couple

ಕಾಲ್ನಡಿಗೆಯಲ್ಲಿ ಮೊಟ್ಟ ಮೊದಲ ಬಾರಿಗೆ ದೇಶ ಸುತ್ತಿದ ಕೇರಳದ ದಂಪತಿ!
ಕೊಟ್ಟಾಯಂನ 53 ವರ್ಷದ ಬೆನ್ನಿ ಕೊಟ್ಟಾರತಿಲ್ ಮತ್ತು ಅವರ ಪತ್ನಿ ಮೊಲ್ಲಿ ಬೆನ್ನಿ (46) ಕಾಲಿನಲ್ಲಿಯೇ ದೇಶ ಸುತ್ತಿ ಈಗಷ್ಟೇ ಮರಳಿದ್ದಾರೆ. ಕನ್ಯಾಕುಮಾರಿಯಿಂದ ಕಳೆದ ವರ್ಷ ಡಿಸೆಂಬರ್ ನಲ್ಲಿ ಕಾಲ್ನಡಿಗೆ ಆರಂಭಿಸಿದ ಇವರು, 216 ದಿನ ಸುತ್ತಾಡಿ ಜುಲೈ 3, 2022 ರಂದು ತಮ್ಮ ನಡಿಗೆಯನ್ನು ಮುಕ್ತಾಯಗೊಳಿಸಿದ್ದಾರೆ.

ಉರಿಯುತ್ತಿದ್ದ ಕ್ರೂಸ್ ಹಡಗಿನಿಂದ ಹಾರಿ ಜೀವ ಉಳಿಸಿಕೊಂಡ ದಂಪತಿ: ಉರಿದುಹೋದ 40 ಪ್ರಯಾಣಿಕರು
ನತದೃಷ್ಟ ಹಡಗಿನಲ್ಲಿ ಒಟ್ಟು 800 ಮಂದಿ ಪ್ರಯಾಣಿಕರಿದ್ದರು. ಅದರಲ್ಲಿ 40 ಮಂದಿ ಸಾವನ್ನಪ್ಪಿದ್ದು, 70 ಮಂದಿ ಗಾಯಗೊಂಡಿದ್ದಾರೆ.

ಬೆಂಗಳೂರು: ನವವಿವಾಹಿತ ದಂಪತಿ ಮನೆಯಲ್ಲೇ ನೇಣಿಗೆ ಶರಣು!
ಬೆಂಗಳೂರಿನ ವಿದ್ಯಾನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ನವವಿವಾಹಿತ ದಂಪತಿ ನೇಣಿಗೆ ಶರಣಾಗಿದ್ದಾರೆ.
ಎರಡು ಬಾರಿ ಡೈವರ್ಸ್ ಪಡೆದ ಸೆಲಬ್ರಿಟಿಗಳಿವರು!
ಮದುವೆ ಎಂಬ ಮೂರಕ್ಷರಕ್ಕಿರುವ ಮಹತ್ವ ವಿಚ್ಛೇದನ ಎನ್ನುವ ನಾಲ್ಕಕ್ಷರದ ಪದಕ್ಕೂ ಇದೆ. ಡೈವೊರ್ಸ್ ಎನ್ನುವುದು ಬೆಲ್ಲವೂ ಹೌದು ಬೇವೂ ಹೌದು. ಎಲ್ಲವೂ ಅವರವರ ಭಾವಕ್ಕೆ ಹಾಗೂ ಭಕುತಿಗೆ ತಕ್ಕಂತೆ. ಜೀವನ ಅವೆಲ್ಲಕ್ಕಿಂತ ದೊಡ್ಡದು.

ಸುಪ್ರೀಂ ಕೋರ್ಟ್ ಎದುರು ದಂಪತಿಗಳ ಆತ್ಮಹತ್ಯೆ ಯತ್ನ ಪ್ರಕರಣ: ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಸಾವು
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಸುಪ್ರೀಂಕೋರ್ಟ್ ಮುಂಭಾಗದಲ್ಲಿ ದಂಪತಿಗಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಸಾವನ್ನಪ್ಪಿದ್ದಾರಂದು ಶನಿವಾರ ತಿಳಿದುಬಂದಿದೆ.

ಕೋವಿಡ್: ಆಕ್ಸಿಜನ್ ಗಾಗಿ ಅಯೋಧ್ಯೆಯಿಂದ ಬಂಗಾಳಕ್ಕೆ ತೆರಳಿದ ದಂಪತಿ!
ಕೊರೋನಾ ಪೀಡಿತ ಮಧ್ಯ ವಯಸ್ಸಿನ ದಂಪತಿ ಉತ್ತರಪ್ರದೇಶದಿಂದ 850 ಕಿ.ಮೀ. ದೂರದಲ್ಲಿರುವ ಬಂಗಾಳಕ್ಕೆ ಪ್ರಯಾಣಿಸಿ, ಚಿನ್ಸೂರ್ ನಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದಾರೆ.

ಆರ್'ಟಿ-ಪಿಸಿಆರ್ ನೆಗೆಟಿವ್ ವರದಿಯೊಂದಿಗೆ ಮದುವೆಗೆ ಬನ್ನಿ: ಆಮಂತ್ರಣ ಪತ್ರಿಕೆಯಲ್ಲಿ ನವಜೋಡಿ ಮನವಿ
ಇತ್ತೀಚಿನ ದಿನಗಳಲ್ಲಿ ಕೊರೋನಾ ನಿಯಮಗಳನ್ನು ಗಾಳಿಗೆ ತೂರಿ ಮದುವೆ ಸಮಾರಂಭಗಳನ್ನು ನಡೆಸುವ ಜನರ ಮಧ್ಯೆ ಇಲ್ಲೊಂದು ನವಜೋಡಿ ಇತರರಿಗೆ ಮಾದರಿಯಾಗಿದ್ದಾರೆ.

ಮಂಡ್ಯ: ಹೊಸ ಮನೆ ಗೃಹ ಪ್ರವೇಶಕ್ಕೂ ಮುನ್ನವೇ ದಂಪತಿ ಆತ್ಮಹತ್ಯೆ: ಕೌಟುಂಬಿಕ ಕಲಹ ಶಂಕೆ
ಹೊಸದಾಗಿ ಮನೆ ನಿರ್ಮಿಸಿ ಮುಂದಿನ ವಾರ ಗೃಹ ಪ್ರವೇಶಕ್ಕೆ ಸಿದ್ಧತೆ ನಡೆಸುತ್ತಿದ್ದಾಗಲೇ ಕೌಟುಂಬಿಕ ಕಾರಣಗಳಿಂದಾಗಿ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಸಂತೇಚಾಚನಹಳ್ಳಿಯ ಹಡವನಹಳ್ಳಿಯಲ್ಲಿ ನಡೆದಿದೆ.

ಪಶ್ಚಿಮ ಬಂಗಾಳ: ಲಾಕ್ ಡೌನ್ ವೇಳೆ ಕೆಲಸವಿಲ್ಲದೆ ಎರಡೂವರೆ ತಿಂಗಳ ಮಗುವನ್ನು 3 ಸಾವಿರ ರೂ. ಗೆ ಮಾರಿದ ದಂಪತಿ
ಕೊರೋನಾ ಲಾಕ್ ಡೌನ್ ನಿಂದ ಮೂರು ತಿಂಗಳ ಹಿಂದೆ ಉದ್ಯೋಗ ಕಳೆದುಕೊಂಡು ಜೀವನೋಪಾಯಕ್ಕೆ ದಿಕ್ಕು ತೋಚದೆ ಪಶ್ಚಿಮ ಬಂಗಾಳದ ಮಿಡ್ನಾಪುರ್ ಜಿಲ್ಲೆಯಲ್ಲಿ ದಿನಗೂಲಿ ದಂಪತಿ ಎರಡೂವರೆ ತಿಂಗಳ ಮಗುವನ್ನು 3 ಸಾವಿರ ರೂಪಾಯಿಗೆ ಮಾರಾಟ ಮಾಡಿದ ಹೃದಯ ವಿದ್ರಾವಕ ಘಟನೆ ನಡೆದಿದೆ.

