Cybercrime

ಹಲೋ.. ನಾನು ಮುಂಬೈ ಕ್ರೈಂ ಬ್ರಾಂಚ್‌ನಿಂದ ಡಿಸಿಪಿ ಮಾತಾಡ್ತಿರೋದು; ವಂಚಕರ ಜಾಲದ ಬಗ್ಗೆ ಪೊಲೀಸರ ಎಚ್ಚರಿಕೆ
ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರು ಅದೆಷ್ಟು ಹೊಸ ಹೊಸ ತಂತ್ರಗಳನ್ನು ಬಳಸುತ್ತಿದ್ದಾರೆ ಎಂದರೆ ಎಂತವರಾದರೂ ಒಂದು ಕ್ಷಣ ನಿಜವೆಂದು ನಂಬುವಂತಿರುತ್ತದೆ. ಈಗಂತು ಪೊಲೀಸರ ಹೆಸರಿನಲ್ಲೇ ಹಲವು ರೀತಿಯಲ್ಲಿ ವಂಚನೆಯ ಬಲೆ ಬೀಸುತ್ತಿದ್ದಾರೆ.

ಬೆಂಗಳೂರು: ಜೀವಿತ ಪ್ರಮಾಣಪತ್ರ ನವೀಕರಿಸಲು ಹೋಗಿ 1.2 ಲಕ್ಷ ರೂ. ಹಣ ಕಳೆದುಕೊಂಡ ನಿವೃತ್ತ ಪೊಲೀಸ್ ಅಧಿಕಾರಿ!
ತಮ್ಮ ಜೀವಿತ ಪ್ರಮಾಣಪತ್ರವನ್ನು ನವೀಕರಿಸಲು ಸರ್ಕಾರಿ ದಾಖಲೆಗಳನ್ನು ಹಂಚಿಕೊಂಡ ನಂತರ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರಿಗೆ 1.27 ಲಕ್ಷ ರೂ. ಗಳನ್ನು ವಂಚಿಸಲಾಗಿದೆ.

ಕಾಂಬೋಡಿಯಾದಲ್ಲಿ ಸೈಬರ್ ವಂಚನೆ ಜಾಲಕ್ಕೆ ಸಿಲುಕಿದ್ದ ಕನ್ನಡಿಗನ ರಕ್ಷಣೆ ಮಾಡಿದ ಅನಿವಾಸಿ ಭಾರತೀಯ ವೇದಿಕೆ!
ಕಾಂಬೋಡಿಯಾದಲ್ಲಿ ಸಿಲುಕಿದ್ದ ಚಿಕ್ಕಮಗಳೂರಿನ ಎನ್‌ಆರ್ ಪುರ ತಾಲೂಕಿನ ಮಾಗುಂಡಿ ಗ್ರಾಮದ ಅಶೋಕ ಅವರನ್ನು ಕರ್ನಾಟಕ ಅನಿವಾಸಿ ಭಾರತೀಯ ವೇದಿಕೆ ರಕ್ಷಿಸಿದ್ದು, ಕೂಡಲೇ ಪೊಲೀಸರು ಹಾಗೂ ರಾಯಭಾರಿ ಕಚೇರಿಗೆ ದೂರು ನೀಡಿ, ಸಂಬಂಧಪಟ್ಟ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.

ಸೈಬರ್ ಕ್ರೈಂ ನಿಭಾಯಿಸಲು ಸ್ಥಳೀಯ ಠಾಣೆಗಳ ಪೊಲೀಸರಿಗೆ ತರಬೇತಿ: ನಗರ ಪೊಲೀಸ್ ಆಯುಕ್ತ ಬಿ.ದಯಾನಂದ
ಸೈಬರ್ ಕ್ರೈಂ ಪ್ರಕರಣಗಳು ದಿನೇದಿನೇ ಹೆಚ್ಚುತ್ತಲೇ ಇದ್ದು, ಪೊಲೀಸರು ಮತ್ತು ಸರ್ಕಾರ ಈ ವಿಷಯವಾಗಿ ಸಾಕಷ್ಟು ಜಾಗೃತಿ ಮೂಡಿಸುತ್ತಿದೆ. ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ನಾವು ಕಾಲಮಿತಿಯ ತನಿಖೆಗೆ ಕಟ್ಟುನಿಟ್ಟಿನ ನಿಯಮಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಂಗಳವಾರ ಹೇಳಿದರು.

ಸೈಬರ್ ಕ್ರೈಮ್ ತಡೆಯಲು ಆನ್‌ಲೈನ್ ಅಪಾಯಗಳನ್ನು ಅರಿತುಕೊಳ್ಳಿ: ಬೆಂಗಳೂರು ನಗರ ಪೊಲೀಸ್ ಕಮಿಷನರ್
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಅವರು ಸೈಬರ್ ಅಪರಾಧಗಳಿಂದ ದೂರವಿರಲು ಸಾಮಾಜಿಕ ಮಾಧ್ಯಮಗಳಲ್ಲಿ ಎದುರಾಗುವ ಅಪಾಯಗಳನ್ನು ಗುರುತಿಸುವ ಅಗತ್ಯವನ್ನು ಒತ್ತಿ ಹೇಳಿದರು. ಗುರುವಾರ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಇಂಡಿಯಾ ಸೈಬರ್ ಕ್ರೈಮ್ ಸಮಿಟ್‌ನಲ್ಲಿ ವಿದ್ಯಾರ್ಥಿಗಳು ಮತ್ತು ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು.

ರಾಜ್ಯದಲ್ಲಿ ದಾಖಲಾದ ಪೊಲೀಸ್ ಪ್ರಕರಣಗಳಲ್ಲಿ ಶೇ 20ಕ್ಕಿಂತ ಹೆಚ್ಚು ಸೈಬರ್ ಕ್ರೈಮ್‌ಗೆ ಸಂಬಂಧಿಸಿವೆ: ಎಂಎ ಸಲೀಂ
ಕರ್ನಾಟಕದಲ್ಲಿ ದಾಖಲಾದ ಒಟ್ಟು ಪೊಲೀಸ್ ಪ್ರಕರಣಗಳಲ್ಲಿ ಶೇ 20ರಷ್ಟು ಸೈಬರ್ ಅಪರಾಧಕ್ಕೆ ಸಂಬಂಧಿಸಿವೆ ಎಂದು ಸಿಐಡಿ ಪೊಲೀಸ್ ಮಹಾನಿರ್ದೇಶಕ ಎಂಎ ಸಲೀಂ ಶನಿವಾರ ಹೇಳಿದ್ದಾರೆ.

ಎಚ್ಚರ..! ನಿಮಗೆ ವಿದೇಶದ ಅಪರಿಚಿತ ನಂಬರಿನಿಂದ ಕರೆ ಬಂದಿದೆಯೇ?
ಸೈಬರ್ ಕ್ರೈಮ್ ನಡೆಸುವ ಕ್ರಿಮಿನಲ್ ಗಳು ಪದೇಪದೇ ತಮ್ಮ ಕಾರ್ಯವಿಧಾನಗಳನ್ನು ಬದಲಿಸುತ್ತಿರುತ್ತಾರೆ ಎಂಬುದು ಪೊಲೀಸ್ ತನಿಖೆಯಿಂದ ತಿಳಿಯುತ್ತದೆ. ಇತ್ತೀಚೆಗೆ ಅವರು ಹೊಸ ವಿಧಾನವೊಂದನ್ನು ಅನುಸರಿಸುತ್ತಿದ್ದಾರೆ. ಅದೇನೆಂದು ತಿಳಿಯಿರಿ.

ಬೆಂಗಳೂರು: 75 ಲಕ್ಷ ರೂಪಾಯಿ ಆಸೆಗಾಗಿ 35 ಲಕ್ಷ ರೂಪಾಯಿ ಕಳೆದುಕೊಂಡ ಟೆಕ್ಕಿ!
ಬೆಂಗಳೂರಿನಲ್ಲಿರುವ ಕೇರಳದ 36 ವರ್ಷದ ಮಹಿಳಾ ಸಾಫ್ಟ್ ವೇರ್ ಇಂಜಿನಿಯರ್ 75 ಲಕ್ಷ ರೂಪಾಯಿ ಆಸೆಗಾಗಿ 35 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಮದುವೆ ಹೆಸರಲ್ಲಿ ಇ-ಮ್ಯಾಟ್ರಿಮೋನಿ ದಂಧೆ: ನೈಜೀರಿಯಾ ಮೂಲದ 6 ಮಂದಿ ಸೆರೆ
ಮದುವೆಯ ಹೆಸರಲ್ಲಿ ಜನರನ್ನು ಆನ್‌ಲೈನ್‌ನಲ್ಲಿ ವಂಚಿಸಿದ ಆರೋಪದ ಮೇಲೆ ಆರು ನೈಜೀರಿಯಾ ಮೂಲದ ಗ್ಯಾಂಗ್ ಅನ್ನು ವೈಟ್‌ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಅವರಿಂದ ನಾಲ್ಕು ಲ್ಯಾಪ್‌ಟಾಪ್ ಮತ್ತು 10 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

