CT Ravi

ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಕೇಂದ್ರದ ಜಮೀನು ವೀಕ್ಷಿಸಿದ ಸಿ.ಟಿ.ರವಿ
ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಕೇಂದ್ರ ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವಂತೆ ರಾಜ್ಯ ಸರ್ಕಾರ ಮೈಸೂರಿನಲ್ಲಿ ಮಂಜೂರು ಮಾಡಿರುವ ಮೂರು ಎಕರೆ ಜಾಗವನ್ನು ಇಂದು ಪ್ರವಾಸೋದ್ಯಮ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ವೀಕ್ಷಿಸಿದರು.

ಸಂಕ್ರಾಂತಿಯಂದು ಕೇರಳ ಪ್ರವಾಸೋದ್ಯಮ ಇಲಾಖೆ ಟ್ವೀಟ್: ರಿ ಟ್ವೀಟ್ ಮಾಡಿ ರವಿ ಎಡವಟ್ಟು!
ಬೀಫ್ ಖಾದ್ಯವೊಂದರ ಕುರಿತು ಕೇರಳ ಪ್ರವಾಸೋದ್ಯಮ ಇಲಾಖೆ ಟ್ವಿಟರ್ ಮೂಲಕ ಮಾಡಿದ ಟ್ವೀಟ್ ಭಾರೀ ವಿವಾದಕ್ಕೆ ಗ್ರಾಸವಾಗಿದೆ.

ಕರ್ನಾಟಕ: ದಸರಾ ರೀತಿ ರಾಜ್ಯದಲ್ಲಿ ಮತ್ತಷ್ಟು ಉತ್ಸವ ನಡೆಸಲು ಸರ್ಕಾರ ಚಿಂತನೆ
ದಸರಾ ರೀತಿಯಲ್ಲಿಯೇ ರಾಜ್ಯದಲ್ಲಿ ಇನ್ನೂ ನಾಲ್ಕು ಉತ್ಸವಗಳನ್ನು ಅದ್ಧೂರುಯಾಗಿ ಆಚರಿಸಲು ರಾಜ್ಯ ಸರ್ಕಾರ ಚಿಂತನ ನಡೆಸಿದೆ ಎಂದು ತಿಳಿದುಬಂದಿದೆ.

ಸೈದ್ಧಾಂತಿಕ ಭಿನ್ನಾಭಿಪ್ರಾಯ ಸಾಹಿತ್ಯಕ್ಕೆ ಸಲ್ಲದು, ಕನ್ನಡ, ಸಂಸ್ಕೃತಿ ಬಗ್ಗೆ ಸಿ.ಟಿ.ರವಿಗೆ ಗಂಧಗಾಳಿಯೇ ಇಲ್ಲ: ವಿಠ್ಠಲ್ ಹೆಗ್ಡೆ
ಅಕ್ಷರ ಹಬ್ಬವಾಗಬೇಕಿರುವ ಚಿಕ್ಕಮಗಳೂರಿನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಗ್ರಹಣ ಬಡಿದಿದ್ದು, ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಜಿಲ್ಲಾಡಳಿತ ಮತ್ತು ಸಾಹಿತ್ಯ ಪರಿಷತ್ತಿನ ನಡುವೆ ಗುದ್ದಾಟ ಆರಂಭವಾಗಿದೆ.

ಮುಸ್ಲಿಮರ ಮೇಲೆ ದೌರ್ಜನ್ಯ ನಡೆದಿದ್ದರೆ ಜನಸಂಖ್ಯೆ ಶೇ.19ರಷ್ಟು ಹೆಚ್ಚಾಗುತ್ತಿರಲಿಲ್ಲ: ಸಚಿವ ಸಿ.ಟಿ.ರವಿ
ಭಾರತದಲ್ಲಿ ಧಾರ್ಮಿಕ ದೌರ್ಜನ್ಯ ನಡೆದಿದ್ದರೆ ದೇಶದ ಲ್ಲಿನ ಮುಸ್ಲಿಮರ ಸಂಖ್ಯೆ ಹೆಚ್ಚಾಗುತ್ತಿರಲಿಲ್ಲ. 1.5ರಷ್ಟು ಇದ್ದ ಮುಸ್ಲಿಮರ ಸಂಖ್ಯೆ 19 ರಷ್ಟು ಹೆಚ್ಚಾಗಿದೆ.

ಕಲ್ಕುಳಿ ವಿಠಲ್ ಹೆಗ್ಡೆ ಬದಲು ಸಿದ್ದರಾಮಯ್ಯ ಜಿಲ್ಲಾ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಲಿ: ಸಿಟಿ ರವಿ
ನಾವು ಮತಪತ್ರಗಳನ್ನು ನಂಬುತ್ತೇವೆ ಹೊರತು ಬುಲೆಟ್‌ಗಳಲ್ಲ, ಆದ್ದರಿಂದ ಮಾಜಿ ನಕ್ಸಲ್ ನಾಯಕರೊಬ್ಬರು ಜಿಲ್ಲಾ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗುವುದನ್ನು ನಾವು ವಿರೋಧಿಸುತ್ತೇವೆ ಎಂದು ಕನ್ನಡ ಮತ್ತುಸಂಸ್ಕೃತಿ, ಪ್ರವಾಸೋದ್ಯಮ ಸಚಿವ ಸಿ ಟಿ ರವಿ,ಹೇಳಿದ್ದಾರೆ.

ಹಿಂಸಾಚಾರ ಸೃಷ್ಟಿಸಿದರೆ ಆಸ್ತಿ ಜಪ್ತಿ, ಉ.ಪ್ರದೇಶ ಮಾದರಿ ಅನುಸರಿಸಲು ಸರ್ಕಾರ ಚಿಂತನೆ
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಸುವ ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿಗೆ ಹಾನಿಯುಂಟು ಮಾಡಿದರೆ, ಉತ್ತರಪ್ರದೇಶ ಮಾದರಿಯಲ್ಲಿ ಅಂತಹವರ ಆಸ್ತಿಯನ್ನು ಜಪ್ತಿ ಮಾಡಲಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿಯವರು ಹೇಳಿದ್ದಾರೆ.

ಪೌರತ್ವ ಕಾಯ್ದೆ: ಬಿಜೆಪಿ ಜನಾದೇಶವನ್ನು ಗೌರವಿಸುತ್ತಿದೆ- ಸಿ.ಟಿ.ರವಿ
ಯಾವ ಕಾರಣಕ್ಕೆ ಅಧಿಕಾರಕ್ಕೆ ಬಂದಿತ್ತೋ ಅದೇ ಕಾರಣಕ್ಕೆ ಕೇಂದ್ರ ಸರ್ಕಾರ ಪೌರತ್ವ ಕಾಯ್ದೆಯನ್ನು ಜಾರಿಗೆ ತಂದಿದೆ. ಜನರು ಬಯಸಿದ್ದನ್ನೇ ಬಿಜೆಪಿ ಮಾಡಿದೆ. ಇದನ್ನು ವಿರೋಧಿಸುವವರು ಪ್ರಜಾಪ್ರಭುತ್ವದ ವಿರೋಧಿಗಳು, ಜನಾದೇಶ ವಿರೋಧಿಸುವವರಾಗುತ್ತಾರೆಂದು ಸಚಿವ ಸಿ.ಟಿ.ರವಿಯವರು ಹೇಳಿದ್ದಾರೆ.

ನಾವು ಬೀದಿಗಿಳಿದರೆ ನಿಮ್ಮ ಗತಿ ಏನಾಗುತ್ತದೆ ಎಂಬುದನ್ನು ಆಲೋಚಿಸಿ: ಯು.ಟಿ.ಖಾದರ್‌ಗೆ ಸಿ.ಟಿ.ರವಿ ಎಚ್ಚರಿಕೆ
ಪೌರತ್ವ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸಿದ್ದೇ ಆದಲ್ಲಿ ರಾಜ್ಯ ಹೊತ್ತಿ ಉರಿಯಲಿದೆ ಎಂಬ ಕಾಂಗ್ರೆಸ್ ಶಾಸಕ ಯು.ಟಿ. ಖಾದರ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಪ್ರವಾಸೋದ್ಯಮ, ಕನ್ನಡ ಸಂಸ್ಕೃತಿ ಸಚಿವ ಸಿ.ಟಿ. ರವಿ...

