ಗಳಾಗಿ ಕಾಣಿಸಿಕೊಂಡ ಹೃತಿಕ್ ರೋಷನ್, ದೀಪಿಕಾ ಪಡುಕೋಣೆ
ಶುಕ್ರವಾರ ಹೃತಿಕ್ ರೋಷನ್ ಅವರ ಫೈಟರ್ ಸಿನಿಮಾದ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಮತ್ತು ಅನಿಲ್ ಕಪೂರ್ ಸಹ ನಟಿಸಿದ್ದಾರೆ.

ಫೈಟರ್ ಚಿತ್ರದ ಟೀಸರ್
ನಟ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಫೈಟರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಿದ್ದಾರ್ಥ್ ಆನಂದ್ ನಿರ್ದೇಶಿಸಿದ್ದಾರೆ.

IMDb 2023ರ ಅತ್ಯಂತ ಜನಪ್ರಿಯ ಭಾರತೀಯ ತಾರೆಯರ ಪಟ್ಟಿಯಲ್ಲಿ ಶಾರುಖ್ ಖಾನ್‌ಗೆ ಅಗ್ರಸ್ಥಾನ
'ಪಠಾಣ್' ಮತ್ತು 'ಜವಾನ್'ನ ಯಶಸ್ಸಿನೊಂದಿಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಐಎಂಡಿಬಿಯ 2023ರ ಅತ್ಯಂತ ಜನಪ್ರಿಯ ಭಾರತೀಯ ತಾರೆಯರ ಟಾಪ್ 10 ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ನಂತರದ ಸ್ಥಾನಗಳಲ್ಲಿರುವ ನಟಿ ಆಲಿಯಾ ಭಟ್, ದೀಪಿಕಾ ಪಡುಕೋಣೆ ಮತ್ತು ವಾಮಿಕಾ ಗಬ್ಬಿ ಅವರನ್ನು ಹಿಂದಿಕ್ಕಿ ಶಾರುಕ್ ಟಾಪ್ ಒನ್ ಆಗಿದ್ದಾರೆ.

ವಿವಾಹವಾದ 5 ವರ್ಷ ಬಳಿಕ ವಿಡಿಯೊ ಬಿಡುಗಡೆ ಮಾಡಿದ ರಣವೀರ್-ದೀಪಿಕಾ: ಇಲ್ಲಿದೆ ಸ್ಟಾರ್ ಜೋಡಿಯ ಮದುವೆ ವಿಡಿಯೊ ತುಣುಕು
ಬಾಲಿವುಡ್ ನ ಸ್ಟಾರ್ ಜೋಡಿಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ 2018 ರ ನವೆಂಬರ್ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅವರಿಗೆ ಮದುವೆಯಾದ ಐದು ವರ್ಷಗಳ ನಂತರ ಇದೀಗ ದೀಪಿಕಾ ಮತ್ತು ರಣವೀರ್ ತಮ್ಮ ಮದುವೆಯ ವಿಡಿಯೋವನ್ನು ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ಕಾಫಿ ವಿತ್ ಕರಣ್ ಶೋನಲ್ಲಿ ಬಿಡುಗಡೆ ಮಾಡಿದ್ದಾರೆ.

'Singham Again' ಚಿತ್ರದ ದೀಪಿಕಾ ಪಡುಕೋಣೆ ಪಾತ್ರದ ಪೋಸ್ಟರ್ ಬಿಡುಗಡೆ; ಶಕ್ತಿ ಶೆಟ್ಟಿ ಅವತಾರದಲ್ಲಿ ಮಿಂಚು!
ರೋಹಿತ್ ಶೆಟ್ಟಿ ನಿರ್ದೇಶನದ ಸಿಂಗಂ ಎಗೇನ್ ಚಿತ್ರದ ನಿರ್ದೇಶಕರು ಭಾನುವಾರ ದೀಪಿಕಾ ಪಡುಕೋಣೆ ಅವರ ಪಾತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ನಟಿ ಖಡಕ್ ಪೊಲೀಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಶಕ್ತಿ ಶೆಟ್ಟಿ ಎಂಬ ಹೆಸರಿನ ಅವರ ಕೈಯಲ್ಲಿ ಗನ್ ಹಿಡಿದಿದ್ದಾರೆ.

ಕಲ್ಕಿ 2898 AD ಚಿತ್ರದ ಗ್ಲಿಂಪಸ್!
ನಟ ಪ್ರಭಾಸ್ ಅಭಿನಯದ ಕಲ್ಕಿ 2898 AD ಚಿತ್ರದ ಗ್ಲಿಂಪಸ್ ವಿಡಿಯೋ ಬಿಡುಗಡೆಯಾಗಿದೆ. ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶಿಸಿದ್ದಾರೆ.

