corona

ಹಾಸನದಲ್ಲಿ 12 ಮಂದಿಗೆ ಕೊರೋನಾ: ಸೋಂಕಿತರ ಸಂಖ್ಯೆ 136ಕ್ಕೆ ಏರಿಕೆ, 7 ಪ್ರದೇಶಗಳು ಸೀಲ್'ಡೌನ್
ಜಿಲ್ಲೆಯಲ್ಲಿ ಕೊರೋನಾ ಹೆಮ್ಮಾರಿಯ ಅಬ್ಬರ ಮುಂದುವರೆದಿದ್ದು, ಬುಧವಾರ ಮತ್ತೆ 1 ವರ್ಷದ ಮಗು ಸೇರಿ 12 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 136ಕ್ಕೆ ಏರಿಕೆಯಾಗಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾ ಸೋಂಕು!
ಬುಧವಾರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚಿನ ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಒಟ್ಟು 63 ಕೇಸ್ ಗಳು ದಾಖಲಾಗಿವೆ.

ಕೊರೋನಾ ಎಫೆಕ್ಟ್: ಜೂ.1ರಿಂದ ಹೈಕೋರ್ಟ್ ಕಲಾಪ ಆರಂಭ, ವಕೀಲರಿಗೆ ಮಾಸ್ಕ್ ಕಡ್ಡಾಯ
ಜೂನ್.1ರಿಂದ ಹೈಕೋರ್ಟ್ ಕಲಾಪಗಳು ಎಂದಿನಂತೆ ಆರಂಭಗೊಳ್ಳಲಿದ್ದು, ಕೊರೋನಾ ವೈರಸ್ ಪರಿಣಾಮ ಕಲಾಪದ ವೇಳೆ ಕಟ್ಟುನಿಟ್ಟಿನ ಆದೇಶ ಪಾಲನೆ ಮಾಡಬೇಕೆಂದು ರಾಜ್ಯ ಸರ್ಕಾರ ಆದೇಶಿಸಿದೆ.

ಬರ್ತ್ ಡೇ ಪಾರ್ಟಿ ತಂದ ಕುತ್ತು; ಇಂದೋರ್ ನಲ್ಲಿ 19 ಮಂದಿಯಲ್ಲಿ ಕೊರೋನಾ ಪಾಸಿಟಿವ್, ಮಹಿಳೆ ಬಲಿ
ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಜನರು ಮಾಡುವ ಎಡವಟ್ಟುಗಳಿಗೆ ಈ ಒಂದು ಘಟನೆ ಸ್ಪಷ್ಟ ನಿದರ್ಶನವಾಗಿದೆ. ಬರ್ತ್ ಡೇ ಪಾರ್ಟಿಯಲ್ಲಿ ಪಾಲ್ಗೊಂಡ ಪರಿಣಾಮ ಇಂದೋರ್ ನಲ್ಲಿ 19 ಮಂದಿಯಲ್ಲಿ ಕೊರೋನಾ ದೃಢಪಟ್ಟಿದ್ದು, ಮಹಿಳೆಯೋರ್ವರು ಬಲಿಯಾಗಿದ್ದಾರೆ.

ಪರ್ಯಾಯ ಶಿಕ್ಷಣ ವಿಧಾನದತ್ತ ಶಿಕ್ಷಣ ಇಲಾಖೆ ದೃಷ್ಟಿ: 3 ಶೈಕ್ಷಣಿಕ ವಾಹಿನಿ ತೆರೆಯಲು ಅನುಮತಿ ಕೋರಿ ಕೇಂದ್ರಕ್ಕೆ ಪತ್ರ
ಕೊರೋನಾ ಶಿಕ್ಷಣ ವಲಯದ ಮೇಲೆ ಭಾರೀ ಪರಿಣಾಮ ಬೀರಿದ್ದು, ಈ ಹಿನ್ನೆಲೆಯಲ್ಲಿ ಪರ್ಯಾಯ ಶಿಕ್ಷಣ ವಿಧಾನದತ್ತ ಮುಖ ಮಾಡಿರುವ ಶಿಕ್ಷಣ ಇಲಾಖೆ 3 ಶೈಕ್ಷಣಿಕ ವಾಹಿನಿಗಳನ್ನು ತೆರೆಯಲು ಕೇಂದ್ರ ಸರ್ಕಾರದ ಅನುಮತಿಯನ್ನು ಕೋರಿದೆ.

ಕೊರೋನಾ ಬಿಕ್ಕಟ್ಟಿನ ನಡುವಲ್ಲೇ ರಾಜ್ಯದಲ್ಲಿ ಪುನಶ್ಚೇತನದತ್ತ ಕಾಂಗ್ರೆಸ್!
ಲೋಕಸಭಾ ಚುನಾವಣೆಯಲ್ಲಿ ಭಾರೀ ಸೋಲು, ಜೆಡೆಎಸ್ ಜೊತೆಗಿನ ಮೈತ್ರಿ ಕಡಿದುಕೊಂಡ ಬಳಿಕ ಬಹುತೇಕ ಕೋಮಾಗೆ ಜಾರಿದ್ದ ರಾಜ್ಯ ಕಾಂಗ್ರೆಸ್ ಪಕ್ಷ ಮತ್ತೆ ಪುಟಿದೇಳಲು ಆರಂಭಿಸಿದೆ.

ಅಮೆರಿಕಾದಲ್ಲಿ ಕೊರೋನಾ ರೌದ್ರನರ್ತನ: 1 ಲಕ್ಷ ಗಡಿ ದಾಟಿದ ಸಾವಿನ ಸಂಖ್ಯೆ
ವಿಶ್ವದಲ್ಲಿಯೇ ಅತೀ ಹೆಚ್ಚು ಕೊರೋನಾ ಸೋಂಕಿತರನ್ನು ಹೊಂದಿರುವ ಅಮೆರಿಕಾ ಮತ್ತೊಂದು ಕುಖ್ಯಾತಿಗೆ ಪಾತ್ರವಾಗಿದೆ. ಅಮೆರಿಕಾದಲ್ಲಿ ಕೊರೋನಾಗೆ ಈ ವರೆಗೂ 1 ಲಕ್ಷ ಮಂದಿ ಬಲಿಯಾಗಿದ್ದಾರೆ.

14 ಪೊಲೀಸರಿಗೆ ಕೊರೋನಾ ಸೋಂಕು: ಎಚ್ಚೆತ್ತ ಗೃಹ ಇಲಾಖೆಯಿಂದ ಪಿಪಿಇ ಕಿಟ್
14 ಪೊಲೀಸರಿಗೆ ಕೊರೋನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಗೃಹ ಇಲಾಖೆಗೆ ಹೊಸ ಸವಾಲು ಎದುರಾಗಿದೆ, ಈ 14 ಪೊಲೀಸರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 585 ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

ಉಡುಪಿ: ಶತಕ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ
32 ಹೊಸ ಕೇಸ್ ಗಳಲ್ಲಿ 28 ಮಂದಿ ಮಹಾರಾಷ್ಟ್ರ ಹಾಗೂ ಇಬ್ಬರು ದುಬೈಯಿಂದ ಜಿಲ್ಲೆಗೆ ಬಂದವರಾಗಿದ್ದು, ಎಲ್ಲರೂ ಕ್ವಾರಂಟೈನ್‍ನಲ್ಲಿದ್ದಾರೆ. ಸದ್ಯ 16 ಮಂದಿಯನ್ನು ಉಡುಪಿಯ ಡಾ.ಟಿಎಂಎ ಪೈ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

