Corona Virus

ಭಾರತ ಲಾಕ್ ಡೌನ್ ಸಮಗ್ರ ಮತ್ತು ದಿಟ್ಟ ಕ್ರಮ ಎಂದ ವಿಶ್ವ ಆರೋಗ್ಯ ಸಂಸ್ಥೆ
ಕೊರೋನಾ ವೈರಸ್ ವಿರುದ್ಧ ಹೋರಾಟದಲ್ಲಿ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ, ಸಂಪೂರ್ಣ ಭಾರತದ 21 ದಿನಗಳ ಲಾಕ್ ಡೌನ್ ಕೊವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟಕ್ಕೆ ಸಮಗ್ರ, ದಿಟ್ಟ ಕ್ರಮ ಎಂದು ಶ್ಲಾಘಿಸಿದೆ. ಕೊರೋನಾ ಸೋಂಕಿನ ವಿರುದ್ಧ ಭಾರತ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಲಿ ಎಂದು ಹೇಳಿದೆ.

500 ಸಾವು, 50 ಸಾವಿರ ಸೋಂಕು ಪೀಡಿತರು: ಚೀನಾ, ಇಟಲಿ ಬಳಿಕ ಕೊರೋನಾಗೆ ಕೇಂದ್ರ ಸ್ಥಾನವಾದ ಅಮೆರಿಕ
ವಿಶ್ವದ ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರ ಎಂಬ ಖ್ಯಾತಿಗಳಿಸಿರುವ ದೊಡ್ಡಣ್ಣ ಅಮೆರಿಕ ಅಕ್ಷರಶಃ ಒಂದು ವೈರಸ್ ಮುಂದೆ ಮಂಡಿಯೂರಿದ್ದು, ವಿಶ್ವಾದ್ಯಂತ ಸಾವಿನ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಅನ್ನು ನಿಯಂತ್ರಿಸಲಾಗದೇ ಪರದಾಡುತ್ತಿದೆ.

ಕರ್ನಾಟಕ ಲಾಕ್ ಡೌನ್:ಕೆಲವು ಕಡೆಗಳಲ್ಲಿ ನಿರ್ಬಂಧ ಉಲ್ಲಂಘಿಸಿ ರಸ್ತೆಗಿಳಿದ ಜನರು, ಪೊಲೀಸರಿಂದ ಲಾಠಿಚಾರ್ಜ್
ಕೊರೋನಾ ವೈರಸ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದರೂ ಕೂಡ ಕೆಲವರು ರಸ್ತೆಗಿಳಿದು ಓಡಾಡುತ್ತಿರುವುದು ಕಂಡುಬರುತ್ತಿದೆ.

ಯುಗಾದಿ ಶುಭದಿನ, ಜೀವನದ ಜೊತೆ ಜೂಜಾಟ ಆಡಬೇಡಿ:ಸರ್ಕಾರ, ಪೊಲೀಸರಿಂದ ಮನವಿ

ಕೋವಿಡ್-19 ತಡೆಗಟ್ಟಲು ರಾಜ್ಯದ ಕೈದಿಗಳಿಂದ ದಿನಕ್ಕೆ 5,000 ಮಾಸ್ಕ್ ಉತ್ಪಾದನೆ!
ರಾಜ್ಯದ ವಿವಿಧ ಜೈಲುಗಳಲ್ಲಿರುವ ಕೈದಿಗಳು ದಿನಕ್ಕೆ ಸುಮಾರು 5,000 ಮುಖಗವಸುಗಳನ್ನು ಉತ್ಪಾದಿಸಲಿದ್ದು, ಕೊರೊನವೈರಸ್ ಹರಡುವಿಕೆ ತಡೆಗಾಗಿ ಸದ್ಯ, ಎದುರಿಸುತ್ತಿರುವ ಕೊರತೆಯನ್ನು ನೀಗಿಸಲು ರಾಜ್ಯ ಸರ್ಕಾರಕ್ಕೆ ಸಹಾಯ ಮಾಡಲಿದ್ದಾರೆ.

ಕೋವಿಡ್-19 ಉಸ್ತುವಾರಿ ಶ್ರೀರಾಮುಲು ಬದಲಿಗೆ ಸುಧಾಕರ್ಗೆ!
ಲಾಕ್ ಡೌನ್ ನಡುವೆಯೂ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೆ ಇದ್ದು ಸೋಂಕು ಹರಡುವಿಕೆ ಹಾಗೂ ನಿಯಂತ್ರಿಸುವ ಉದ್ದೇಶದಿಂದ ಕೋವಿಡ್ 19 ಉಸ್ತುವಾರಿಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರಿಗೆ ವಹಿಸಲಾಗಿದೆ.

ಕೊರೋನಾ ಅಧಿಕೇಂದ್ರಗಳಿಗೆ ವಿಧಿಸಲಾಗಿದ್ದ ನಿರ್ಬಂಧ ತೆರವುಗೊಳಿಸಲಿರುವ ಚೀನಾ
ಕೊರೋನಾ ವೈರಸ್ ಸೋಂಕು ಪ್ರಾರಂಭವಾಗಿದ ಹುಬೇ ಪ್ರಾಂತ್ಯದಲ್ಲಿ ವಿಧಿಸಲಾಗಿದ್ದ ಸಂಚಾರ ನಿರ್ಬಂಧವನ್ನು ಹಿಂಪಡೆಯುವುದಾಗಿ ಚೀನಾ ಹೇಳಿದೆ.

ಕೋರಾನಾ ವೈರಸ್: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 39ಕ್ಕೆ ಏರಿಕೆ
ರಾಜ್ಯದಲ್ಲಿ ಮಹಾಮಾರಿ ಕೋರಾನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸೋಂಕು ದೃಢಪಟ್ಟವರ ಸಂಖ್ಯೆ 39ಕ್ಕೆ ಏರಿದೆ.

ವೈದ್ಯರು, ಪತ್ರಕರ್ತರು ಸೇರಿದಂತೆ ತುರ್ತು ಸಿಬ್ಬಂದಿಗೆ ಪೊಲೀಸರು ಅಡ್ಡಪಡಿಸಿದರೆ 100ಕ್ಕೆ ಕರೆ ಮಾಡಿ: ಪೊಲೀಸ್ ಆಯುಕ್ತ ಭಾಸ್ಕರ್ ರಾವ್
ಲಾಕ್ ಡೌನ್ ಹಿನ್ನೆಲೆಯಲ್ಲಿ ಒಂದು ವೇಳೆ ತುರ್ತು ಸೇವೆ ಸಲ್ಲಿಸುವ ಸಿಬ್ಬಂದಿಗೆ ಪೊಲೀಸರು ಅಡ್ಡಿಪಡಿಸಿದರೆ ದೂರವಾಣಿ ಸಂಖ್ಯೆ 100ಕ್ಕೆ ಕರೆ ಮಾಡಿ ಮಾಹಿತಿ ನೀಡಿ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

