ದೂರದರ್ಶನದಿಂದ ಹೊಸ ಚಾನಲ್ ಡಿಡಿ ರೆಟ್ರೋ ಪ್ರಾರಂಭ: ಜನಪ್ರಿಯ ಶೋಗಳ ಮರು ಪ್ರಸಾರ!
ರಾಮಾಯಣ, ಮಹಾಭಾರತ ಧಾರವಾಹಿಗಳು ಸರ್ಕಾರಿ ಸ್ವಾಮ್ಯದ ದೂರದರ್ಶನ ಚಾನಲ್ ಗೆ ಅಭೂತಪೂರ್ವ ಟಿಆರ್ ಪಿ ತಂದುಕೊಟ್ಟಿದ್ದು, ಡಿಡಿ ನ್ಯಾಷನಲ್ ನಂ.1 ಚಾನಲ್ ಆಗಿದೆ.

ನವದೆಹಲಿ: ರಾಮಾಯಣ, ಮಹಾಭಾರತ ಧಾರವಾಹಿಗಳು ಸರ್ಕಾರಿ ಸ್ವಾಮ್ಯದ ದೂರದರ್ಶನ ಚಾನಲ್ ಗೆ ಅಭೂತಪೂರ್ವ ಟಿಆರ್ ಪಿ ತಂದುಕೊಟ್ಟಿದ್ದು, ಡಿಡಿ ನ್ಯಾಷನಲ್ ನಂ.1 ಚಾನಲ್ ಆಗಿದೆ.
ಇದರಿಂದ ಉತ್ತೇಜನಗೊಂಡಿರುವ ದೂರದರ್ಶನ, ಹಳೆಯ ಜನಪ್ರಿಯ ಧಾರಾವಾಹಿಗಳನ್ನು ಮರು ಪ್ರಸಾರ ಮಾಡುವುದಕ್ಕಾಗಿಯೇ ಡಿಡಿ ರೆಟ್ರೋ ಚಾನಲ್ ನ್ನು ಪ್ರತ್ಯೇಕವಾಗಿ ಪ್ರಾರಂಭಿಸುತ್ತಿದೆ.
ಡಿಡಿ ಚಾನಲ್ ನ ಅಧಿಕೃತ ಟ್ವಿಟರ್ ನಲ್ಲಿ ಟ್ವೀಟ್ ಮಾಡಲಾಗಿದ್ದು, ದಶಕಗಳ ಹಿಂದಿನ ದಿನಗಳನ್ನು ನೆನಪು ಮಾಡಿಕೊಳ್ಳಲು ಜನಪ್ರಿಯ, ಸ್ಮರಣೀಯ ಧಾರಾವಾಹಿಗಳನ್ನು ಮರುಪ್ರಸಾರ ಮಾಡಲಾಗುತ್ತದೆ. ಇದಕ್ಕಾಗಿ ಡಿಡಿ ರೆಟ್ರೋ ವೀಕ್ಷಿಸಿ ಎಂದು ಹೇಳಿದೆ.
ಎಲ್ಲಾ ಡಿಟಿಎಚ್ ಗಳಲ್ಲಿಯೂ ಡಿಡಿ ರೆಟ್ರೋ ಚಾನಲ್ ಲಭ್ಯವಿರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


