ಕೋವಿಡ್ -19: ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಸೋಂಕು ಮಾದರಿ ಪರೀಕ್ಷೆ ಪ್ರಯೋಗಾಲಯ
ಕೋವಿಡ್-19 ಸೋಂಕು ಪತ್ತೆ ಹಚ್ಚಲು ನಗರದ ಕೆ.ಆರ್ ಆಸ್ಪತ್ರೆಯ ವೈರಲ್ ರಿಸರ್ಚ್ ಅಂಡ್ ಡಯಾಗ್ನೋಸ್ಟಿಕ್ ಲ್ಯಾಬೊರೇಟರಿ( ವಿಆರ್ ಡಿಎಲ್) ಸೋಂಕು ಪರೀಕ್ಷಾ ಪ್ರಯೋಗಾಲಯವನ್ನಾಗಿ ಕೇಂದ್ರ ಸರ್ಕಾರ ಗುರುತಿಸಿದೆ ಎಂದು ಅಧಿಕಾರಿ ಮೂಲಗಳು ಶುಕ್ರವಾರ ತಿಳಿಸಿವೆ.

ಮೈಸೂರು: ಕೋವಿಡ್-19 ಸೋಂಕು ಪತ್ತೆ ಹಚ್ಚಲು ನಗರದ ಕೆ.ಆರ್ ಆಸ್ಪತ್ರೆಯ ವೈರಲ್ ರಿಸರ್ಚ್ ಅಂಡ್ ಡಯಾಗ್ನೋಸ್ಟಿಕ್ ಲ್ಯಾಬೊರೇಟರಿ( ವಿಆರ್ ಡಿಎಲ್) ಸೋಂಕು ಪರೀಕ್ಷಾ ಪ್ರಯೋಗಾಲಯವನ್ನಾಗಿ ಕೇಂದ್ರ ಸರ್ಕಾರ ಗುರುತಿಸಿದೆ ಎಂದು ಅಧಿಕಾರಿ ಮೂಲಗಳು ಶುಕ್ರವಾರ ತಿಳಿಸಿವೆ.
ಸೋಂಕು ಶಂಕಿತರ ರಕ್ತ, ಗಂಟಲು ದ್ರವ ಮಾದರಿಗಳನ್ನು ವಿಶ್ಲೇಷಣೆಗಾಗಿ ಈ ಪ್ರಯೋಗಾಲಯಕ್ಕೆ ಕಳುಹಿಸದರೆ ಮೂರು ಗಂಟೆಗಳಲ್ಲಿ ಪರೀಕ್ಷೆ ನಡೆಸಿ, ಪುಣೆಯ ವೈರಾಣು ಸಂಸ್ಥೆಗೆ ರವಾನಿಸಲಿದೆ.
ಕೆ.ಆರ್. ಆಸ್ಪತ್ರೆಯ ಸೂಕ್ಷ್ಮ ಜೀವವಿಜ್ಞಾನ ವಿಭಾಗದಲ್ಲಿ ಕೇಂದ್ರ ಸರ್ಕಾರದ ಅನುದಾನದಡಿ ಸ್ಥಾಪಿಸಲಾಗಿರುವ ವೈರಲ್ ರಿಸರ್ಚ್ ಅಂಡ್ ಡಯಾಗ್ನೋಸ್ಟಿಕ್ ಲ್ಯಾಬೊರೇಟರಿ ( ವಿಆರ್ ಡಿಎಲ್) ಕೊರೊನಾ ಸೋಂಕು ಮಾದರಿಗಳ ಪರೀಕ್ಷೆ ನಡೆಸಲುಅನುಮತಿ ಕಲ್ಪಿಸಲಾಗಿದೆ. ಮೈಸೂರಿನ ಈ ಪ್ರಯೋಗಾಲಯ ದೇಶದ 52 ಪ್ಲಸ್ ಪ್ರಯೋಗಾಲಯಗಳಲ್ಲಿ ಒಂದಾಗಿದೆ.
ಪರೀಕ್ಷೆಗಳನ್ನು ನಡೆಸಲು ವಿಆರ್‌ಡಿಎಲ್ ಸಜ್ಜುಗೊಂಡಿದ್ದರೂ, ದೇಶದಲ್ಲಿ ಸೋಂಕು ದೃಢಪಡಿಸುವ ಏಕೈಕ ಅಧಿಕಾರ ಪುಣೆಯಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಮಾತ್ರ ಹೊಂದಿದೆ. ಕೋವಿಡ್ -19 ರ ಶಂಕಿತ ಮಾದರಿಗಳನ್ನು ಸಂಗ್ರಹಿಸಿ ಸಾಗಿಸುವ ಕಾರ್ಯವನ್ನು ಮಾತ್ರ ವಿಆರ್ ಡಿಎಲ್ ಮಾಡಲಿದೆ. ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ಭಾಗವಾಗಿರುವ ವಿಆರ್ ಡಿಎಲ್ ರಾಷ್ಟ್ರೀಯ ವೈರಾಣು ಸಂಸ್ಥೆಯ ಸಲಹೆಯಂತೆ ಕಾರ್ಯನಿರ್ವಹಿಸುತ್ತಿದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಇಲ್ಲಿ ನಡೆಸಿದ ಪರೀಕ್ಷೆಗಳ ಫಲಿತಾಂಶಗಳನ್ನು ಅದೇ ದಿನ ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಗೆ ರವಾನಿಸಲಿದ. ಪ್ರಕರಣಗಳನ್ನು ದೃಢಪಡಿಸಿ ಘೋಷಿಸುವ ಏಕೈಕ ಅಧಿಕಾರ ಪುಣೆಯ ಸಂಸ್ಥೆ ಹೊಂದಿದೆ. ಅಲ್ಲದೆ, ಕೊರೊನಾ ಸೋಂಕಿನ ಮಾದರಿಗಳು ನಕಾರಾತ್ಮಕ ಎಂದು ಕಂಡು ಬಂದರೂ ಸಹ ರಾಷ್ಟ್ರೀಯ ವೈರಾಣು ಸಂಸ್ಥೆ ದೃಢೀಕರಿಸಿ ಘೋಷಿಸಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


