ಕಲ್ಕುಳಿ ವಿಠಲ್ ಹೆಗ್ಡೆ ಬದಲು ಸಿದ್ದರಾಮಯ್ಯ ಜಿಲ್ಲಾ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಲಿ: ಸಿಟಿ ರವಿ
ನಾವು ಮತಪತ್ರಗಳನ್ನು ನಂಬುತ್ತೇವೆ ಹೊರತು ಬುಲೆಟ್ಗಳಲ್ಲ, ಆದ್ದರಿಂದ ಮಾಜಿ ನಕ್ಸಲ್ ನಾಯಕರೊಬ್ಬರು ಜಿಲ್ಲಾ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗುವುದನ್ನು ನಾವು ವಿರೋಧಿಸುತ್ತೇವೆ ಎಂದು ಕನ್ನಡ ಮತ್ತುಸಂಸ್ಕೃತಿ, ಪ್ರವಾಸೋದ್ಯಮ ಸಚಿವ ಸಿ ಟಿ ರವಿ,ಹೇಳಿದ್ದಾರೆ.

ಚಿತ್ರದುರ್ಗ: ನಾವು ಮತಪತ್ರಗಳನ್ನು ನಂಬುತ್ತೇವೆ ಹೊರತು ಬುಲೆಟ್ಗಳಲ್ಲ, ಆದ್ದರಿಂದ ಮಾಜಿ ನಕ್ಸಲ್ ನಾಯಕರೊಬ್ಬರು ಜಿಲ್ಲಾ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗುವುದನ್ನು ನಾವು ವಿರೋಧಿಸುತ್ತೇವೆ ಎಂದು ಕನ್ನಡ ಮತ್ತುಸಂಸ್ಕೃತಿ, ಪ್ರವಾಸೋದ್ಯಮ ಸಚಿವ ಸಿ ಟಿ ರವಿ,ಹೇಳಿದ್ದಾರೆ.
ನಗರದ ಮಾಧ್ಯಮ ಪ್ರತಿನಿಧಿಗಳಿಡನೆ ಮಾತನಾಡಿದ ಸಚಿವರು ಕಲ್ಕುಳಿ ವಿಠಲ್ ಹೆಗ್ಡೆ ಅವರನ್ನು ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವುದನ್ನು ತೀವ್ರವಾಗಿ ವಿರೋಧಿಸಿದರು. ಸಮಾಜದ ಅಭಿವೃದ್ಧಿಗಾಗಿ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಲಾಗಿದೆ, ಆದರೆ ಸಮಾಜದಲ್ಲಿ ಬಿರುಕು ಮೂಡಿಸುವವರನ್ನು ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಮಾಡಬಾರದು. ನಕ್ಸಲ್ ನಾಯಕರಾಗಿದ್ದವರನ್ನು ಸಮ್ಮೇಳನ ಅಧ್ಯಕ್ಷರನ್ನಾಗಿಸಿರುವುದು ತಪ್ಪು ಎಂದು ಪ್ರತಿಪಾದಿಸಿದರು.
ಸಮ್ಮೇಳನ ಸಂಘಟನೆ ಕುರಿತು ಭಿನ್ನಾಭಿಪ್ರಾಯ ವ್ಯಕ್ತವಾಗುತ್ತಿರುವ ಕಾರಣ ಜಿಲ್ಲಾಡಳಿತ ಸಮ್ಮೇಳನಕ್ಕೆ ನಿಧಿ ಬಿಡುಗಡೆಯನ್ನು ತಡೆ ಹಿಡಿದಿದೆ. ನಿಧಿಗಳ ವಿಷಯ ಇನ್ನೂ ಚರ್ಚೆಯಲ್ಲಿದೆ. ಸಮ್ಮೇಳನಕ್ಕೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಿದರೆ ಸರ್ಕಾರವು ಯಾವುದೇ ತೊಂದರೆಯಿಲ್ಲದೆ ಹಣವನ್ನು ಬಿಡುಗಡೆ ಮಾಡುತ್ತದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮೇಳನದ ದ ಅಧ್ಯಕ್ಷರಾದರೆ ನಾವು ಅದನ್ನು ಭವ್ಯವಾಗಿ ಆಚರಿಸಲು ಸಿದ್ದರಿದ್ದೇವೆ. ಹಾಗೆಯೇ ನಾನು ಸಹ ಮುಂಚೂಣಿಯಲ್ಲಿ ನಿಂತು ಕಾರ್ಯಕ್ರಮವನ್ನು ನಡೆಸಿಕೊಡುವುದಕ್ಕೆ ಸಿದ್ದ. ಆದರೆ ನಕ್ಸಲ್ ಹಿನ್ನೆಲೆ ಇರುವ ಕಲ್ಕುಳಿ ಹೆಗ್ಡೆ ಅಧ್ಯಕ್ಷರಾದರೆ ಇದು ಸಾಧ್ಯವಿಲ್ಲ ಎಂದು ಸಚಿವ ಸಿಟಿ ರವಿ ಹೇಳಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜನವರಿ 10 ಮತ್ತು 11 ರಂದು ಶೃಂಗೇರಿಯ ಆದಿ ಚುಂಚನಗಿರಿ ಸಮುದ್ರಯಾನ ಭವನದಲ್ಲಿ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


