Corona Virus

ಕೊರೊನಾ ಭೀತಿ: ಪರಿಸರ ಸ್ನೇಹಿ ಪ್ರವಾಸೋದ್ಯಮ, ಸಫಾರಿ ರದ್ದುಪಡಿಸಲು ಅರಣ್ಯ ಇಲಾಖೆ ಚಿಂತನೆ
ಕೊರೊನಾ ವೈರಸ್ ಭೀತಿ ಹಿನ್ನಲೆಯಲ್ಲಿ ಅರಣ್ಯ ಪ್ರದೇಶಗಳಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮ ಮತ್ತು ಸಫಾರಿಯನ್ನು ರದ್ದುಗೊಳಿಸಲು ರಾಜ್ಯ ಅರಣ್ಯ ಇಲಾಖೆ ಮುಂದಾಗಿದೆ.

ಸರ್ಕಾರದ ಆದೇಶ ಪಾಲಿಸದ ಶಾಲೆಗಳ ವಿರುದ್ಧ ಕಠಿಣ ಕ್ರಮ; ಸಚಿವ ಸುರೇಶ್ ಕುಮಾರ್ ಎಚ್ಚರಿಕೆ
ಸರ್ಕಾರದ ಆದೇಶ ಪಾಲಿಸುವುದು ಎಲ್ಲ ಶಾಲೆಗಳ ಕರ್ತವ್ಯ, ಸರ್ಕಾರದ ಈ ಆದೇಶ ಪಾಲಿಸದಿರುವ ಶಾಲೆಗಳು ಅದೆಷ್ಟೇ ಪ್ರಭಾವಶಾಲಿಯಾಗಿದ್ದರೂ ಅವುಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ವೈರಸ್ ಭೀತಿ: ಇರಾನ್ ನಿಂದ 58 ಭಾರತೀಯರನ್ನು ಕರೆತಂದ ವಾಯುಪಡೆ ವಿಮಾನ
ಕೊರೊನಾ ಪೀಡಿತ ಇರಾನ್ ನಿಂದ 58 ಮಂದಿ ಭಾರತೀಯರನ್ನು ಭಾರತೀಯ ವಾಯುಪಡೆ ಮಿಲಿಟರಿ ಸಾಮಗ್ರಿಗಳ ಸಾಗಾಟ ವಿಮಾನದಲ್ಲಿ ಹೊತ್ತುತಂದಿದೆ.

ಪುಣೆಯಲ್ಲಿ ಇಬ್ಬರಲ್ಲಿ ಕೊರೊನಾ ವೈರಸ್ ಪತ್ತೆ: ಭಾರತದಲ್ಲಿ ಸೋಂಕಿತರ ಸಂಖ್ಯೆ 47ಕ್ಕೆ ಏರಿಕೆ
ದೇಶದಲ್ಲಿ ಮತ್ತೆ ಏಳು ಹೊಸ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು ಇದುವರೆಗೆ ದೃಢಪಟ್ಟವರ ಸಂಖ್ಯೆ 47ಕ್ಕೇರಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ತಿಳಿಸಿದೆ.

ಸುಳ್ಳು ಸುದ್ದಿಯ ಪರಿಣಾಮ: ಕೊರೋನಾ ವೈರಸ್ ’ಚಿಕಿತ್ಸೆ’ಗೆ ಕಳ್ಳಬಟ್ಟಿ ಕುಡಿದು 27 ಮಂದಿ ಸಾವು!
ಕೊರೋನಾ ವೈರಸ್ ತಡೆಗೆ ಮದ್ಯಸೇವನೆ ಸಹಕಾರಿ ಎಂಬ ಸುಳ್ಳುಸುದ್ದಿ ನಂಬಿ ಕಳ್ಳಬಟ್ಟಿ ಕುಡಿದ 27 ಮಂದಿ ಸಾವನ್ನಪ್ಪಿದ್ದಾರೆ.

ಬೆಂಗಳೂರಿನಲ್ಲಿ ಕೊರೋನಾ ಪತ್ತೆ: ನರ್ಸರಿ, ಐದನೇ ತರಗತಿವರೆಗಿನ ಶಾಲೆಗಳಿಗೆ ರಜೆ ಸಾರಿದ ಸರ್ಕಾರ
ರಾಜ್ಯದ ಮೊದಲ್ ಕೊರೋನಾ ಸೋಂಕು ಪ್ರಕರಣ ಬೆಂಗಳೂರಿನಲ್ಲಿ ಪತ್ತೆಯಾಗಿರುವ ಹಿನ್ನೆಲೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ ವ್ಯಾಪ್ತಿಯ ನರ್ಸರಿ, ಪೂರ್ವ ಪ್ರಾಥಮಿಕ ಹಾಗೂ ಐದನೇ ತರಗತಿ ವರೆಗಿನ ಪ್ರಾಥಮಿಕ ಶಾಲೆಗಳಿಗೆ ಮುಂದಿನ ಆದೇಶದವರೆಗೆ ರಜೆ ಸಾರಿ ಸರ್ಕಾರ ಆದೇಶಿಸಿದೆ.

ಕೊರೋನಾ ಎಫೆಕ್ಟ್: ಚೀನೀಯರಿಗೂ ಗೊತ್ತಾಯ್ತಾ ರಾಗಿ ಮುದ್ದೆ ತಾಕತ್ತು, ವಿಡಿಯೋ ವೈರಲ್!
ಓಡಾಡುವುದನ್ನೆಲ್ಲಾ ತಿನ್ನುವ ಚೀನಿಯರಿಗೆ ಕೊರೋನಾ ವೈರಸ್ ದೊಡ್ಡ ಪೆಟ್ಟು ನೀಡಿದೆ. ಕೊರೋನಾ ವೈರಸ್ ಚೀನಾವನ್ನೇ ಸ್ಥಬ್ದವಾಗುವಂತೆ ಮಾಡಿದೆ. ಇದೀಗ ಚೀನೀಯರು ತಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳುತ್ತಿರುವ ಸೂಚನೆ ಸಿಕ್ಕಿದೆ.

ಬಾಂಗ್ಲಾದೇಶಕ್ಕೂ ಹಬ್ಬಿದ ಕೊರೊನಾ ವೈರಸ್: ಪ್ರಧಾನಿ ಮೋದಿ ಪ್ರವಾಸ ರದ್ದು ಸಾಧ್ಯತೆ
ಬಾಂಗ್ಲಾದೇಶದಲ್ಲಿ ಮೂರು ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಢಾಕಾ ಭೇಟಿಯನ್ನು ರದ್ದುಪಡಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ಸಂಬಂಧ ಅಂತಿಮ ನಿರ್ಧಾರ ಸದ್ಯದಲ್ಲಿಯೇ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಕೊರೋನಾ ವೈರಸ್: ಚೀನಾದಲ್ಲಿ ಮತ್ತೆ 27 ಸೋಂಕಿತರ ಸಾವು, ಸಾವಿನ ಸಂಖ್ಯೆ 3097ಕ್ಕೇರಿಕೆ
ಚೀನಾದಲ್ಲಿ ಕೊರೋನಾ ಮರಣ ಮೃದಂಗ ಮುಂದುವರೆದಿದ್ದು, ಶನಿವಾರ ಮತ್ತೆ 27 ಮಂದಿ ಸೋಂಕಿತರು ಸಾವನ್ನಪ್ಪುವ ಮೂಲಕ ಕೊರೋನಾ ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ 3097ಕ್ಕೆ ಏರಿಕೆಯಾಗಿದೆ.

