Covid-19 lockdown

ಲಾಕ್ ಡೌನ್ ಎಫೆಕ್ಟ್: ಆಭರಣ ಮಾರುವ ಕೈಗಳಿಂದ ತರಕಾರಿ ಮಾರಾಟ!
ಕಳೆದ 25 ವರ್ಷಗಳಿಂದ ಆಭರಣ ವ್ಯಾಪಾರಿಯಾಗಿದ್ದ ರಾಜಸ್ಥಾನದ ಹುಕುಮಚಂದ್ ಸೋನಿ ಅವರು ತಾನು ಜೀವನದಲ್ಲಿ ತರಕಾರಿ ಮಾರಿ ಜೀವನ ನಡೆಸಬೇಕಾದ ಸಮಯ ಬರುತ್ತದೆ ಎಂದು ಯಾವತ್ತೂ ಊಹಿಸಿರಲಿಲ್ಲ. ಆದರೆ ಕೊವಿಡ್-19 ಲಾಕ್ ಡೌನ್ ಆಭರಣ ವ್ಯಾಪ್ಯಾರಿಯನ್ನೂ ಬೀದಿಗೆ ತಂದು ನಿಲ್ಲಿಸಿದ್ದು, ಸೋನಿ ಅವರು ಜೀವನಕ್ಕಾಗಿ ಈಗ ತರಕಾರಿ ಮಾರಾಟ ಮಾಡುತ್ತಿದ್ದಾರೆ.

ರಾಜ್ಯದಲ್ಲಿ ಮೇ 3ರವರೆಗೆ ಲಾಕ್‌ಡೌನ್ ವಿಸ್ತರಣೆ, ಯಾವುದೇ ವಿನಾಯಿತಿ ಇಲ್ಲ: ಕಾನೂನು ಸಚಿವ ಮಾಧುಸ್ವಾಮಿ
ರಾಜ್ಯದಲ್ಲಿ ಕೋವಿಡ್ -19 ಲಾಕ್‌ಡೌನ್ ಅನ್ನು ಮೇ 3 ರವರೆಗೆ ವಿಸ್ತರಿಸಲು ಕರ್ನಾಟಕ ಕ್ಯಾಬಿನೆಟ್ ನಿರ್ಧರಿಸಿದೆ ಎಂದು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದ್ದಾರೆ.

ಕೊರೋನಾ ಲಾಕ್‌ಡೌನ್: ಇಂದಿನಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಪುನಾರಂಭ
ದೇಶಾದ್ಯಂತ ಜಾರಿಯಲ್ಲಿರುವ ಕೋವಿಡ್ 19 ಲಾಕ್‌ಡೌನ್ ಮಧ್ಯೆ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವು ಸೋಮವಾರದಿಂದ ಪುನರಾರಂಭಗೊಂಡಿದೆ.

ಲಾಕ್ ಡೌನ್: ಉತ್ತರ ಪ್ರದೇಶದಲ್ಲಿ ಪಡಿತರ ಪಡೆಯಲು ಕ್ಯೂನಲ್ಲಿ ನಿಂತಿದ್ದ ಮಹಿಳೆ ಕುಸಿದು ಬಿದ್ದು ಸಾವು
ಲಾಕ್ ಡೌನ್ ವೇಳೆ ಉಚಿತ ಪಡಿತರ ಪಡೆಯಲು ಅಂಗಡಿಯೊಂದರ ಮುಂದೆ ಕ್ಯೂನಲ್ಲಿ ನಿಂತಿದ್ದ ಮಹಿಳೆಯೊಬ್ಬರು ತೀವ್ರ ಅನಾರೋಗ್ಯಕ್ಕೀಡಾಗಿ ಕುಸಿದು ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದಿದೆ...

ಕೆಲಸದಿಂದ ತೆಗೆಯಬೇಡಿ, ಬೇಕಾದರೆ ಸಂಬಳ ಕಟ್ ಮಾಡಿ: ಐಟಿ ಕಂಪನಿಗಳಿಗೆ ರಾಜ್ಯ ಸರ್ಕಾರ
ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಬೇಡಿ. ಬೇಕಾದರೆ ಅವರ ಸಂಬಳ ಕಡಿತಮಾಡಿ ಎಂದು ರಾಜ್ಯ ಸರ್ಕಾರ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದ(ಐಟಿ, ಬಿಟಿ) ಕಂಪನಿಗಳಿಗೆ ಶುಕ್ರವಾರ ಸೂಚಿಸಿದೆ.

ಲಾಕ್ ಡೌನ್: ಉತ್ತರ ಪ್ರದೇಶದಲ್ಲಿ ಪಡಿತರ ವಿತರಕನಿಂದ ಮಹಿಳೆ ಮೇಲೆ ಅತ್ಯಾಚಾರ
ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಇದರ ನಡುವೆಯೂ ಪಡಿತರ ವಿತರಿಸುವ ವ್ಯಕ್ತಿಯೊಬ್ಬ 23 ವರ್ಷದ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಶಾಮ್ಲಿಯಲ್ಲಿ ನಡೆದಿದೆ.

ದೂರದರ್ಶನದಿಂದ ಹೊಸ ಚಾನಲ್ ಡಿಡಿ ರೆಟ್ರೋ ಪ್ರಾರಂಭ: ಜನಪ್ರಿಯ ಶೋಗಳ ಮರು ಪ್ರಸಾರ!
ರಾಮಾಯಣ, ಮಹಾಭಾರತ ಧಾರವಾಹಿಗಳು ಸರ್ಕಾರಿ ಸ್ವಾಮ್ಯದ ದೂರದರ್ಶನ ಚಾನಲ್ ಗೆ ಅಭೂತಪೂರ್ವ ಟಿಆರ್ ಪಿ ತಂದುಕೊಟ್ಟಿದ್ದು, ಡಿಡಿ ನ್ಯಾಷನಲ್ ನಂ.1 ಚಾನಲ್ ಆಗಿದೆ.

ಮುಂಬೈ: ಬಾಂದ್ರಾ ನಿಲ್ದಾಣಕ್ಕೆ ಬಂದ ಸಾವಿರಾರು ವಲಸೆ ಕಾರ್ಮಿಕರು, ವಾಪಸ್ ಊರಿಗೆ ಹೋಗಲು ಪಟ್ಟು
ದೇಶಾದ್ಯಂತ ತೀವ್ರವಾಗಿ ವ್ಯಾಪಿಸುತ್ತಿರುವ ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಲಾಕ್‌ಡೌನ್ ಅನ್ನು ಮೇ 3 ರವರೆಗೆ ವಿಸ್ತರಿಸಿದ್ದು, ಇದರಿಂದ ಕೆರಳಿದ ಮುಂಬೈನ ಸಾವಿರಾರು ವಲಸೆ ಕಾರ್ಮಿಕರು...

ರಾಜ್ಯದಲ್ಲಿ ಲಾಕ್ ಡೌನ್ ಏಪ್ರಿಲ್ 30ರ ವರೆಗೆ ವಿಸ್ತರಣೆ, ಈ ಲಾಕ್ ಡೌನ್ ವಿಭಿನ್ನವಾಗಿರುತ್ತೆ: ಸಿಎಂ ಯಡಿಯೂರಪ್ಪ
ಮಹಾಮಾರಿ ಕೊರೋನಾ ವೈರಸ್ ಹರಡುವುದನ್ನು ನಿಯಂತ್ರಿಸುವುದಕ್ಕಾಗಿ ರಾಜ್ಯದಲ್ಲಿ ಏಪ್ರಿಲ್ 30ರ ವರೆಗೆ ಲಾಕ್ ವಿಸ್ತರಿಸುವುದು ಅನಿವಾರ್ಯವಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಶನಿವಾರ ಹೇಳಿದ್ದಾರೆ.

