ಮಕ್ಕಳಿಗೂ ಹಬ್ಬಿದ ಮಾರಕ ಸೋಂಕು: ಬಾಗಲಕೋಟೆಯ ಮೂವರು ಅಪ್ರಾಪ್ತರಲ್ಲಿ ಕೊರೋನಾ ಪತ್ತೆ
ಬಾಗಲಕೋಟೆ ಜಿಲ್ಲೆಯಲ್ಲಿ ಗುರುವಾರ ಮೂವರು ಅಪ್ರಾಪ್ತ ವಯಸ್ಕರಿಗೆ ಕೊರೋನಾವೈರಸ್ ಸೋಂಕು ತಗುಲಿದೆ. ಇವರೆಲ್ಲರೂ ಕೇವಲ ಎರಡು ದಿನಗಳ ಹಿಂದೆ ಕೊರೋನಾ ಸೋಂಕು ದೃಢಪಟ್ಟಿದ್ದ ರೋಗಿಯ ಸಂಪರ್ಕದಲ್ಲಿದ್ದರು.

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ಗುರುವಾರ ಮೂವರು ಅಪ್ರಾಪ್ತ ವಯಸ್ಕರಿಗೆ ಕೊರೋನಾವೈರಸ್ ಸೋಂಕು ತಗುಲಿದೆ. ಇವರೆಲ್ಲರೂ ಕೇವಲ ಎರಡು ದಿನಗಳ ಹಿಂದೆ ಕೊರೋನಾ ಸೋಂಕು ದೃಢಪಟ್ಟಿದ್ದ ರೋಗಿಯ ಸಂಪರ್ಕದಲ್ಲಿದ್ದರು.
ಇಂದು ಬಿಡುಗಡೆಯಾದ ರಾಜ್ಯ ಸರ್ಕಾರದ ಅಧಿಕೃತ ಬುಲೆಟಿನ್ ನಲ್ಲಿ ಒಟ್ತಾರೆ ಹತ್ತು ಹೊಸ ಕೊರೋನಾ ಪ್ರಕರಣಗಳ ವರದಿ ಮಾಡಲಾಗಿದೆ. ಇದರಲ್ಲಿ ಬಾಗಲಕೋಟೆ ಜಿಲ್ಲೆಯ ನಾಲ್ಕು ವರ್ಷದ ಬಾಲಕ, ಒಂಬತ್ತು ವರ್ಷದ ಬಾಲಕಿ ಮತ್ತು 13 ವರ್ಷದ ಬಾಲಕರು ಸೇರಿದ್ದಾರೆ.
ಇದರಲ್ಲಿ ನಾಲ್ಕು ವರ್ಷದ ಬಾಲಕ 41 ವರ್ಷದ ಮಹಿಳೆಯ ಮಗನಾಗಿದ್ದು ಇದೀಗ ಕೋವಿಡ್ ದೃಢಪಟ್ಟ ಬಳಿಕ ಪ್ರತ್ಯೇಕವಾಗಿ ಇರಿಸಲಾಗಿದೆ. ಉಳಿದೆರಡು ಮಕ್ಕಳೂ ಮಹಿಳೆಯ ಸೋದರ ಮಾವನ ಮಕ್ಕಳಾಗಿದ್ದಾರೆ.
ಇದಕ್ಕೂ ಮೊದಲು ಮಾರ್ಚ್ 27 ರಂದು ದಕ್ಷಿಣ ಕನ್ನಡದ 10 ತಿಂಗಳ ಮಗುವಿಗೆ ಕೊರೋನಾ ಸೋಂಕು ದೃಢಪಟ್ಟಿತು.
ಇನ್ನು ಈ ಮೂರು ಪ್ರಕರಣ ಸೇರಿ ಜಿಲ್ಲೆಯಲ್ಲಿ ಇದುವರೆಗೆ ಎಂಟು ಕೊರೋನಾ ಕೇಸ್ ವರದಿಯಾಗಿದ್ದು ಇದರಲ್ಲಿ ಓರ್ವ ವೃದ್ದ ಸಾವನ್ನಪ್ಪಿದ್ದಾರೆ."ಜಿಲ್ಲೆಯ ಗೊತ್ತುಪಡಿಸಿದ ಆಸ್ಪತ್ರೆಯಲ್ಲಿ ಕೇಸ್ ನಂ. 165 - 41 ವರ್ಷದ ಮಹಿಳೆಗೆ ಕೊರೋನಾವೈರಸ್ ದೃಢಪಟ್ಟಾಗ ಮೂವರು ಅಪ್ರಾಪ್ತ ವಯಸ್ಕ ಮಕ್ಕಳನ್ನು ಇತರೆ 23 ಮಂದಿಯೊಂದಿಗೆ ಕ್ವಾರಂಟೈನ್ ನಲ್ಲಿರಿಸಲಾಗಿತ್ತು." ಜಿಲ್ಲಾಡಳಿತ ಹೇಳಿದೆ. ಇದೀಗ ಇನ್ನೂ 20 ಮಂದಿಯ ಫಲಿತಾಂಶಕ್ಕಾಗಿ ನಿರೀಕ್ಷಿಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


