ಬೀದರ್ ನಲ್ಲಿ 7 ಮಂದಿಗೆ ಕೊರೋನಾ ಪಾಸಿಟಿವ್, ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 651ಕ್ಕೆ ಏರಿಕೆ
ಬೀದರ್ ನಲ್ಲಿ ಏಳು ಸೇರಿ ರಾಜ್ಯದಲ್ಲಿ ಸೋಮವಾರ ಸಂಜೆ ಮತ್ತೆ ಒಂಬತ್ತು ಕೊರೋನಾ ಪ್ರಕರಣಗಳು ವರದಿಯಾಗಿದ್ದು ಇದುವರೆಗೆ ಕರ್ನಾಟಕದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 651ಕ್ಕೆ ಏರಿಕೆಯಾಗಿದೆ.

ಬೆಂಗಳೂರು: ಬೀದರ್ ನಲ್ಲಿ ಏಳು ಸೇರಿ ರಾಜ್ಯದಲ್ಲಿ ಸೋಮವಾರ ಸಂಜೆ ಮತ್ತೆ ಒಂಬತ್ತು ಕೊರೋನಾ ಪ್ರಕರಣಗಳು ವರದಿಯಾಗಿದ್ದು ಇದುವರೆಗೆ ಕರ್ನಾಟಕದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 651ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ ಮಾರಣಾಂತಿಕ ಕೊರೋನಾ ರೋಗಕ್ಕೆ ಇಬ್ಬರು ಬಲಿಯಾಗಿದ್ದಾರೆ.
ಕಲಬುರಗಿ ನಿವಾಸಿ 56 ವರ್ಷದ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇವರು ಕೆಮ್ಮು ಹಾಗೂ ಜ್ವರದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಜೊತೆಗೆ, ದಾವಣಗೆರೆಯ 48 ವರ್ಷದ ನಿವಾಸಿ ಕೂಡ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇವರು ಮೇ 1 ರಂದು ಉಸಿರಾಟದ ತೊಂದರೆ, ಮಧುಮೇಹ ಮತ್ತು ಹೈಪೋಥೈರಾಡಿಸಮ್ ಕಾಯಿಲೆಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇದರೊಂದಿಗೆ, ದಾವಣಗೆರೆಯ 22 ಕೊರೋನಾ ಸೋಂಕಿತ ಪ್ರಕರಣಗಳು ಸೇರಿ ರಾಜ್ಯದಲ್ಲಿ ಭಾನುವಾರ ಸಂಜೆಯಿಂದ ಸೋಮವಾರ ಮಧ್ಯಾಹ್ನದವರೆಗೆ 37 ಪ್ರಕರಣಗಳು ಪತ್ತೆಯಾಗಿವೆ. ಬೀದರ್ ನಲ್ಲಿ ಕೂಡ 5 ಹೊಸ ಪ್ರಕರಣಗಳು ದೃಢಪಟ್ಟಿವೆ. 35,50 ಹಾಗೂ 46 ವರ್ಷದ ಮಹಿಳೆ, 16 ವರ್ಷದ ಬಾಲಕ ಮತ್ತು 72 ವರ್ಷದ ವೃದ್ಧೆ, 22 ವರ್ಷದ ಯುವಕ ಮತ್ತು 60 ವರ್ಷದ ವೃದ್ಧನಿಗೆ ಸೋಂಕು ತಗುಲಿದೆ.
ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 651ಕ್ಕೇರಿಕೆಯಾಗಿದ್ದು, 28 ಜನರು ಮೃತಪಟ್ಟಿದ್ದಾರೆ. 321 ಜನರು ಗುಣಮುಖರಾಗಿದ್ದಾರೆ.
ಚಿಕ್ಕಬಳ್ಳಾಪುರದ 30 ವರ್ಷದ ವ್ಯಕ್ತಿ, ಮಂಡ್ಯ ಜಿಲ್ಲೆಯ 20 ಹಾಗೂ 19 ವರ್ಷದ ಯುವತಿಯರಲ್ಲಿ ಸೋಂಕು ದೃಢಪಟ್ಟಿದೆ. ಹಾವೇರಿಯ ಸವಣೂರಿನಲ್ಲಿ ಮುಂಬೈಗೆ ಪ್ರಯಾಣ ಬೆಳೆಸಿದ ಇತಿಹಾಸವಿರುವ 32 ವರ್ದ ವ್ಯಕ್ತಿ, ವಿಜಯಪುರದ 288ನೇ ರೋಗಿಯ ದ್ವಿತೀಯ ಸಂಪರ್ಕದ 62 ವರ್ಷದ ವೃದ್ಧೆ, ಕಲಬುರಗಿಯ 36 ವರ್ಷದ ಮಹಿಳೆ ಮತ್ತು ಚಿಂಚೋಳಿಯ 37 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಬೆಂಗಳೂರು ನಗರದ 40 ವರ್ಷದ ವ್ಯಕ್ತಿ ಮತ್ತು ದಾವಣಗೆರೆಯ 48 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


