coronavirus

ಕೊರೋನಾ ವೈರಸ್: ಪುಣೆಯಲ್ಲಿ ಮತ್ತೊಬ್ಬ ವ್ಯಕ್ತಿಗೆ ಪಾಸಿಟಿವ್, ಭಾರತದಲ್ಲಿ ಸೋಂಕಿತರ ಸಂಖ್ಯೆ 84ಕ್ಕೆ ಏರಿಕೆ
ದೇಶದಲ್ಲಿ ಮಾರಣಾಂತಿಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಶುಕ್ರವಾರ ಪುಣೆಯಲ್ಲಿ ಮತ್ತೊಬ್ಬ ವ್ಯಕ್ತಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದೆ

ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಕಾರ್ಯತಂತ್ರ ರೂಪಿಸಿ: ಸಾರ್ಕ್ ದೇಶಗಳಿಗೆ ಪ್ರಧಾನಿ ಮೋದಿ
ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಮಾರಣಾಂತಿಕ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಜಂಟಿ ಕಾರ್ಯತಂತ್ರ ರೂಪಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ಕ್ ದೇಶಗಳ ನಾಯಕರಿಗೆ ಶುಕ್ರವಾರ ಕರೆ ನೀಡಿದ್ದಾರೆ.

ಕೊರೋನಾ ವೈರಸ್ ಹರಡದಂತೆ ತಡೆಯಲು ಮಾಲ್ ಗಳು, ಚಿತ್ರಮಂದಿರ ಮುಚ್ಚಿ: ಸರ್ಕಾರಕ್ಕೆ ಸುಧಾಮೂರ್ತಿ ಒತ್ತಾಯ
ಕೊರೋನಾ ವೈರಸ್ ಹರಡದಂತೆ ತಡೆಯಲು ಶಾಲಾ, ಕಾಲೇಜುಗಳು, ಮಾಲ್ ಗಳು, ಚಿತ್ರಮಂದಿರಗಳು ಹಾಗೂ ಎಲ್ಲಾ ಹವಾನಿಯಂತ್ರಿತ ಜಾಗಗಳನ್ನು ಬಂದ್ ಮಾಡುವಂತೆ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾ ನಾರಾಯಣಮೂರ್ತಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೊರೋನಾ ಭೀತಿ: ವಿವಿಪುರಂ ಫುಡ್ ಸ್ಟ್ರೀಟ್ ಬಂದ್!
ಎಲ್ಲೆಲ್ಲೂ ಕೊರೋನಾ ಭೀತಿ ಕಾಡುತ್ತಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿರುವುದರಿಂದ ಜನನಿಬಿಡ ಪ್ರದೇಶಗಳೆಲ್ಲಾ ಸ್ತಬ್ಧಗೊಳ್ಳುತ್ತಿದೆ. ಈ ಸಾಲಿಗೆ ವಿವಿಪುರಂ ನ ಫುಡ್ ಸ್ಟ್ರೀಟ್ ಸೇರಿದೆ.

ಕೋವಿಡ್ -19: ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಸೋಂಕು ಮಾದರಿ ಪರೀಕ್ಷೆ ಪ್ರಯೋಗಾಲಯ
ಕೋವಿಡ್-19 ಸೋಂಕು ಪತ್ತೆ ಹಚ್ಚಲು ನಗರದ ಕೆ.ಆರ್ ಆಸ್ಪತ್ರೆಯ ವೈರಲ್ ರಿಸರ್ಚ್ ಅಂಡ್ ಡಯಾಗ್ನೋಸ್ಟಿಕ್ ಲ್ಯಾಬೊರೇಟರಿ( ವಿಆರ್ ಡಿಎಲ್) ಸೋಂಕು ಪರೀಕ್ಷಾ ಪ್ರಯೋಗಾಲಯವನ್ನಾಗಿ ಕೇಂದ್ರ ಸರ್ಕಾರ ಗುರುತಿಸಿದೆ ಎಂದು ಅಧಿಕಾರಿ ಮೂಲಗಳು ಶುಕ್ರವಾರ ತಿಳಿಸಿವೆ.

ಆಸೀಸ್ ವೇಗಿ ಕೇನ್ ರಿಚರ್ಡ್ ಸನ್ ಗೆ ಕೊರೋನಾ ವೈರಸ್ ಸೋಂಕು ಭೀತಿ!
ಇಡೀ ವಿಶ್ವವೇ ಪ್ರಸ್ತುತ ಕೊರೊನಾ ವೈರಸ್ ಭೀತಿಯಲ್ಲಿ ಮುಳುಗಿದೆ. ಈ ಮಹಾಮಾರಿ ವೈರಸ್ ಜಾಗತಿಕ ಕ್ರೀಡಾಚಟುವಟಿಕೆಗಳ ಮೇಲೆ ಗಂಭೀರ ಪ್ರಭಾವ ಬೀರಿದೆ

ವಿಶ್ವಸಂಸ್ಥೆಯನ್ನೂ ಬಿಡದೆ ಕಾಡಿದ ಕೊರೋನ ಸೋಂಕು!
ಕರೋನ ಸೋಂಕು ಬಡವ, ಬಲ್ಲಿದ ಸಿರಿವಂತ ದೇಶ, ಬಡತನ ದೇಶ ಎಂಬ ತಾರತಮ್ಯವಿಲ್ಲದೆ ಎಲ್ಲರನ್ನು ಅವರಿಸಿಕೊಳ್ಳುತ್ತಿದೆ. ಈಗ ಮಾರ ಸೋಂಕು ವಿಶ್ವಸಂಸ್ಥೆಯನ್ನು ಬಿಡೆದೆ ಆವರಿಸಿಕೊಂಡಿದೆ.

ಕೊರೋನಾವೈರಸ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ದೇಶದ ಆರ್ಥಿಕತೆ ನಾಶ-ರಾಹುಲ್ ಗಾಂಧಿ
ಜಾಗತಿಕವಾಗಿ ಹಬ್ಬುತ್ತಿರುವ ಮಾರಕ ಸಾಂಕ್ರಾಮಿಕ ರೋಗ ಕೊರೋನಾ ವೈರಸ್ ತುಂಬಾ ಅಪಾಯಕಾರಿ. ಅದರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ದೇಶದ ಆರ್ಥಿಕತೆ ನಾಶವಾಗಲಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.

ಗೊಂದಲಕ್ಕೆ ಕಾರಣವಾದ ಬಿಬಿಎಂಪಿ ಸುತ್ತೋಲೆ!
ಸ್ಟಾರ್ ಹೋಟೆಲ್ಗಳು ಮತ್ತು ಮದುವೆ ಸಭಾಂಗಣಗಳಲ್ಲಿ ಕಾರ್ಯಕ್ರಮಗಳನ್ನು ನಿರ್ಬಂಧಿಸಿ ಗುರುವಾರ ಬಿಬಿಎಂಪಿ ವೈದ್ಯಕೀಯ ಆರೋಗ್ಯ ಅಧಿಕಾರಿ (ಶಿವಾಜಿನಗರ) ಹೊರಡಿಸಿದ ಸುತ್ತೋಲೆ ಗೊಂದಲಕ್ಕೆ ಕಾರಣವಾಯಿತು.

