ರಾಜಕೀಯ

ದೇಶದ ಶೇ. 70 ರಷ್ಟು ಜನರಿಗೆ ಕೋವಿಡ್ ಲಸಿಕೆ ನೀಡಲು 10 ವರ್ಷಬೇಕು ಎಂದು ವ್ಯಂಗ್ಯವಾಡಿದ್ದ ಕಾಂಗ್ರೆಸಿಗರೇ ಸ್ವಲ್ಪ ಕಣ್ಣುಬಿಟ್ಟು ನೋಡುವಿರಾ?: ಬಿಜೆಪಿ

ಕೋವಿಡ್ ಲಸಿಕೆ ವಿತರಣೆ ಕುರಿತು ವ್ಯಂಗ್ಯವಾಡಿದ್ದ ಕಾಂಗ್ರೆಸ್ ನಾಯಕರಿಗೆ ರಾಜ್ಯ ಬಿಜೆಪಿ ಶನಿವಾರ ತಿರುಗೇಟು ನೀಡಿದೆ.

ದೇಶದ ಶೇ. 70 ರಷ್ಟು ಜನರಿಗೆ ಕೋವಿಡ್ ಲಸಿಕೆ ನೀಡಲು 10 ವರ್ಷಬೇಕು ಎಂದು ವ್ಯಂಗ್ಯವಾಡಿದ್ದ ಕಾಂಗ್ರೆಸಿಗರೇ ಸ್ವಲ್ಪ ಕಣ್ಣುಬಿಟ್ಟು ನೋಡುವಿರಾ?: ಬಿಜೆಪಿ
ಸಂಗ್ರಹ ಚಿತ್ರ
Published On :

ಬೆಂಗಳೂರು: ಕೋವಿಡ್ ಲಸಿಕೆ ವಿತರಣೆ ಕುರಿತು ವ್ಯಂಗ್ಯವಾಡಿದ್ದ ಕಾಂಗ್ರೆಸ್ ನಾಯಕರಿಗೆ ರಾಜ್ಯ ಬಿಜೆಪಿ ಶನಿವಾರ ತಿರುಗೇಟು ನೀಡಿದೆ. 

ಸಾಮಾಜಿಕ ಜಾಲತಾಣ ಟ್ವಿಟರ್ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿಯವು, ಮೋದಿ ಸರ್ಕಾರ ಕೇವಲ 205  ದಿನದಲ್ಲಿ 50 ಕೋಟಿ ಡೋಸ್ ಲಸಿಕೆ ನೀಡಿದೆ. ರಾಜೀವ್‌ ಗಾಂಧಿ ಪುತ್ರನಿಗೂ ಸಹಿತ ದೇಶದ ಎಲ್ಲರ ಮಕ್ಕಳಿಗೂ ಲಸಿಕೆ ನೀಡಲಾಗುತ್ತಿದೆ,‌ ದೇಶದ ಶೇ. 70 ರಷ್ಟು ಜನರಿಗೆ ಕೋವಿಡ್ ಲಸಿಕೆ ನೀಡಲು ಹತ್ತು ವರ್ಷಬೇಕು ಎಂದು ವ್ಯಂಗ್ಯವಾಡಿದ್ದ ಕಾಂಗ್ರೆಸಿಗರೇ ಸ್ವಲ್ಪ ಕಣ್ಣುಬಿಟ್ಟು ನೋಡುವಿರಾ? ಎಂದು ಹೇಳಿದೆ. 

ಇದೇ ವೇಳೆ ಸಿದ್ದರಾಮಯ್ಯ ಅವರ ವಿರುದ್ಧ ಕಿಡಿಕಾರಿರುವ ಬಿಜೆಪಿ, ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ ಸೃಷ್ಟಿಸಿದ ಸುಳ್ಳಿನ ಸರಮಾಲೆಗಳೆಲ್ಲ ಬುಡಮೇಲಾಗಿದೆ. ಮಾನ್ಯ ಸಿದ್ದರಾಮಯ್ಯ  ಅವರೇ, ನೀವು ಸೃಷ್ಟಿಸಿದ ಸುಳ್ಳುಗಳಿಗೆ ಈಗ ಉತ್ತರ ಲಭಿಸಿರಬಹುದಲ್ಲವೇ? ದೇಶದಲ್ಲಿ 50 ಕೋಟಿ ಡೋಸ್‌ ಲಸಿಕೆ ವಿತರಿಸಲಾಗಿದೆ, ನೀವು ಹೇಳಿದ ಸುಳ್ಳುಗಳು ನಿಜವಾಗಿದ್ದರೆ ಭಾರತ ಈ ಸಾಧನೆ ಮಾಡಲು ಸಾಧ್ಯವಿತ್ತೇ? ಎಂದು ಪ್ರಶ್ನಿಸಿದೆ. 

ಬಳಿಕ ಲಸಿಕೆ ವಿತರಣೆ ಕುರಿತು ಡಿಕೆ.ಶಿವಕುಮಾರ್ ಅವರು ನೀಡಿದ್ದ ಹೇಳಿಕೆಗೂ ಪ್ರತಿಕ್ರಿಯೆ ನೀಡಿ, ಮಾನ್ಯ ಡಿಕೆ.ಶಿವಕುಮಾರ್ ಅವರೇ, ಲಸಿಕೆ ವಿತರಣೆ ಸರಿಯಾದ ದಾರಿಯಲ್ಲೇ ಇದೆ, ನೀವು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದೀರಿ, ಅಷ್ಟೇ. ಕಡಿಮೆ ಅವಧಿಯಲ್ಲಿಯೇ ಮೋದಿ ಸರ್ಕಾರ 50 ಕೋಟಿ ಡೋಸ್‌ ಲಸಿಕೆ ವಿತರಿಸಿದೆ. ಲಸಿಕೆ ವಿತರಣೆ ವಿಚಾರದಲ್ಲಿ ನೀವು ಸುಳ್ಳುಗಳನ್ನು ವಿತರಣೆ ಮಾಡುತ್ತಿದ್ದೀರಿ, ಅದನ್ನು ನಿಲ್ಲಿಸುವಿರಾ? ಎಂದು ಕೇಳಿದೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.