Corona Virus

ಕೊರೊನಾ ವೈರಸ್ ಬಗ್ಗೆ ಆತಂಕ ಬೇಡ, ಮುಂಜಾಗ್ರತೆ ವಹಿಸಿ - ಬಿ ಎಸ್ ಯಡಿಯೂರಪ್ಪ
ಕೊರೊನಾ ವೈರಸ್ ಬಗ್ಗೆ ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೊಳಗಾಗಬಾರದು. ಅಗತ್ಯ ವೈದ್ಯಕೀಯ ನೆರವಿಗೆ ಸರ್ಕಾರ ಎಲ್ಲ ರೀತಿಯಲ್ಲೂ ಸಜ್ಜಾಗಿದ್ದು, ಮುಂಜಾಗ್ರತಾ ಕ್ರಮಗಳಿಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಕೊರೊನಾ ವೈರಸ್ ನಿಂದ ಐಪಿಎಲ್, ದಕ್ಷಿಣ ಆಫ್ರಿಕಾ ಸರಣಿಗೆ ಯಾವುದೇ ಧಕ್ಕೆಯಿಲ್ಲ: ಸೌರವ್ ಗಂಗೂಲಿ
ಕೊರೊನಾ ವೈರಸ್ ನಿಂದ ಮುಂಬರುವ ಐಪಿಎಲ್ ಟಿ20 ಸರಣಿ ಪಂದ್ಯಕ್ಕೆ ಯಾವುದೇ ತೊಂದರೆಯಿಲ್ಲ,ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಗಾವಹಿಸುತ್ತಿದ್ದಾರೆ ಎಂದು ಇಂಡಿಯನ್ ಪ್ರೀಮಿಯರ್ ಲೀಗ್ ನ ಆಡಳಿತ ಮಂಡಳಿ ಅಧ್ಯಕ್ಷ ಬ್ರಜೇಶ್ ಪಟೇಲ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್ -19 ಸೋಂಕು ತಡೆಗೆ ಸಕಲ ಮುನ್ನೆಚ್ಚರಿಕೆ ಕ್ರಮ; ಆರೋಗ್ಯ ಸಚಿವ ಶ್ರೀರಾಮುಲು
ಕೊರೋನಾ ಸೋಂಕು ದೃಢಪಟ್ಟಿರುವ ಸಾಫ್ಟ್ ವೇರ್ ಕಂಪನಿಯ ಎಂಜಿನಿಯರ್ ಜೊತೆ ತೆರಳಿದ್ದ ಸಹ ಪ್ರಯಾಣಿಕರನ್ನು ಪತ್ತೆ ಹಚ್ಚಿ ಅವರ ಆರೋಗ್ಯದ ಮೇಲೆ ಹದ್ದಿನ ಕಣ್ಣಿರಿಸಿರುವುದು ಸೇರಿದಂತೆ ಕೋವಿಡ್ -19 ಸೋಂಕು ತಡೆಗೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಮಂಗಳವಾರ ಮಾಹಿತಿ ನೀಡಿದ್ದಾರೆ.

ಶಾಸಕರಿಗೂ ಕರೋನಾ ವೈರಸ್ ಭೀತಿ: ಮೇಲ್ಮನೆಯಲ್ಲಿ ಮಾಸ್ಕ್ ಧರಿಸಿ ಬಂದ ಸರವಣ
ಜಾಗತಿಕವಾಗಿ ಭಾರೀ ತಲ್ಲಣ ಉಂಟು ಮಾಡಿರುವ ಕೊರೋನಾ ವೈರಸ್ ಗೆ ಇದೀಗ ಶಾಸಕರು ಸಹ ಬೆಚ್ಚಿ ಬೀಳುವಂತೆ ಮಾಡಿದೆ. ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಮೊಗಸಾಲೆಯಲ್ಲಿ ಕೋವಿಡ್ - 19 ಬಗ್ಗೆ ಶಾಸಕರ ನಡುವೆಯೇ ವಿಸ್ತೃತ ಚರ್ಚೆ ನಡೆಯುತ್ತಿತ್ತು.

ಬಾಗಲಕೋಟೆಯಲ್ಲಿ ನಡೆಯಲಿದೆ ವೈಶಿಷ್ಟಮಯ ಹೋಳಿ: ರಂಗಿನಾಟಕ್ಕೆ ಅಡ್ಡಿ ಆಗುತ್ತಾ ಕೊರೊನಾ?
ಹೋಳಿ ಹಬ್ಬ ಎಂದಾಕ್ಷಣ ನೆನಪಿಗೆ ಬರುವುದೇ ಬಾಗಲಕೋಟೆ. ದೇಶದಾದ್ಯಂತ ಹೋಳಿ ಹಬ್ಬದ ಅಂಗವಾಗಿ ಅತ್ಯಂತ ಅದ್ಧೂರಿಯಾಗಿ ರಂಗಿನಾಟ ನಡೆಯುವುದೇ ಕೋಲ್ಕತ್ತಾ ಮತ್ತು ಬಾಗಲಕೋಟೆಯಲ್ಲಿ ಎನ್ನುವುದು ವಿಶೇಷ. ಇಂತಹ ವೈಶಿಷ್ಟö್ಯಮ ಹಬ್ಬಕ್ಕೆ ಮಾರಕ ಕೊರೊನಾ ಎಲ್ಲಿ ಕಂಟಕವಾಗುತ್ತೋ ಎನ್ನುವ ಭಯ ಜನಮಾನಸದಲ್ಲಿ ಆವರಿಸಿಕೊಳ್ಳತೊಡಗಿದೆ

ಪ್ರಧಾನಿ ಭೇಟಿಯಾದ ಕೇಜ್ರಿವಾಲ್: ದೆಹಲಿ ಹಿಂಸಾಚಾರ, ಕೊರೋನಾ ವೈರಸ್ ಬಗ್ಗೆ ಚರ್ಚೆ
ದೆಹಲಿಯಲ್ಲಿ ಸಿಎಂ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು, ದೆಹಲಿ ಹಿಂಸಾಚಾರ ಮತ್ತು ಕೊರೋನಾ ವೈರಸ್ ಕುರಿತಂತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಕೊರೋನಾ ವೈರಸ್ ಮರಣ ಮೃದಂಗಕ್ಕೆ ಜಗತ್ತಿನಾದ್ಯಂತ ಮೂರು ಸಾವಿರ ಬಲಿ..!
ವಿಶ್ವಾದ್ಯಂತ ಭೀತಿ ಹುಟ್ಟಿಸಿರುವ ಕೊರೋನಾ ಸೋಕಿನಿಂದ ಇದುವರೆಗೆ ಮೃತಪಟ್ಟವರ ಸಂಖ್ಯೆ ಮೂರು ಸಾವಿರಕ್ಕೆ ಏರಿಕೆಯಾಗಿದೆ.

ಕೊರೋನಾ ಭೀತಿ: ರಾಜ್ಯಾದ್ಯಂತ ಕಟ್ಟೆಚ್ಚರ
ಮಾರಣಾಂತಿಕ ಕೊರೋನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರೇಕ್ಷಣೀಯ ಸ್ಥಳಗಳು ಸೇರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.

ಬೆಂಗಳೂರು ಟೆಕ್ಕಿಗೆ ಕೊರೋನಾ ಸೋಂಕು: ತುರ್ತು ಸಭೆ ಕರೆದ ಸಚಿವ ಶ್ರೀರಾಮುಲು, ಸಹ ಪ್ರಯಾಣಿಕರ ಮೇಲೆ ತೀವ್ರ ನಿಗಾ
ಬೆಂಗಳೂರು ಮೂಲದ ಟೆಕಿಗೆ ಕೊರೋನಾ ಸೋಂಕು ತಗುಲಿರುವ ಹಿನ್ನಲೆಯಲ್ಲಿ ರಾಜ್ಯ ಆರೋಗ್ಯ ಸಚಿವ ಬಿ ಶ್ರೀರಾಮುಲು ಸಚಿವಾಲಯದ ಅಧಿಕಾರಿಗಳ ತುರ್ತು ಸಭೆ ಕರೆದಿದ್ದಾರೆ.

