CPM, Congress

ಸ್ವಪಕ್ಷದ ಶಾಸಕರಿಂದಲೇ ಛೀ.. ಥೂ.. ಅಂತ ಉಗಿಸಿಕೊಳ್ಳುತ್ತಿದ್ದೀರಿ, ಇನ್ಯಾವ ಮುಖವಿಟ್ಟುಕೊಂಡು ಆ ಕುರ್ಚಿಯಲ್ಲಿ ಕುಳಿತ್ತಿದ್ದೀರಿ...?
ರಾಜ್ಯದ ಬೊಕ್ಕಸವನ್ನು ಲೂಟಿ ಹೊಡೆದು ಸರ್ಕಾರವನ್ನು ದಿವಾಳಿ ಮಾಡಿರುವ ಸಿಎಂ ಡಿಕೆ.ಶಿವಕುಮಾರ್ ಅವರೇ, ಈಗ ನಿಮ್ಮ ಸ್ವಂತ ಪಕ್ಷದ ಶಾಸಕರೇ ನಿಮ್ಮ ದರಿದ್ರ ಸರ್ಕಾರದ ಮುಖಕ್ಕೆ ಉಗಿದು ರಾಜೀನಾಮೆ ಎಸೆಯುತ್ತಿದ್ದಾರೆ.

ನನ್ನ ಕ್ಷೇತ್ರದ ಜನರ ಹಿತಕ್ಕಾಗಿ ರಾಜೀನಾಮೆ ನೀಡಿದ್ದೇನೆ, ಹಿಂಪಡೆಯುವ ಪ್ರಶ್ನೆಯೇ ಇಲ್ಲ: ಶಾಸಕ ಯಶವಂತರಾಯಗೌಡ ಪಾಟೀಲ್ ಸ್ಪಷ್ಟನೆ
ನನ್ನ ಕ್ಷೇತ್ರದ ಜನರ ಹಿತಕ್ಕಾಗಿ ತೆಗೆದುಕೊಂಡಿರುವ ನಿರ್ಧಾರಕ್ಕೆ ನಾನು ಶೇ.100ರಷ್ಟು ಬದ್ಧನಾಗಿದ್ದೇನೆ. ಇಂಡಿ ಹಾಗೂ ಚಡಚಣ ಎರಡೂ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ ನನ್ನ ಮನವಿಗೆ ಸೂಕ್ತ ಮಹತ್ವ ನೀಡಲಾಗಿಲ್ಲ.

ಆ ಮೆಂಟಲ್ ಬಗ್ಗೆ ನನ್ನ ಕೇಳಬೇಡ್ರಿ; ನೀವ್ಯಾಕೆ ದಿನಾ ಆ ವ್ಯಕ್ತಿಗೆ ಮೈಕ್ ಹಿಡೀತೀರಾ: ಮಾಧ್ಯಮ ವಿರುದ್ಧ ಪ್ರತಾಪ್ ಸಿಂಹ ಗರಂ!
ಮಾಜಿ ಸಂಸದ ಪ್ರತಾಪ್ ಸಿಂಹ ಮುಟ್ಟಾಳ, ನಾಲಾಯಕ್, ನಾಮರ್ದ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿಕೆಗೆ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಂದು ಸುದ್ದಿಗಾರರ ಜೊತೆ ಮಾತನಾಡಿದ ಸಿಂಹ, ಮಾಧ್ಯಮ ವಿರುದ್ಧವೇ ಗರಂ ಆಗಿದ್ದಾರೆ.

115 ಕ್ಷೇತ್ರ, ಒಂದೇ ಪ್ರಶ್ನೆ: 2024ರ ಲೋಕಸಭೆ ಚುನಾವಣೆ ಟ್ರೆಂಡ್ ಅನ್ನು ಯೋಗಿ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಬದಲಿಸಬಹುದೇ?
2027ರ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ಆರಂಭಿಸಿರುವ ಸಂದರ್ಭದಲ್ಲಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯಾದ್ಯಂತ ನಡೆಸುತ್ತಿರುವ ಇತ್ತೀಚಿನ ಜನಸಂಪರ್ಕ ಅಭಿಯಾನದ ಪ್ರಮುಖ ಪ್ರಶ್ನೆ ಇದಾಗಿದೆ.

‘ಒಂದು ಹಾಡನ್ನು ರಾಜಕೀಯ ಅಸ್ತ್ರವಾಗಿಸಿಕೊಂಡು, ಅದನ್ನೇ ಸರಿಯಾಗಿ ಹಾಡಲು ಸಾಧ್ಯವಾಗದಿರುವುದಕ್ಕಿಂತ ದೊಡ್ಡ ರಾಜಕೀಯ ವೈರುಧ್ಯ ಮತ್ತೊಂದಿಲ್ಲ’: BJP ಕುರಿತು ಕಾಂಗ್ರೆಸ್ ವ್ಯಂಗ್ಯ
ಸ್ವಾತಂತ್ರ್ಯ ಹೋರಾಟದ ಕಾಲದಲ್ಲೇ ವಂದೇ ಮಾತರಂ ಕುರಿತು ರಾಷ್ಟ್ರೀಯ ನಾಯಕರು ಗಂಭೀರ ಚರ್ಚೆ ನಡೆಸಿ, ದೇಶದ ಬಹುತ್ವವನ್ನು ಗೌರವಿಸುವ ಮಾರ್ಗವನ್ನು ರೂಪಿಸಿದ್ದರು.

ಸಿದ್ದರಾಮಯ್ಯ ಅರಮನೆ ಕಟ್ಟಿಲ್ಲ, ಸಣ್ಣದೊಂದು ಮನೆ ಕಟ್ಟಿದ್ದಾರೆ; ಅವರು ವೀಕ್ ಆಗಿಲ್ಲ, ರಾಜಕೀಯದಲ್ಲಿ ಟಗರು: ಜಮೀರ್ ಅಹ್ಮದ್ ಖಾನ್
ಸಿದ್ದರಾಮಯ್ಯ ನಮ್ಮ ನಾಯಕರು. ಅವರು ವೀಕ್ ಆಗೋಕೆ ಸಾಧ್ಯವಿಲ್ಲ, ಅವರು ಎಲ್ಲ ಜಾತಿ ಮತ್ತು ವರ್ಗದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ನಿಜವಾದ ಅಹಿಂದ ನಾಯಕ. ಅವರು ವೀಕ್ ಆಗಲ್ಲ,

ಬರದ ಸಮಸ್ಯೆ ಬದಲು ಸಿಎಂ ಬದಲಾವಣೆ ವಿಚಾರದಲ್ಲಿ ಗಮನ ಹರಿಸಿದ್ದಾರೆ; 2028ರಲ್ಲಿ ಕಾಂಗ್ರೆಸ್ ಮಣ್ಣು ಮುಕ್ಕುವುದು ಖಚಿತ..!
ಬರದ ವಿಚಾರದಲ್ಲಿ ಸರ್ಕಾರ ಜನರಿಗೆ ದ್ರೋಹ ಮಾಡಿದೆ. ರಾಜ್ಯ ಎದುರಿಸುತ್ತಿರುವ ಆರ್ಥಿಕ ಸಂಕಷ್ಟವನ್ನು ಹಣಕಾಸು ಇಲಾಖೆಯೇ ಬಹಿರಂಗಪಡಿಸಿದೆ. ಸರ್ಕಾರ ತನ್ನ ಕಾರ್ಯವೈಖರಿಯನ್ನು ಸರಿಪಡಿಸಿಕೊಳ್ಳದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು.

'ಯಾವ ಯೋಜನೆ ಕೈಬಿಡಬೇಕು, ಯಾವುದು ಜಾರಿಗೆ ತರಬೇಕೆಂಬುದು ನನಗೆ ಗೊತ್ತು': ಹಣಕಾಸು ಇಲಾಖೆ ಸಲಹೆ ಬೆನ್ನಲ್ಲೇ ಡಿಕೆಶಿ ಸ್ಪಷ್ಟನೆ
ಮುಖ್ಯಮಂತ್ರಿಗಳ ಕಚೇರಿಗೆ ನೀಡಿರುವ ಟಿಪ್ಪಣಿಯಲ್ಲಿ ಹಣಕಾಸು ಇಲಾಖೆ, ಲಭ್ಯವಿರುವ ಹಣಕಾಸಿನ ಮಿತಿಯನ್ನು ವಾಸ್ತವಿಕವಾಗಿ ಪರಿಗಣಿಸುವುದು ಸೂಕ್ತ. ಈಗಾಗಲೇ ಬಾಕಿ ಉಳಿದಿರುವ ಕಾಮಗಾರಿಗಳ ವೆಚ್ಚದ ಹೊರೆಯನ್ನು ಮತ್ತಷ್ಟು ಹೆಚ್ಚಿಸುವ ಯಾವುದೇ ಕ್ರಮ ಕೈಗೊಳ್ಳದಿರುವುದು ಒಳಿತು.

ನ್ಯೂನತೆಗಳನ್ನು ಸರಿಪಡಿಸಲು ಕಸ್ತೂರಿರಂಗನ್ ವರದಿಯ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಭೌತಿಕ ಪರಿಶೀಲನೆ: ಸಿಎಂ ಶಿವಕುಮಾರ್
ಕಸ್ತೂರಿರಂಗನ್ ವರದಿಯ ವ್ಯಾಪ್ತಿಗೆ ಬರುವ ಪ್ರದೇಶಗಳನ್ನು ಗ್ರಾಮ ಮತ್ತು ಸಮೀಕ್ಷೆ ಸಂಖ್ಯೆ ಮಟ್ಟದಲ್ಲಿ ರಾಜ್ಯ ಸರ್ಕಾರ ಭೌತಿಕವಾಗಿ ಪರಿಶೀಲನೆ ನಡೆಸುತ್ತದೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು.

