Covid19

ವೈದ್ಯ, ಶುಶ್ರೂಷಕಿಯರಿಗೆ ಕೊವಿಡ್ ಸೋಂಕು: ಸುಳ್ಯ ಸರ್ಕಾರಿ ಆಸ್ಪತ್ರೆ ಸೀಲ್‍ಡೌನ್
ವೈದ್ಯರೊಬ್ಬರು ಮತ್ತು ಮೂವರು ಶುಶ್ರೂಷಕಿಯರು ಸೇರಿದಂತೆ ಆರು ಜನರಿಗೆ ಕೊವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಯನ್ನು ಎರಡು ದಿನಗಳವರೆಗೆ ಮುಚ್ಚಲಾಗಿದೆ.

ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ದಂಪತಿಗೆ ಕೊರೋನಾ ದೃಢ
ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಹಾಗೂ ಅವರ ಪತ್ನಿ ಪ್ರತಿಭಾ ಶರತ್ ಬಚ್ಚೇಗೌಡ ಅವರುಗಳಿಗೆ ಕೊರೋನಾವೈರಸ್ ಸೋಂಕು ದೃಢವಾಗಿದೆ..

ಬೆಂಗಳೂರಿನ 15 ಆಸ್ಪತ್ರೆಗಳಿಗೆ ಅಲೆದರೂ ಚಿಕಿತ್ಸೆ ಸಿಗದೆ ವೃದ್ಧೆ ಸಾವು!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಆಸ್ಪತ್ರೆಯ ಅಮಾನವೀಯ ಕರಾಳ ಮುಖಗಳು ಬೆಳಕಿಗೆ ಬರುತ್ತಿವೆ.

ಪ್ರವಾಸಿಗರಿಂದ ಕೊರೋನಾ ಹರಡುವ ಭೀತಿ: ತಾಜ್ ಮಹಲ್ ವೀಕ್ಷಣೆಗೆ ಸಿಕ್ಕಿಲ್ಲ ಅನುಮತಿ
ತಾಜ್ ಮಹಲ್ ನೋಡಬೇಕೆನ್ನುವ ಪ್ರವಾಸಿಗರ ನಿರೀಕ್ಷೆ ಸಧ್ಯ ಈಡೇರುವಂತೆ ಕಾಣುತ್ತಿಲ್ಲ. ಏಕೆಂದರೆ ಕೊರೋನಾ ಲಾಕ್ ಡೌನ್ ನಂತರ ಸೋಮವಾರದಿಂದ ತಾಜ್ ಮಹಲ್ ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶ ಕಲ್ಪಿಸಿಕೊಡಲು ಸಾಧ್ಯವಿಲ್ಲ ಎಂದು ಆಗ್ರಾ ನಗರಾಡಳಿತ ಹೇಳಿದೆ. ಸ್ಮಾರಕವನ್ನು ನೋಡಲು ಬರುವ ಪ್ರವಾಸಿಗರಿಂದ ಆಗ್ರಾದಲ್ಲಿ ಹೊಸ ಕೊರೋನಾ ಪ್ರಕರಣಗಳು ಹೆಚ್ಚುವ ಅಪಾಯವಿದ್ದು ಇದಕ್ಕಾಗಿ ತಾ

ರಾಣಿಬೆನ್ನೂರು: ಕೋವಿಡ್ ಶಂಕಿತನ ಶವ ಬಸ್ ನಿಲ್ದಾಣದಲ್ಲಿ ಪತ್ತೆ, ತಪ್ಪಿತಸ್ಥರ ವಿರುದ್ಧ ಕ್ರಮ ಎಂದ ಡಿಎಚ್‌ಒ
ಕೊರೋನಾದಿಂದ ಸಾವನ್ನಪ್ಪಿದ್ದನೆಂದು ಶಂಕಿಸಲಾದ ವ್ಯಕ್ತಿಯ ಶವವನ್ನು ಆಸ್ಪತ್ರೆ ಸಮೀಪದ ಬಸ್ ನಿಲ್ದಾಣದಲ್ಲೇ ಇರಿಸಿ ಆಸ್ಪತ್ರೆ ಸಿಬ್ಬಂದಿಗಳು ನಿರ್ಲಕ್ಷ ಮೆರೆದ ಘಟನೆ ಹಾವೇರಿ ಜಿಲ್ಲೆ ರಾಣಿಬೆನ್ನೂರಿನಲ್ಲಿ ನಡೆದಿದೆ.

ಹೋಂ ಐಸೋಲೇಷನ್ ಮಾರ್ಗಸೂಚಿ ಪ್ರಕಟ: ಕೋವಿಡ್ ನಿರ್ವಹಣೆಗಾಗಿ ಬೂತ್ ಮಟ್ಟದ ಟಾಸ್ಕ್ ಫೋರ್ಸ್ ಕಮಿಟಿ ರಚನೆ; ಸಚಿವ ಸುಧಾಕರ್
ರಾಜ್ಯದಲ್ಲಿ ಕೊರೋನ ನಿಯಂತ್ರಿಸುವ ಉದ್ದೇಶದಿಂದ ಕೋವಿಡ್ ಲಕ್ಷಣರಹಿತ, ಬೇರೆ ರೋಗಲಕ್ಷಣಗಳಿಲ್ಲದ ಮತ್ತು 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸೋಂಕಿತರನ್ನು ಹೋಂ ಐಸೋಲೇಷನ್ ಮಾಡಲು ನೂತನ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಕೇರಳಕ್ಕೆ ಮತ್ತೆ ಕೊರೋನಾಘಾತ; ಒಂದೇ ದಿನ 118 ಸೋಂಕು ಪ್ರಕರಣ ದಾಖಲು
ಕೊರೋನಾ ವೈರಸ್ ನಿಯಂತ್ರಣದಲ್ಲಿ ಮಹತ್ತರ ಮುನ್ನಡೆ ಸಾಧಿಸಿದ್ದ ಕೇರಳದಲ್ಲಿ ಮತ್ತೆ ಕೊರೋನಾ ವೈರಸ್ ತನ್ನ ಆರ್ಭಟ ಶುರು ಮಾಡಿದ್ದು ನಿನ್ನೆ ಒಂದೇ ದಿನ ಕೇರಳದಲ್ಲಿ 118 ಹೊಸ ಸೋಂಕು ಪ್ರಕರಣ ದಾಖಲಾಗಿವೆ.

ಉಡುಪಿ; ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿಯಲ್ಲಿ ಕೋವಿಡ್ ಸೋಂಕು ದೃಢ
ಉಡುಪಿ ಜಿಲ್ಲೆ ಪಡುಬಿದ್ರಿಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯೋರ್ವಳಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಖಾತರಿಗೆ ದಿಢೀರ್ ಪೊಲೀಸ್ ದಾಳಿ: ಭಾಸ್ಕರ್ ರಾವ್
ನಗರದಲ್ಲಿ ಮಹಾಮಾರಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದನ್ನು ಸಿಲಿಕಾನ್ ಸಿಟಿ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ

