Covid-19 Vaccine

ದೇಶೀ ನಿರ್ಮಿತ ಕೋವ್ಯಾಕ್ಸಿನ್ ಲಸಿಕೆ 'ಡಬಲ್ ರೂಪಾಂತರಿ ಕೊರೋನಾ ವೈರಸ್' ಅನ್ನೂ ಕೂಡ ತಟಸ್ಥಗೊಳಿಸಬಲ್ಲದು: ಐಸಿಎಂಆರ್
ದೇಶೀ ನಿರ್ಮಿತ ಕೋವ್ಯಾಕ್ಸಿನ್ ಲಸಿಕೆ ದೇಶದಲ್ಲಿ ಉಲ್ಬಣವಾಗಿರುವ 'ಡಬಲ್ ರೂಪಾಂತರಿ ಕೊರೋನಾ ವೈರಸ್' ಅನ್ನೂ ಕೂಡ ತಟಸ್ಥಗೊಳಿಸಬಲ್ಲದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.

ಮೇ 1ರಿಂದ ಖಾಸಗಿ ಆಸ್ಪತ್ರೆಗಳು ಲಸಿಕೆ ತಯಾರಕರಿಂದ ನೇರವಾಗಿ ಖರೀದಿಸಲು ಅವಕಾಶ: ಕೇಂದ್ರ ಸರ್ಕಾರ
ಖಾಸಗಿ ಕೋವಿಡ್-19 ಲಸಿಕಾ ಕೇಂದ್ರಗಳು ಪ್ರಸ್ತುತ ಸರ್ಕಾರದಿಂದ ಕೋವಿಡ್ ಲಸಿಕೆ ಪಡೆದು ಪ್ರತಿ ಡೋಸ್ ಗೆ 250 ರೂಪಾಯಿಯಂತೆ ದರ ನಿಗದಿಪಡಿಸುತ್ತಿದೆ. ಆದರೆ ಮೇ 1ರಿಂದ ಖಾಸಗಿ ಕೋವಿಡ್-19 ಕೇಂದ್ರಗಳು ಲಸಿಕೆ ತಯಾರಕರಿಂದ ನೇರವಾಗಿ ಲಸಿಕೆಗಳನ್ನು ಪಡೆಯಬಹುದಾಗಿದೆ.

ಖಾಸಗಿ ಮಾರುಕಟ್ಟೆಗೆ ಕೋವಿಡ್-19 ಲಸಿಕೆ: ಪ್ರತೀ ಡೋಸ್ ಗೆ 1000 ರೂ ದರ ನಿಗದಿ ಸಾಧ್ಯತೆ!
ದೇಶದಲ್ಲಿ ಮಾರಕ ಕೊರೋನಾ ವೈರಸ್ ಸೋಂಕು ದಿಢೀರ್ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಲಸಿಕೆ ವಿತರಣೆಯ ವೇಗವನ್ನು ಹೆಚ್ಚಿಸುವ ಸಂಬಂಧ ಕ್ರಮಗಳ ಕುರಿತು ಆಲೋಚಿಸುತ್ತಿರುವ ಕೇಂದ್ರ ಸರ್ಕಾರ ಖಾಸಗಿ ಮಾರುಕಟ್ಟೆಗೆ ಕೋವಿಡ್ ಲಸಿಕೆ ಬಿಡುಗಡೆ ಮಾಡಲು ಗಂಭೀರ ಚಿಂತನೆಯಲ್ಲಿ ತೊಡಗಿದೆ.

ಮೂರನೇ ಹಂತದ ಕೋವಿಡ್ ಲಸಿಕೆ ಪ್ರಯೋಗ, ಆಮದಿಗೆ ಜಾನ್ಸನ್ ಆ್ಯಂಡ್ ಜಾನ್ಸನ್ ಸಂಸ್ಥೆ ಅನುಮತಿ ಕೋರಿಕೆ!
ಅಮೆರಿಕ ಮೂಲದ ಔಷಧ ತಯಾರಿಕಾ ಸಂಸ್ಥೆ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆ ತನ್ನ ಕೋವಿಡ್ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಹಾಗೂ ಆಮದು ಮಾಡಿಕೊಂಡು ಬಳಸುವ ಕುರಿತಂತೆ ಅನುಮತಿ ಕೋರಿ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದೆ.

ಕೋವಿಡ್-19 ಲಸಿಕೆ ಕುರಿತು ಹೇಳಿಕೆ: ನಟ ಮನ್ಸೂರ್ ಅಲಿಖಾನ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು ದಾಖಲು
ಕೋವಿಡ್ -19 ಲಸಿಕೆ ವಿರುದ್ಧ ಹೇಳಿಕೆ ಹಿನ್ನೆಲೆಯಲ್ಲಿ ತಮಿಳು ನಟ ಮನ್ಸೂರ್ ಅಲಿಖಾನ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚೆನ್ನೈ ನಗರ ಪೊಲೀಸ್ ಆಯುಕ್ತರಿಗೆ ದೂರನ್ನು ಸಲ್ಲಿಸಲಾಗಿದೆ.

ಒಂದೇ ದಿನ 2.59 ಲಕ್ಷ ಡೋಸ್ ಕೋವಿಡ್-19 ಲಸಿಕೆ ವಿತರಣೆ; ದಾಖಲೆ ಬರೆದ ಕರ್ನಾಟಕ
ಕೋವಿಡ್-19 ಲಸಿಕೆ ವಿತರಣೆಯಲ್ಲಿ ಕರ್ನಾಟಕ ದಾಖಲೆ ನಿರ್ಮಾಣ ಮಾಡಿದ್ದು, ಕಳೆದ 24 ಗಂಟೆಗಳಲ್ಲಿ 2.59 ಲಕ್ಷ ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ.

ನಟ ವಿವೇಕ್ ಗೆ ತೀವ್ರ ಹೃದಯಾಘಾತ: ಕೋವಿಡ್-19 ಲಸಿಕೆಗೆ ಸಂಬಂಧಿಸಿಲ್ಲ- ಆಸ್ಪತ್ರೆ
ಹೃದಯಾಘಾತದಿಂದ ಬಳಲುತ್ತಿದ್ದ ನಟ ವಿವೇಖ್ ಅವರ ಎಡ ಅಪಧಮನಿಯಲ್ಲಿ ಶೇಕಡ 100% ರಷ್ಟು ರಕ್ತ ಹೆಪ್ಪುಗಟ್ಟಿದ್ದು, ಇದಕ್ಕೂ ಕೋವಿಡ್ ವ್ಯಾಕ್ಸಿನೇಷನ್‌ಗೆ ಸಂಬಂಧ ಇಲ್ಲದಿರಬಹುದೆಂದು ಸಿಐಎಂಎಸ್ ಆಸ್ಪತ್ರೆ ಉಪಾಧ್ಯಕ್ಷ ಡಾ. ರಾಜು ಶಿವಸಾಮಿ ತಿಳಿಸಿದ್ದಾರೆ.

ಕೋವಿಡ್-19: ಕೋವಾಕ್ಸಿನ್ ಲಸಿಕೆ ಉತ್ಪಾದಿಸಲು ಮುಂಬೈ ಮೂಲದ ಹಾಫ್ ಕಿನ್ ಸಂಸ್ಥೆಗೆ ಅನುಮತಿ
ಕೋವಾಕ್ಸಿನ್ ಲಸಿಕೆ ಉತ್ಪಾದಿಸಲು ಮುಂಬೈ ಮೂಲದ ಹಾಫ್ ಕಿನ್ ಸಂಸ್ಥೆಗೆ ಕೇಂದ್ರ ಸರ್ಕಾರ ಗುರುವಾರ ಅನುಮತಿ ನೀಡಿದೆ.

ಕೋವಿಡ್-19 ಔಷಧ ರೆಮ್ ಡಿಸಿವಿರ್ ಕಾಳ ಸಂತೆ ಮಾರಾಟ ಕುರಿತ ತನಿಖೆಗೆ ಫಾರ್ಮಸಿಸ್ಟ್ ಒತ್ತಾಯ
ಕೋವಿಡ್-19 ಔಷಧ ರೆಮ್ ಡಿಸಿವಿರ್ ಕಾಳಸಂತೆ ಮಾರುಕಟ್ಟೆಗೆ ಸಂಬಂಧಿಸಿದಂತೆ ಔಷಧ ನಿಯಂತ್ರಣ ಅಧಿಕಾರಿಗಳ ವಿರುದ್ಧ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ. ವಿ. ಸದಾನಂದಗೌಡ ಮತ್ತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ನೆಲಮಂಗಲದಲ್ಲಿರುವ ಹರ್ಷ ಆಸ್ಪತ್ರೆ ಘಟಕ ಹರ್ಷ ಮೆಡಿಕಲ್ಸ್ ಅಂಡ್ ಜನರಲ್ ಸ್ಟೋರ್ಸ್ ಪತ್ರ ಬರೆದಿದೆ.

