ವಿವಾಹವಾದ 5 ವರ್ಷ ಬಳಿಕ ವಿಡಿಯೊ ಬಿಡುಗಡೆ ಮಾಡಿದ ರಣವೀರ್-ದೀಪಿಕಾ: ಇಲ್ಲಿದೆ ಸ್ಟಾರ್ ಜೋಡಿಯ ಮದುವೆ ವಿಡಿಯೊ ತುಣುಕು
ಬಾಲಿವುಡ್ ನ ಸ್ಟಾರ್ ಜೋಡಿಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ 2018 ರ ನವೆಂಬರ್ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅವರಿಗೆ ಮದುವೆಯಾದ ಐದು ವರ್ಷಗಳ ನಂತರ ಇದೀಗ ದೀಪಿಕಾ ಮತ್ತು ರಣವೀರ್ ತಮ್ಮ ಮದುವೆಯ ವಿಡಿಯೋವನ್ನು ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ಕಾಫಿ ವಿತ್ ಕರಣ್ ಶೋನಲ್ಲಿ ಬಿಡುಗಡೆ ಮಾಡಿದ್ದಾರೆ.

ಮುಂಬೈ: ಬಾಲಿವುಡ್ ನ ಸ್ಟಾರ್ ಜೋಡಿಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ 2018 ರ ನವೆಂಬರ್ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅವರಿಗೆ ಮದುವೆಯಾದ ಐದು ವರ್ಷಗಳ ನಂತರ ಇದೀಗ ದೀಪಿಕಾ ಮತ್ತು ರಣವೀರ್ ತಮ್ಮ ಮದುವೆಯ ವಿಡಿಯೋವನ್ನು ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ಕಾಫಿ ವಿತ್ ಕರಣ್ ಶೋನಲ್ಲಿ ಬಿಡುಗಡೆ ಮಾಡಿದ್ದಾರೆ.
ಕರಣ್ ಜೋಹರ್ ತಮ್ಮ ಸೆಲೆಬ್ರಿಟಿ ಚಾಟ್ ಶೋ 8 ನೇ ಸೀಸನ್‌ನೊಂದಿಗೆ ಮತ್ತೆ ಮರಳಿದ್ದು, ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಕಾಫಿ ವಿಥ್ ಕರಣ್ ಶೋನಲ್ಲಿ ಭಾಗವಹಿಸಿದ್ದಾರೆ. ಹೊಸ ಸೀಸನ್ನಲ್ಲಿ ಅವರ ಮೊದಲ ಅತಿಥಿಗಳು ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ.
ರಣವೀರ್ ಮತ್ತು ದೀಪಿಕಾ, ಅಭಿಮಾನಿಗಳು ಮತ್ತು ಕರಣ್ಗೆ ತಮ್ಮ ಮದುವೆಯ ಸೆಲೆಬ್ರೇಷನ್ ವಿಡಿಯೋ ತೋರಿಸಿದರು. ವಿಡಿಯೋದಲ್ಲಿ ನಿಶ್ಚಿತಾರ್ಥ, ಮೆಹೆಂದಿ, ಆನಂದ್ ಕರಜ್ ಮತ್ತು ಮಂಟಪ ಸೇರಿದಂತೆ ಹಲವು ಆಚರಣೆಗಳನ್ನು ನೋಡಬಹುದು.
ದೀಪಿಕಾಗೆ ಪ್ರಪೋಸ್ ಮಾಡಿದ ರಣವೀರ್: ರಣವೀರ್ ಸಿಂಗ್ ನಿಂದ ವಿಡಿಯೋ ಪ್ರಾರಂಭವಾಗುತ್ತದೆ. ಮಾಲ್ಡೀವ್ಸ್‌ನಲ್ಲಿ ದೀಪಿಕಾ ಪಡುಕೋಣೆಗೆ ಪ್ರಪೋಸ್ ಮಾಡಿದ್ದನ್ನು ರಣವೀರ್ ಸಿಂಗ್ ಹೇಳಿದ್ದಾರೆ. ಇದಾದ ನಂತರ ಇಬ್ಬರೂ ಕುಟುಂಬವನ್ನು ಭೇಟಿ ಮಾಡಿ ತಮ್ಮ ಎಂಗೇಜ್ ಬಗ್ಗೆ ಹೇಳಲು ಬೆಂಗಳೂರಿಗೆ ತೆರಳಿದರು. ಮಗಳ ಆಯ್ಕೆಯಿಂದ ದೀಪಿಕಾ ತಾಯಿಗೆ ಅಷ್ಟಾಗಿ ಸಂತೋಷವಾಗದಿದ್ದರೂ, ನಂತರ ರಣವೀರ್ ಅವರನ್ನು ಮೆಚ್ಚಿಸಿದ್ದರು.
ವಿಡಿಯೋದಲ್ಲಿ ದೀಪಿಕಾ ಪಡುಕೋಣೆ ತಂದೆ ಹಾಗೂ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಕೂಡ ತಮ್ಮ ಅಳಿಯನನ್ನು ಹೊಗಳಿರುವುದು ಕಂಡುಬಂದಿದೆ. ಪ್ರಕಾಶ್ ಪಡುಕೋಣೆ, ಅಳಿಯ ತಮ್ಮ ಕುಟುಂಬಕ್ಕೆ ಜೀವ ತುಂಬಿದರು. ರಣವೀರ್ ಉತ್ಸಾಹಭರಿತ ವ್ಯಕ್ತಿ. ತನ್ನ ಕುಟುಂಬಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತಾನೆ ಎಂದು ಪ್ರಶಂಸಿಸಿದ್ದಾರೆ.
ಭಾವುಕರಾದ ದೀಪಿಕಾ: ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರ ಅನೇಕ ಗಮನ ಸೆಳೆಯುವ ಕ್ಷಣಗಳೂ ಇಲ್ಲಿವೆ. ವಿಶೇಷವಾಗಿ ಮೆಹಂದಿ ಸಮಾರಂಭದಲ್ಲಿ ಆ ಸುಂದರವಾದ ಕ್ಷಣ ಕಂಡುಬಂದಿದೆ. ಸಮಾರಂಭದಲ್ಲಿ ರಣವೀರ್ ಡ್ಯಾನ್ಸ್ ಮಾಡಿದ್ದಾರೆ. ಇದೇ ವೇಳೆ ಭಾವುಕಳಾದ ದೀಪಿಕಾ ಕೂಡ ಮೆಹಂದಿ ಕಾರ್ಯಕ್ರಮದಲ್ಲಿ ಕಣ್ಣೀರು ಒರೆಸಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.
ಇಟಲಿಯಲ್ಲಿ ಮದುವೆಯಾದ ರಣವೀರ್ ಸಿಂಗ್ ಹಾಗೂ ದೀಪಿಕಾ ಬಳಿಕ ಬೆಂಗಳೂರು ಹಾಗೂ ಮುಂಬೈನಲ್ಲಿ ರಿಸೆಪ್ಷನ್ ಮಾಡಿಕೊಂಡಿದ್ದರು. ಇವರ ಮದುವೆಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಈಗ ವೃತ್ತಿಬದುಕಿನಲ್ಲಿ ಇಬ್ಬರೂ ಬ್ಯುಸಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


