Covid-19 Vaccine

ಸೆಪ್ಟೆಂಬರ್ 5 ರೊಳಗೆ ಎಲ್ಲಾ ಶಾಲಾ ಶಿಕ್ಷಕರಿಗೆ ಆದ್ಯತೆ ಮೇಲೆ ಲಸಿಕೆ ನೀಡಿ: ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವ ಸೂಚನೆ
ಈ ತಿಂಗಳು ರಾಜ್ಯಗಳಿಗೆ ಹೆಚ್ಚುವರಿಯಾಗಿ ಎರಡು ಕೋಟಿಗೂ ಹೆಚ್ಚು ಕೋವಿಡ್-19 ಲಸಿಕೆ ಡೋಸ್‌ಗಳನ್ನುಒದಗಿಸಲಾಗುತ್ತಿದ್ದು, ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಗೂ ಮುನ್ನ ಎಲ್ಲಾ ಶಾಲಾ ಶಿಕ್ಷಕರಿಗೆ ಆದ್ಯತೆ ಮೇಲೆ ಲಸಿಕೆ ಹಾಕುವಂತೆ ಕೇಂದ್ರ ಆರೋಗ್ಯ ಸಚಿವ ಸೂಚಿಸಿದ್ದಾರೆ.

ಕೋವಿಡ್-19: ಶಾಲೆಗಳ ಪುನರಾರಂಭಕ್ಕೆ ಲಸಿಕೆ ಪೂರೈಕೆಗೆ ಖಾಸಗಿ ಆಸ್ಪತ್ರೆಗಳ ಮೊರೆ ಹೋಗಿರುವ ಕೇಂದ್ರ ಸರ್ಕಾರ
ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದ ಕಳೆದ ಒಂದೂವರೆ ವರ್ಷಗಳಿಂದ ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲಿ ಉಳಿದಿದ್ದಾರೆ. ಈ ಬಾರಿ ಶಾಲೆಗಳನ್ನು ಆರಂಭಿಸಲೇಬೇಕೆಂಬ ಒತ್ತಾಯ ಬಹುತೇಕ ಪೋಷಕರಿಂದ ಕೇಳಿಬರುತ್ತಿದೆ.

ಕೋವಿಡ್-19 ಮರಣ ಪ್ರಮಾಣ ತಗ್ಗಿಸಿದ ಲಸಿಕೆ: ಬೆಂಗಳೂರು ಆಸ್ಪತ್ರೆ ವರದಿ
ನಗರದಲ್ಲಿ COVID-19 ಸೋಂಕುಗಳ ಪ್ರಗತಿಯ ಹೊರತಾಗಿಯೂ ಸಿಲಿಕಾನ್ ಸಿಟಿಯಲ್ಲಿ ಕೋವಿಡ್-19 ಮರಣ ಪ್ರಮಾಣ ತಗ್ದಿದ್ದು ಇದಕ್ಕೆ ಕೋವಿಡ್ ಲಸಿಕೆಗಳು ಕಾರಣ ಎಂದು ಹೇಳಲಾಗಿದೆ.

ದೇಶದ ಶೇ. 70 ರಷ್ಟು ಜನರಿಗೆ ಕೋವಿಡ್ ಲಸಿಕೆ ನೀಡಲು 10 ವರ್ಷಬೇಕು ಎಂದು ವ್ಯಂಗ್ಯವಾಡಿದ್ದ ಕಾಂಗ್ರೆಸಿಗರೇ ಸ್ವಲ್ಪ ಕಣ್ಣುಬಿಟ್ಟು ನೋಡುವಿರಾ?: ಬಿಜೆಪಿ
ಕೋವಿಡ್ ಲಸಿಕೆ ವಿತರಣೆ ಕುರಿತು ವ್ಯಂಗ್ಯವಾಡಿದ್ದ ಕಾಂಗ್ರೆಸ್ ನಾಯಕರಿಗೆ ರಾಜ್ಯ ಬಿಜೆಪಿ ಶನಿವಾರ ತಿರುಗೇಟು ನೀಡಿದೆ.

ರಾಜ್ಯದಲ್ಲಿ 16,673 ಸೇರಿ ದೇಶದಲ್ಲಿ ಸುಮಾರು 2.27 ಲಕ್ಷ ಗರ್ಭೀಣಿಯರಿಗೆ ಮೊದಲ ಡೋಸ್ ಕೋವಿಡ್ ಲಸಿಕೆ- ಕೇಂದ್ರ
ಮಹತ್ವದ ಬೆಳವಣಿಗೆಯೊಂದರಲ್ಲಿ ಸದ್ಯ ನಡೆಯುತ್ತಿರುವ ರಾಷ್ಟ್ರೀಯ ಕೋವಿಡ್ ಲಸಿಕಾ ಅಭಿಯಾನದಡಿ ಕರ್ನಾಟಕದಲ್ಲಿ ಸುಮಾರು 16,673 ಗರ್ಭೀಣಿಯರು ಮೊದಲ ಡೋಸ್ ಕೋವಿಡ್ ಲಸಿಕೆ ಪಡೆದಿರುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ.

ರಾಜ್ಯಗಳ ಬಳಿ ಇನ್ನೂ 2.60 ಕೋಟಿ ಡೋಸ್ ಲಸಿಕೆ ಇದೆ: ಕೇಂದ್ರ ಸರ್ಕಾರ
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ ಇನ್ನೂ 2.60 ಕೋಟಿ ಡೋಸ್ ಲಸಿಕೆ ಬಳಕೆಯಾಗದೇ ಉಳಿದಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ರಾಜ್ಯಗಳ ಬಳಿ ಇನ್ನೂ 1.24 ಕೋಟಿ ಡೋಸ್ ಕೋವಿಡ್ ಲಸಿಕೆ ಉಳಿದಿದೆ: ಕೇಂದ್ರ ಸರ್ಕಾರ
ದೇಶದ ಹಲವು ರಾಜ್ಯಗಳು ಕೋವಿಡ್ ಲಸಿಕೆಯ ಕೊರತೆಯ ಕುರಿತು ವರದಿ ಮಾಡುತ್ತಿರುವ ಬೆನ್ನಲ್ಲೇ ಈ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ ಇನ್ನೂ 1.24 ಕೋಟಿ ಡೋಸ್ ಲಸಿಕೆ ಬಳಕೆಯಾಗದೇ ಉಳಿದಿದೆ ಎಂದು ಹೇಳಿದೆ.

ಸರ್ಕಾರಿ, ಖಾಸಗಿ ಆಸ್ಪತ್ರೆಗಳ ನಡುವೆ ಲಸಿಕೆ ವಿತರಣಾ ಅನುಪಾತದಲ್ಲಿ ಯಾವುದೇ ಬದಲಾವಣೆ ಇಲ್ಲ: ಕೇಂದ್ರ ಸರ್ಕಾರ
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ನಡುವಣ ಈಗಿರುವ 75:25 ಅನುಪಾತದಿಂದ 90:10 ರವರೆಗೆ ಕೋವಿಡ್ ಲಸಿಕೆ ಹಂಚಿಕೆಯನ್ನು ಪರಿಷ್ಕರಿಸುವಂತೆ ಎರಡು ರಾಜ್ಯಗಳ ಒತ್ತಾಯದ ಹೊರತಾಗಿಯೂ, ಇದು ಯಾವುದೇ ಸಂದರ್ಭದಲ್ಲಿಯೂ ಆಗುತ್ತಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಪಪಡಿಸಿದೆ.

ಕೋವಿಡ್-19 ಲಸಿಕೆ: ಅಮೆರಿಕವನ್ನು ಹಿಂದಿಕ್ಕಿದ ಭಾರತ; 32 ಕೋಟಿಗೂ ಹೆಚ್ಚು ಡೋಸ್ ವಿತರಣೆ!
ಜಗತ್ತಿನ ಅತೀ ದೊಡ್ಡ ಲಸಿಕಾ ಅಭಿಯಾನವೆಂದೇ ಖ್ಯಾತಿ ಗಳಿಸಿದ್ದ ಭಾರತದ ಕೋವಿಡ್ ಲಸಿಕೆ ವಿತರಣೆ ಕಾರ್ಯಕ್ರಮ ಮುಂದುವರೆದಿದ್ದು, ಇದೀಗ ಲಸಿಕೆ ವಿತರಣೆಯಲ್ಲಿ ಭಾರತ ಅಮೆರಿಕವನ್ನು ಹಿಂದಿಕ್ಕಿದೆ.

