death penalty

ಮಂಗಳೂರು: ಮೂವರು ಮಕ್ಕಳನ್ನು ಕೊಂದು ಪತ್ನಿಯ ಕೊಲೆಗೆ ಯತ್ನಿಸಿದ ವ್ಯಕ್ತಿಗೆ ಮರಣದಂಡನೆ ಶಿಕ್ಷೆ
ಆರೋಪಿ ನಿರುದ್ಯೋಗಿಯಾಗಿದ್ದು, ಪತ್ನಿಯೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.

ಮೈಸೂರು: ಗರ್ಭಿಣಿ ಪತ್ನಿ, ಇಬ್ಬರು ಮಕ್ಕಳು, ಹಾಗೂ ತಾಯಿಯನ್ನು ಕೊಂದ ವ್ಯಕ್ತಿಗೆ ಮರಣದಂಡನೆ
ಆಗಾಗ್ಗೆ ತನ್ನ ಹೆಂಡತಿಗೆ ಅನೈತಿಕ ಸಂಬಂಧವಿದೆ ಎಂದು ಆರೋಪಿಸಿ ಈ ಸಂಬಂಧ ಜಗಳ ಮಾಡುತ್ತಿದ್ದ. ಮಕ್ಕಳ ಹುಟ್ಟಿನ ಬಗ್ಗೆ ಅನುಮಾನ ವ್ಯಕ್ತ ಪಡಿಸುತ್ತಿದ್ದ.

ನೌಕಾಪಡೆಯ 8 ಮಾಜಿ ಯೋಧರಿಗೆ ಕತಾರ್‌ನಲ್ಲಿ ಮರಣ ದಂಡನೆ: ಆಘಾತ ವ್ಯಕ್ತಪಡಿಸಿದ ಭಾರತ, ಕಾನೂನು ತಜ್ಞರೊಂದಿಗೆ ಚರ್ಚೆ
ಆಘಾತಕಾರಿ ಮತ್ತು ಅನಿರೀಕ್ಷಿತ ಬೆಳವಣಿಗೆಯಲ್ಲಿ ಕತಾರ್‌ನಲ್ಲಿ ಎಂಟು ಮಂದಿ ಭಾರತೀಯ ಮಾಜಿ ಯೋಧರಿಗೆ ಮರಣದಂಡನೆ ಶಿಕ್ಷೆ ಪ್ರಕಟಿಸಲಾಗಿದ್ದು, ಭಾರತ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ.

ಅದು ನನ್ನ ಮಗುವೇ ಆಗಿದ್ದರೆ..!; ನನ್ನ ಮಗನನ್ನು ಗಲ್ಲಿಗೇರಿಸಿ: ಉಜ್ಜಯಿನಿ ಅತ್ಯಾಚಾರ ಆರೋಪಿ ತಂದೆಯ ನೋವಿನ ನುಡಿ
ಇಡೀ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ಉಜ್ಜಯಿನಿ ಬಾಲಕಿಯ ಅತ್ಯಾಚಾರ ಆರೋಪಿಯನ್ನು ಕೂಡಲೇ ಗಲ್ಲಿಗೇರಿಸುವಂತೆ ಆತನ ತಂದೆಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮರಣದಂಡನೆ ಜಾರಿಗೆ ನೇಣು ಬದಲು ಬೇರೆ ಮಾರ್ಗದ ಬಗ್ಗೆ ಚಿಂತನೆ ನಡೆಸಿ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್
ಮರಣದಂಡನೆಯನ್ನು ಜಾರಿಗೊಳಿಸುವಾಗ ನೇಣು ಹಾಕುವುದನ್ನು ಹೊರತುಪಡಿಸಿ ಹೆಚ್ಚು ಘನತೆ, ಕಡಿಮೆ ನೋವಿನ ಮತ್ತು ಸಾಮಾಜಿಕವಾಗಿ ಸ್ವೀಕಾರಾರ್ಹವಾದ ಸಾವಿನ ಮಾರ್ಗವನ್ನು ಅನ್ವೇಷಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಸೂಚನೆ ನೀಡಿದೆ.

ಭೋಪಾಲ್-ಉಜ್ಜಯಿನಿ ರೈಲು ಸ್ಫೋಟ ಪ್ರಕರಣ: 7 ಅಪರಾಧಿಗಳಿಗೆ ಮರಣ ದಂಡನೆ
ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯಲ್ಲಿ ರೈಲು ಸ್ಫೋಟ ಪ್ರಕರಣದಲ್ಲಿ ಉತ್ತರ ಪ್ರದೇಶದ ವಿಶೇಷ ಎನ್ಐಎ ಕೋರ್ಟ್ ನ ತೀರ್ಪು ಇಂದು ಹೊರಬಿದ್ದಿದ್ದು ಎಂಟು ಅಪರಾಧಿಗಳ ಪೈಕಿ ಏಳು ಮಂದಿಗೆ ಮರಣದಂಡನೆ ವಿಧಿಸಲಾಗಿದ್ದು, ಒಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಗೋಧ್ರಾ ರೈಲು ದಹನ: 11 ಅಪರಾಧಿಗಳಿಗೆ ಮರಣದಂಡನೆ ವಿಧಿಸಲು ಒತ್ತಾಯ; ಸುಪ್ರೀಂ ಕೋರ್ಟ್‌ಗೆ ಗುಜರಾತ್ ಸರ್ಕಾರ
2002ರಲ್ಲಿ ಗುಜರಾತ್‌ನ ಗೋಧ್ರಾ ರೈಲು ದಹನ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣದಂಡನೆ ಶಿಕ್ಷೆಯಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 11 ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆಯನ್ನೇ ವಿಧಿಸುವಂತೆ ಒತ್ತಾಯಿಸುವುದಾಗಿ ಗುಜರಾತ್ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಗೋರಖನಾಥ ದೇಗುಲದ ಸಿಬ್ಬಂದಿ ಮೇಲೆ ದಾಳಿ ನಡೆಸಿದ ಆರೋಪಿ ಅಹ್ಮದ್ ಮುರ್ತಾಜಾಗೆ ಗಲ್ಲುಶಿಕ್ಷೆ!
ಗೋರಖ್‌ನಾಥ ದೇಗುಲದಲ್ಲಿ ಪಿಎಸಿ ಯೋಧರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಅಹ್ಮದ್ ಮುರ್ತಾಜಾ ಅಬ್ಬಾಸಿ ದೋಷಿ ಎಂದು ಎಟಿಎಸ್ ನ್ಯಾಯಾಲಯದ ತೀರ್ಪು ನೀಡಿದ್ದು ಗಲ್ಲು ಶಿಕ್ಷೆ ವಿಧಿಸಿದೆ.

ಹರಿಯಾಣ: ಹೆತ್ತ ಮಗಳ ಮೇಲೆಯೇ ಅತ್ಯಾಚಾರ ಎಸಗಿದ್ದ ಪಾಪಿ ತಂದೆಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್
ಎರಡು ವರ್ಷಗಳ ಹಿಂದೆ ಸಿರ್ಸಾ ಜಿಲ್ಲೆಯಲ್ಲಿ ತನ್ನ 11 ವರ್ಷದ ಅಪ್ರಾಪ್ತ ಮಗಳ ಮೇಲೆಯೇ ಅತ್ಯಾಚಾರ ಎಸಗಿದ್ದ ಪಾಪಿ ತಂದೆಗೆ ಜಿಲ್ಲಾ ನ್ಯಾಯಾಲಯ ಗುರುವಾರ ಗಲ್ಲು ಶಿಕ್ಷೆ ವಿಧಿಸಿದೆ.

