corona

ಇಳಿ ವಯಸ್ಸಿನಲ್ಲೂ ಕೊರೋನಾ ಗೆದ್ದು ರೋಗಿಗಳಿಗೆ ಭರವಸೆಯ ಆಶಾಕಿರಣವಾದ 97ರ ವೃದ್ಧ!
1923 ರಲ್ಲಿ ಜನಿಸಿದ್ದ ವ್ಯಕ್ತಿ ಬುಧವಾರ ಕೊರೋನಾದಿಂದ ಗುಣಮುಖರಾಗಿ ಖಾಸಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ವಯಸ್ಸಾದ ರೋಗಿಗಳಲ್ಲಿ ದೇಶದಲ್ಲೇ ಇವರೇ ಮೊದಲು ಕೊರೋನಾ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಲಾಕ್'ಡೌನ್ ಬಳಿಕ ಹೆಚ್ಚಿದ ಸೈಬರ್ ಕ್ರೈಮ್: 2 ತಿಂಗಳಲ್ಲಿ 2,000 ಪ್ರಕರಣಗಳು ದಾಖಲು!
ಕೊರೋನಾ ಲಾಕ್'ಡೌನ್ ಬಳಿಕ ರಾಜ್ಯದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗಿದ್ದು, ಕೇವಲ 2 ತಿಂಗಳುಗಳಲ್ಲಿ ಬರೋಬ್ಬರಿ 2,000 ಪ್ರಕರಣಗಳು ದಾಖಲಾಗಿರುವುದಾಗಿ ತಿಳಿದುಬಂದಿದೆ.

ಕೊರೋನಾ ನಿಯಂತ್ರಿಸಲು ಕಠಿಣ ಕ್ರಮ: ಉತ್ತರಪ್ರದೇಶ ಸರ್ಕಾರ ಕೊಂಡಾಡಿದ ಪಾಕ್ ದಿನಪತ್ರಿಕೆ
ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಉತ್ತರಪ್ರದೇಶ ಸರ್ಕಾರ ಕೈಗೊಂಡಿರುವ ಕಠಿಣ ಕ್ರಮಗಳನ್ನು ಪಾಕಿಸ್ತಾನದ ದಿನಪತ್ರಿಕೆಯೊಂದು ಕೊಂಡಾಡಿದೆ.

ದುಬೈ: ಕೊರೋನಾ ವೈರಸ್ ಗೆ ಭಾರತೀಯ ಮೂಲದ ವೈದ್ಯ ಬಲಿ
61 ವರ್ಷದ ಭಾರತೀಯ ಮೂಲದ ವೈದ್ಯ ದುಬೈನಲ್ಲಿ ಕೊರೋನಾ ವೈರಸ್ ಗೆ ಬಲಿಯಾಗಿದ್ದಾರೆ. ಮಹಾರಾಷ್ಟ್ರ ರಾಜ್ಯದ ನಾಗಪುರ ಮೂಲದ ಡಾ.ಸುಧೀರ್ ರಂಬೌ ವಾಶ್ಮೀಕರ್ ಮೃತ ವೈದ್ಯ, ಶನಿವಾರ ಆಲ್ ಐನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.

ತೆಲಂಗಾಣ: ಕೊರೋನಾಗೆ 33 ವರ್ಷದ ಪತ್ರಕರ್ತ ಬಲಿ
ಡೆಡ್ಲಿ ಕೊರೊನಾ ವೈರಸ್ ಗೆ ಪತ್ರಕರ್ತರೊಬ್ಬರು ಬಲಿಯಾಗಿದ್ದಾರೆ. ತೆಲುಗು ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುವ 33 ವರ್ಷದ ಪತ್ರಕರ್ತರೊಬ್ಬರು ಕೋವಿಡ್-19 ನಿಂದ ಮೃತಪಟ್ಟಿದ್ದಾರೆ.

ಪಿಐಬಿ ಪ್ರಧಾನ ನಿರ್ದೇಶಕರಿಗೂ ಕೊರೋನಾ ಸೋಂಕು: ಏಮ್ಸ್ ಗೆ ದಾಖಲು
ಪ್ರೆಸ್ ಇನ್ಫರ್ಮೇಷನ್ ಬ್ಯುರೊ (ಪಿಐಬಿ) ಪ್ರಧಾನ ನಿರ್ದೇಶಕ ಕೆ.ಎಸ್.ಧತವಾಲಿಯಾ ಅವರಿಗೆ ಕೋವಿಡ್-19 ದೃಢಪಟ್ಟಿದೆ. ಅವರು ಚಿಕಿತ್ಸೆಗಾಗಿ ಏಮ್ಸ್ ಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ಸ್ಥಿತಿಗತಿಗಳ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ.

ಕೊರೋನಾ ಭೀತಿಯಿಂದ ಸಾರ್ವಜನಿಕ ಭೇಟಿಗೆ ನಿರ್ಬಂಧ ಹೇರಿದ್ದ ಬಿಡಿಎ ಕಚೇರಿ ಜೂ.8ರಿಂದ ಪ್ರವೇಶಕ್ಕೆ ಮುಕ್ತ
ನಗರದ ಕುಮಾರಕೃಪಾ ರಸ್ತೆಯಲ್ಲಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಚೇರಿಗೆ ನಾಡಿದ್ದು ಸೋಮವಾರದಿಂದ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಬಿಡಿಎ ಕಾರ್ಯಪಡೆಗೆ ಸಂಬಂಧಪಟ್ಟ ಕಾನ್ಸ್ಟೇಬಲ್ ಗೆ ಕಳೆದ ವಾರ ಕೊರೋನಾ ಪಾಸಿಟಿವ್ ಬಂದ ಮೇಲೆ ಸುರಕ್ಷತೆ ಕ್ರಮವಾಗಿ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿತ್ತು.

ಕೊರೋನಾ: ಸಾರಿ, ಐಎಲ್ಐ ಕೇಸ್ ಪತ್ತೆಗೆ ಸರ್ಕಾರದ ನೆರವಿಗೆ ಬಂದ ಫಾರ್ಮಸಿಗಳು!
ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಸಾರಿ, ಐಎಲ್ಐ ಪ್ರಕರಣಗಳನ್ನು ಪತ್ತೆ ಹಚ್ಚಲು ಔಷಾಧಾಲಯಗಳು ಸರ್ಕಾರದ ನೆರವಿಗೆ ಬಂದಿವೆ.

ಉಡುಪಿಯಲ್ಲಿ ಒಂದೇ ದಿನ 204 ಪ್ರಕರಣ ಪತ್ತೆ, ಜೂನ್ 7ರ ಬಳಿಕ ಸೋಂಕಿತರ ಸಂಖ್ಯೆ ಗಣನೀಯ ಇಳಿಕೆ ಸಾಧ್ಯತೆ
ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಅತೀ ಹೆಚ್ಚು 204 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ರಾಜ್ಯದಲ್ಲಿಯೇ ಅತೀ ಹೆಚ್ಚು 768 ಆಗಿದೆ. ಈ 204 ಸೋಂಕಿತರಲ್ಲಿ ಮುಂಬೈಯಿಂದ ಬಂದವರು 203 ಆಗಿದ್ದರೆ, ಒಬ್ಬರು ಉಡುಪಿ ಜಿಲ್ಲೆಯ ಪೊಲೀಸ್ ಸಿಬ್ಬಂದಿಯಾಗಿದ್ದಾರೆ.

