Davanagere South

ಕಾಂಗ್ರೆಸ್ ನಲ್ಲಿ ಆಂತರಿಕ ಕಿತ್ತಾಟ ತೀವ್ರ: ಉಪ ಚುನಾವಣೆ ಫಲಿತಾಂಶ ಡಿ.ಕೆ ಶಿವಕುಮಾರ್ ರಾಜಕೀಯ ಭವಿಷ್ಯ ನಿರ್ಧರಿಸುತ್ತಾ?
ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವನ್ನು ಮುನ್ನಡೆಸುತ್ತಿದ್ದರೂ, ಸದ್ಯ ನಡೆಯುತ್ತಿರುವ ಆಂತರಿಕ ಕಿತ್ತಾಟಗಳ ನಡುವೆ ಪಕ್ಷಕ್ಕೆ ಹೆಚ್ಚಿನ ಹಾನಿಯಾಗದಂತೆ ಸಮರ್ಥ ರೀತಿಯಲ್ಲಿ ಡಿಕೆ ಶಿವಕುಮಾರ್ ನಿಭಾಯಿಸುತ್ತಿದ್ದಾರೆ.

'ದಾವಣಗೆರೆ ದಕ್ಷಿಣದಲ್ಲಿ ಅಸಮಾಧಾನ ಇದ್ದಿದ್ದು ನಿಜ, ನಂತರ ಎಲ್ಲ ಸರಿಹೋಯ್ತು, ಸಮರ್ಥ್ ಗೆಲ್ತಾರೆ': ಜಮೀರ್ ಅಹ್ಮದ್ ಖಾನ್
ನನಗೆ ಈ ಬೆಳವಣಿಗೆಗಳ ಬಗ್ಗೆ ಮಾಹಿತಿ ಇಲ್ಲ. ಸಿಎಂ ಅವರು ದಾವಣಗೆರೆಗೆ ಹೋಗಲು ಹೇಳಿದ್ದರಂತೆ, ಆದರೆ ಅವರು ಹೋಗಲಿಲ್ಲ ಎಂದು ಸ್ಥಾನದಿಂದ ತೆಗೆದಿದ್ದಾರೆ ಎಂದು ನನಗೆ ಬಂದಿರುವ ಮಾಹಿತಿ.

ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆಯಲ್ಲಿ ಸಂಜೆ 5 ಗಂಟೆಯವರೆಗೆ ಶೇ. 60ಕ್ಕೂ ಹೆಚ್ಚು ಮತದಾನ
ಕರ್ನಾಟಕದ ವಿಧಾನಸಭಾ ಕ್ಷೇತ್ರಗಳಾದ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು ಸಂಜೆ 5 ಗಂಟೆಯವರೆಗೆ ಶೇ. 60ಕ್ಕೂ ಹೆಚ್ಚು ಮತದಾನ ದಾಖಲಾಗಿದೆ. ಬಾಗಲಕೋಟೆಯಲ್ಲಿ ಶೇ. 65.68 ರಷ್ಟು ಮತದಾನವಾಗಿದ್ದರೆ, ದಾವಣಗೆರೆ ದಕ್ಷಿಣದಲ್ಲಿ ಶೇ. 63.04 ರಷ್ಟು ಮತದಾನವಾಗಿದೆ.

ಶಾಮನೂರು ಭದ್ರಕೋಟೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಬಲ ಪ್ರದರ್ಶನವೋ? 'ಸಮರ್ಥ್' ಸಾಮರ್ಥ್ಯ ದರ್ಶನವೋ?
ಸಮರ್ಥ್ ಅವರ ತಾತ ದಿವಂಗತ ಶಾಮನೂರು ಶಿವಶಂಕರಪ್ಪ ಸತತ ಆರು ಬಾರಿ ಗೆದ್ದಿರುವುದರಿಂದ ಈ ಕ್ಷೇತ್ರವನ್ನು ಕಾಂಗ್ರೆಸ್ ಭದ್ರಕೋಟೆ ಎಂದು ಪರಿಗಣಿಸಲಾಗಿದೆ. ಮತ್ತೊಂದೆಡೆ, ಬಿಜೆಪಿ ಈ ಕ್ಷೇತ್ರದಲ್ಲಿ ಎಂದಿಗೂ ಯಶಸ್ಸನ್ನು ಕಂಡಿಲ್ಲ.

ರನ್ ಔಟ್ ಮಾಡಬೇಡಿ, ಮ್ಯಾಚ್ ಗೆಲ್ಲಿಸಿ: ದಾವಣಗೆರೆಯಲ್ಲಿ ಸಮರ್ಥ್ ಪರ ಮಾಜಿ ಕ್ರಿಕೆಟಿಗ ಅಜರುದ್ದೀನ್ ಮತಯಾಚನೆ!
ಮಾಜಿ ಕ್ರಿಕೆಟಿಗ ಮತ್ತು ತೆಲಂಗಾಣ ಸಚಿವ ಮೊಹಮ್ಮದ್ ಅಜರುದ್ದೀನ್ ಮಂಗಳವಾರ ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಪ್ರಚಾರದಲ್ಲಿ ಭಾಗವಹಿಸಿ, ಪಕ್ಷದ ಅಭ್ಯರ್ಥಿ ಸಮರ್ಥ್ ಶಾಮನೂರು ಮತ ಚಲಾಯಿಸುವಂತೆ ಮತದಾರರಿಗೆ ಮನವಿ ಮಾಡಿದರು.

ದಾವಣಗೆರೆ ದಕ್ಷಿಣ ಕ್ಷೇತ್ರ ಗೆಲ್ಲಿಸುವ ಟಾಸ್ಕ್ ನನಗೆ ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ: ಸಚಿವ ಜಮೀರ್ ಅಹ್ಮದ್
ದಾವಣಗೆರೆಗೆ ಆಗಮಿಸಿದ ತಕ್ಷಣ ಜಮೀರ್ ಅವರು ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ನಿವಾಸಕ್ಕೆ ಭೇಟಿ ನೀಡಿ, ಅವರನ್ನು ಅಪ್ಪಿಕೊಂಡು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ರಂಗೇರಿದ ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪ ಚುನಾವಣೆ ಕಣ; ಬಿಜೆಪಿ-ಕಾಂಗ್ರೆಸ್ ಟೀಕೆ-ವಾಗ್ವಾದ ಬಿಸಿಲಿನಷ್ಟೇ ತೀಕ್ಷ್ಣ!
ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಕೂಡ, ಬಿಜೆಪಿ ಉಪ ಚುನಾವಣೆಯಲ್ಲಿ ಗೆಲ್ಲಬಹುದು ಎಂಬ ಭಯದಿಂದ ಮುಖ್ಯಮಂತ್ರಿಗಳು ಐದು ದಿನಗಳ ಕಾಲ ಬಾಗಲಕೋಟೆಯಲ್ಲಿ ಠಿಕಾಣಿ ಹೂಡಿದ್ದಾರೆ ಎಂದು ಟೀಕಿಸಿದರು.

ಸಚಿವರು ಸೂಟ್ ಕೇಸ್ ನಲ್ಲಿ ಅಲ್ಲ ಗೋಣಿಚೀಲದಲ್ಲಿ ಹಣ ತಂದು ದಾವಣಗೆರೆಯಲ್ಲಿ ಕೂರುತ್ತಾರೆ: ಬಿ.ವೈ ವಿಜಯೇಂದ್ರ
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸಮರ್ಥ್ ಶಾಮನೂರುಗೆ ಕಾಂಗ್ರೆಸ್ ಟಿಕೆಟ್ ನೀಡಿರುವುದು ಅಲ್ಪಸಂಖ್ಯಾತ ಮುಸ್ಲಿಂ ಮುಖಂಡರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. 20ಕ್ಕೂ ಹೆಚ್ಚು ಮುಸ್ಲಿಮರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ದಾವಣಗೆರೆ ದಕ್ಷಿಣ ಉಪಚುನಾವಣೆ: ಟಿಕೆಟ್ ಘೋಷಣೆಗೆ ಮೊದಲೇ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ
ಇಂದು ಬೆಳಗ್ಗೆ ಪೂಜೆ ಪುನಸ್ಕಾರ ಮಾಡಿ, ದೇವಸ್ಥಾನಕ್ಕೆ ಭೇಟಿ ಕೊಟ್ಟ ನಂತರ ಮಧ್ಯಾಹ್ನ ತಮ್ಮ ತಾಯಿ ಸಂಸದೆ ಡಾ ಪ್ರಭಾ ಮಲ್ಲಿಕಾರ್ಜುನ್ ಸೇರಿದಂತೆ ಆಪ್ತರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.

