corona

ಕೊರೋನಾ ವಿರುದ್ದ ಹೋರಾಟ: ವಿಕ್ಟೋರಿಯಾ ಆಸ್ಪತ್ರೆ ನರ್ಸ್ ಗಳಿಗೆ ಕಳಪೆ ಗುಣಮಟ್ಟದ ಪಿಪಿಇ ಕಿಟ್ ಗಳ ವಿತರಣೆ?
ತಮ್ಮ ಜೀವವನ್ನೇ ಪಣಕ್ಕಿಟ್ಟು, ಮಹಾಮಾರಿ ವೈರಸ್ ನಿಂದ ಬಳಲುತ್ತಿರುವ ಸೋಂಕಿತರಿಗೆ ಚಿಕಿತ್ಸೆ ನಡಿ ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ವಿಕ್ಟೋರಿಯಾ ಆಸ್ಪತ್ರೆಯ ನರ್ಸ್ ಗಳಿಗೆ ಕಳಪೆ ಗುಣಮಟ್ಟದ ಪಿಪಿಇ ಕಿಟ್ ಗಳನ್ನು ವಿತರಸಲಾಗಿದೆ ಎಂದು ಹೇಳಲಾಗುತ್ತಿದೆ.

ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆ ವೈದ್ಯನಿಗೆ ಕೊರೋನಾ ಸೋಂಕು; ಮನೆ ಮಾಡಿದ ಆತಂಕ
ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ವೈದ್ಯರೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು ಆತಂಕ ಮನೆ ಮಾಡಿದೆ.ಪ್ಯಾಥಾಲಜಿ ವಿಭಾಗದ 52 ವರ್ಷದ ವೈದ್ಯನಿಗೆ ಸೋಂಕು ತಗುಲಿದೆ, ಧಾರವಾಡದ ಮಕ್ಕಳ ವೈದ್ಯನ ನಂತರ ಹುಬ್ಬಳ್ಳಿಯ ವೈದ್ಯರಿಗೆ ಸೋಂಕು ತಗುಲಿದೆ. ಧಾರವಾಡದ ಕೆಂಪಗೇರಿ ಓಣಿಯ ನಿವಾಸಿಯಾದ ವೈದ್ಯ ಧಾರವಾಡದಲ್ಲಿ ಲ್ಯಾಬೋರೇಟರಿ ನಡೆಸುತ್ತಿದ್ದಾರೆ.

ವಿಜಯಪುರ: ಡಕಾಯಿತರಿಗೆ ಸೋಂಕು; ಪೊಲೀಸ್ ಸಿಬ್ಬಂದಿ, ಜಡ್ಜ್ ಗೆ ಕ್ವಾರಂಟೈನ್
ದರೋಡೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದ ಮೂವರು ದರೋಡೆಕೋರರ ಪೈಕಿ, ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರ ಜೊತೆ ಸಂಪರ್ಕದಲ್ಲಿದ್ದ 22 ಪೊಲೀಸರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

ಲಡಾಖ್ ಸಂಘರ್ಷ: ಚೀನಾದಲ್ಲಿರುವ ಕರ್ನಾಟಕದ ಯೋಗ ಶಿಕ್ಷಕರು ಹೇಳಿದ್ದೇನು..?
ಲಡಾಖ್ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಚೀನಾ ಹಾಗೂ ಭಾರತದ ನಡುವೆ ಸಂಘರ್ಷ ಸಂಭವಿಸಿದ ಬಳಿಕ ಉಭಯ ರಾಷ್ಟ್ರಗಳ ನಡುವೆ ಸಂಬಂಧ ಹದಗೆಟ್ಟಿದೆ. ಈ ಬೆಳವಣಿಗೆ ನಡುವಲ್ಲೇ ಭಾನುವಾರ ವಿಶ್ವದಾದ್ಯಂತ ಯೋಗ ದಿನವನ್ನು ಆಚರಣೆ ಮಾಡಲಾಗುತ್ತಿದ್ದು, ಇದೀಗ ಚೀನಾದಲ್ಲಿರುವ ರಾಜ್ಯದ ಯೋಗ ಶಿಕ್ಷಕರ ಯೋಗಕ್ಷೇಮ ಕುರಿತು ಚಿಂತೆಗಳು ಆರಂಭವಾಗಿವೆ.

ಕಂಕಣ ಸೂರ್ಯ ಗ್ರಹಣ: ನೆಹರೂ ತಾರಾಲಯಕ್ಕಿಲ್ಲ ಪ್ರವೇಶ
ಇಂದು ರಾಹುಗ್ರಸ್ತ ಚೂಡಾಮಣಿ ಸೂರ್ಯಗ್ರಹಣ ಪ್ರಯುಕ್ತ ನೆಹರು ತಾರಾಲಯದಲ್ಲಿ ಸೂರ್ಯಗ್ರಹಣ ವೀಕ್ಷಣೆಗೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಸೂರ್ಯ ಗ್ರಹಣ ನಿಮಿತ್ಯ ಕೇವಲ ಅಧ್ಯಯನದ ದೃಷ್ಟಿಯಿಂದ ಮಾತ್ರ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ತಮಿಳುನಾಡು, ತೆಲಂಗಾಣದ ನಂತರ ಆಂಧ್ರ ಪ್ರದೇಶದಲ್ಲೂ ಎಸ್ ಎಸ್ ಎಲ್ ಸಿ ಪರೀಕ್ಷೆ ರದ್ದು
ಕೊರೋನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಕೊರೋನಾ ಭಯದಿಂದಾಗಿಯೇ ಕಳೆದ ಮಾರ್ಚ್ನಲ್ಲೇ ನಡೆಯಬೇಕಿದ್ದ 10ನೇ ತರಗತಿ ಪರೀಕ್ಷೆಯನ್ನು ಎಲ್ಲಾ ರಾಜ್ಯಗಳು ತಾತ್ಕಾಲಿಕವಾಗಿ ಮುಂದೂಡಿದ್ದವು. ಈಗ ಆಂಧ್ರಪ್ರದೇಶದ ಜಗನ್ಮೋಹನ್ ರೆಡ್ಡಿ ಸರ್ಕಾರ 10ನೇ ತರಗತಿ ಪರೀಕ್ಷೆಯನ್ನೇ ರದ್ದುಗೊಳಿಸಿ ಆದೇಶಿಸಿದೆ.

ಕೊರೋನಾ: ಸೋಂಕಿತ ವ್ಯಕ್ತಿಯ ಮೃತದೇಹ ಹೊತ್ತೊಯ್ದು ಪೊಲೀಸರಿಗೆ ಸಂಕಷ್ಟ ಸೃಷ್ಟಿಸಿದ ಕುಟುಂಬ!
ಕೋರೋನಾ ವೈರಸ್ ನಿಂದ ಮೃತಪಟ್ಟಿದ್ದ ವ್ಯಕ್ತಿಯ ದೇಹವನ್ನು ಹೊತ್ತೊಯ್ದು ಕುಟುಂಬವೊಂದು, ಆತಂಕ ಸೃಷ್ಟಿಸಿದ್ದ ಘಟನೆಯೊಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ಸಿಬ್ಬಂದಿಯೋರ್ವನಲ್ಲಿ ಕೊರೋನಾ ಪತ್ತೆ: ಬೆಂಗಳೂರು ವಿಭಾಗೀಯ ರೈಲ್ವೇ ಕಚೇರಿ ಬಂದ್
ಸಿಬ್ಬಂದಿಯೊಬ್ಬರಲ್ಲಿ ಕೊರೋನಾ ಪತ್ತೆಯಾದ ಹಿನ್ನೆಲೆಯಲ್ಲಿ ಬೆಂಗಳೂರು ವಿಭಾಗೀಯ ರೈಲ್ವೇ ಕಚೇರಿಯನ್ನು ಶುಕ್ರವಾರ ಬಂದ್ ಮಾಡಲಾಗಿದೆ.

ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾ ಚಿಕಿತ್ಸೆ ದರ ನಿಗದಿ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ
ಕೊರೋನಾ ರೋಗಿಗಳು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವುದಾದರೆ, ಈ ಚಿಕಿತ್ಸೆಗೆ ಎಷ್ಟು ದರ ನಿಗದಿ ಮಾಡಬೇಕು ಎಂಬ ಕುರಿತು ಮುಂದಿನ ಕ್ಯಾಬಿನೆಟ್ ಮೀಟಿಂಗ್ನಲ್ಲಿ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.

