coronavirus in Karnataka

ರಾಜ್ಯದಲ್ಲಿ 55 ಹೊಸ ಕೊರೋನಾ ಪ್ರಕರಣ, ಸೋಂಕಿತರ ಸಂಖ್ಯೆ 1147ಕ್ಕೇರಿಕೆ
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 55 ಕೊರೋನಾ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1147ಕ್ಕೆರಿಕೆಯಾಗಿದೆ.

ಬೀದರ್ ನಲ್ಲಿ 7 ಮಂದಿಗೆ ಕೊರೋನಾ ಪಾಸಿಟಿವ್, ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 651ಕ್ಕೆ ಏರಿಕೆ
ಬೀದರ್ ನಲ್ಲಿ ಏಳು ಸೇರಿ ರಾಜ್ಯದಲ್ಲಿ ಸೋಮವಾರ ಸಂಜೆ ಮತ್ತೆ ಒಂಬತ್ತು ಕೊರೋನಾ ಪ್ರಕರಣಗಳು ವರದಿಯಾಗಿದ್ದು ಇದುವರೆಗೆ ಕರ್ನಾಟಕದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 651ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಕೊರೋನಾ ಸೋಂಕಿಗೆ ಮತ್ತೊಂದು ಸಾವು, 7 ಹೊಸ ಪ್ರಕರಣ, ಸೋಂಕಿತರ ಸಂಖ್ಯೆ 415ಕ್ಕೆ ಏರಿಕೆ
ರಾಜ್ಯದಲ್ಲಿಂದು ಮಧ್ಯಾಹ್ನದವರೆಗೆ ಏಳು ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದೆ. ಒಟ್ತಾರೆ ಸೋಂಕಿತರ ಸಂಖ್ಯೆ 415ಕ್ಕೆ ಏರಿಕೆಯಾಗಿದ್ದು ಇದುವರೆಗೆ 17ಮಂದಿ ಮೃತಪಟ್ಟಿದ್ದಾರೆ.

ಮಕ್ಕಳಿಗೂ ಹಬ್ಬಿದ ಮಾರಕ ಸೋಂಕು: ಬಾಗಲಕೋಟೆಯ ಮೂವರು ಅಪ್ರಾಪ್ತರಲ್ಲಿ ಕೊರೋನಾ ಪತ್ತೆ
ಬಾಗಲಕೋಟೆ ಜಿಲ್ಲೆಯಲ್ಲಿ ಗುರುವಾರ ಮೂವರು ಅಪ್ರಾಪ್ತ ವಯಸ್ಕರಿಗೆ ಕೊರೋನಾವೈರಸ್ ಸೋಂಕು ತಗುಲಿದೆ. ಇವರೆಲ್ಲರೂ ಕೇವಲ ಎರಡು ದಿನಗಳ ಹಿಂದೆ ಕೊರೋನಾ ಸೋಂಕು ದೃಢಪಟ್ಟಿದ್ದ ರೋಗಿಯ ಸಂಪರ್ಕದಲ್ಲಿದ್ದರು.

ಕೋವಿಡ್ ಪರಿಶೀಲನಾ ಸಭೆಯಲ್ಲಿ ಹಾಲಿ, ಮಾಜಿ ಸಚಿವರ ನಡುವೆ ಮಾತಿನ ಚಕಮಕಿ
ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ನಡುವೆ ಮಾತಿನ ಚಕಮಕಿ ನಡೆದಿದೆ. ದೇಶಾದ್ಯಂತ ವ್ಯಾಪಿಸಿರುವ ಕೊರೋನಾವೈರಸ್ ಹಾವಳಿಯ ಕುರಿತು ರಿಶೀಲನಾ ಸಭೆಯಲ್ಲಿ ಹಾಲಿ ಹಾಗೂ ಮಾಜಿ ಸಚಿವರು ಪರಸ್ಪರರು ವಾಗ್ವಾದ ನಡೆಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ಭೀತಿ: 28 ನೆಗೆಟಿವ್, 54 ಮಂದಿಯ ವರದಿ ನಿರೀಕ್ಷೆಯಲ್ಲಿದೆ ಎಂದ ಆರ್‌ಜಿಐಸಿಡಿ
ಭಾನುವಾರದೊರಗಿನ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಕೊರೊನಾವೈರಸ್‌ನಿಂದಾಗಿ ಶಂಕೆಇತರಾದವರ ಸಂಖ್ಯೆ 82ಕ್ಕೆ ತಲುಪಿದೆ. ಇದರಲ್ಲಿ 28 ಋಣಾತ್ಮಕ (ನೆಗೆಟಿವ್) ಎಂದು ವರದಿ ಬಂದಿದ್ದು ಉಳಿದ 54 ಶಂಕಿತ ರೋಗಿಗಳ ಪರೀಕ್ಷಾ ವರದಿಗಾಗಿ ನಿರೀಕ್ಷಿಸಲಾಗುತ್ತಿದೆ.

