Corona Virus

ಕೊರೋನಾ ವೈರಸ್ ಲಾಕ್ ಡೌನ್: ಬಡವರಿಗಾಗಿ ಕೇಂದ್ರ ಸರ್ಕಾರ 1.7 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ
ಮಾರಕ ಕೊರೋನಾ ವೈರಸ್ ಪ್ರಸರಣ ತಡೆಗೆ ದೇಶದಲ್ಲಿ ಹೇರಲಾಗಿರುವ ಲಾಕ್ ಡೌನ್ ಹಿನ್ನಲೆಯಲ್ಲಿ ದೇಶದ ನಾಗರಿಕರಿಗೆ ಕೇಂದ್ರ ಸರ್ಕಾರ 1.7 ಲಕ್ಷ ಕೋಟಿ ರೂ ಮೌಲ್ಯದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಲಾಕ್ ಡೌನ್ ನಿಂದಲೇ ಕೊರೋನಾ ವೈರಸ್ ತಡೆ ಅಸಾಧ್ಯ; ಸೋಂಕಿತರನ್ನು, ಸಂಪರ್ಕಿತರನ್ನು ಹುಡುಕಿ ಕ್ವಾರಂಟೈನ್ ಮಾಡಿ ಚಿಕಿತ್ಸೆ ಕೊಡಬೇಕು: ವಿಶ್ವ ಆರೋಗ್ಯ ಸಂಸ್ಥೆ
ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಹೇರಲಾಗಿರುವ ಲಾಕ್ ಡೌನ್ ಉತ್ತಮವೇ ಆದರೂ, ಲಾಕ್ ಡೌನ್ ನಿಂದ ಮಾತ್ರ ವೈರಸ್ ತಡೆ ಸಾಧ್ಯವಿಲ್ಲ. ಇದಕ್ಕಾಗಿ ಇನ್ನೂ ಕಠಿಣ ಮತ್ತು ಮತ್ತಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ.

ಚಾಲಕರಿಗೆ ಹಣಕಾಸು ಸಂಸ್ಥೆಗಳಿಂದ ಕಿರುಕುಳವಾಗದಂತೆ ಪ್ರಧಾನಿ ಮೋದಿ ನೋಡಿಕೊಳ್ಳಬೇಕು: ಗಂಡಸಿ ಸದಾನಂದ ಸ್ವಾಮಿ
ದೇಶಾದ್ಯಂತ ತೀವ್ರ ಆತಂಕ ಸೃಷ್ಟಿಸಿರುವ ಕೊರೋನಾ ವೈರಸ್ ಮಹಾಮಾರಿ ನಿಯಂತ್ರಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ಏಕಾಏಕಿ ಘೋಷಿಸಿರುವ 21 ದಿನಗಳ ಲಾಕ್ ಡೌನ್ ನಿಂದಾಗಿ ಚಾಲಕರು ಮತ್ತವರ ಕುಟುಂಬ ದಿಘ್ಭ್ರಮೆಗೊಳಗಾಗಿದ್ದು, ಮುಂದೇನು ಎನ್ನುವ ಆತಂಕದಲ್ಲಿದೆ ಎಂದು ರಾಷ್ಟ್ರೀಯ ಚಾಲಕರ ಒಕ್ಕೂಟದ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಹೇಳಿದ್ದಾರೆ.

ತಮಿಳುನಾಡಿನಲ್ಲಿ ಕೊರೊನವೈರಸ್ ರೋಗಲಕ್ಷಣವಿದ್ದ ವ್ಯಕ್ತಿ ಸಾವು
ಕೊರೋನವೈರಸ್ ರೋಗಲಕ್ಷಣಗಳೊಂದಿಗೆ ಆಸರಿಪಲ್ಲಂನ ಕನ್ಯಾಕುಮಾರಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ (ಕೆಜಿಎಂಸಿಎಚ್) ಪ್ರತ್ಯೇಕ ವಾರ್ಡ್ಗೆ ದಾಖಲಾಗಿದ್ದ 40 ವರ್ಷದ ವ್ಯಕ್ತಿ ಗುರುವಾರ ಮೃತಪಟ್ಟಿದ್ದಾನೆ.

ಕೊರೋನಾ ವೈರಸ್ ಹಿನ್ನಲೆಯಲ್ಲಿ ಲಾಕ್ ಡೌನ್: ಅಗತ್ಯ ಸೇವೆಗೆ ಮಾತ್ರ ಬಿಎಂಟಿಸಿ: ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ
ಇಂದಿನಿಂದ ಅಗತ್ಯ ಸೇವೆ ನೀಡುವವರಿಗಾಗಿ ಕೆಲವು ನಿರ್ದಿಷ್ಟ ಮಾರ್ಗಗಳಲ್ಲಿ ಬಿ.ಎಂ.ಟಿ.ಸಿ. ಬಸ್ಸುಗಳು ಕಾರ್ಯನಿರ್ವಹಿಸಲಿವೆ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಕೊರೋನಾ ವೈರಸ್: ಎಚ್ಡಿ, ಅಲ್ಟ್ರಾ-ಎಚ್ಡಿ ಸ್ಟ್ರೀಮಿಂಗ್ ಸೇವೆಗಳು ಏಪ್ರಿಲ್ 14 ರವರೆಗೆ ಸ್ಥಗಿತ
21 ದಿನಗಳ ಕಾಲ ದೇಶದ ಜನತೆ ಮನೆಯೊಳಗೆ ಇರಬೇಕೆಂದು ಪ್ರದಾನಿ ನರೇಂದ್ರ ಮೋದಿ ಸೂಚಿಸಿರುವ ಹಿನ್ನೆಲೆಯಲ್ಲಿ ಇಂಟರ್ ನೆಟ್ ಸೇವೋ ಸುಗಮವಾಗಬೇಕೆಂಬ ದೃಷ್ಟಿಯಿಂದ ಎಲ್ಲಾ ಎಚ್.ಡಿ ಮತ್ತು ಅಲ್ಟ್ರಾ ಎಚ್ ಡಿ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಎಸ್ಎಸ್ಎಲ್ಸಿ ಪರೀಕ್ಷೆ ರದ್ದಾಗಿಲ್ಲ, ಮುಂದೂಡಲಾಗಿದೆ: ಸುರೇಶ್ ಕುಮಾರ್ ಸ್ಪಷ್ಟನೆ
ಎಸ್ಎಸ್ಎಲ್ಸಿ ಪರೀಕ್ಷೆ ರದ್ದಾಗಿಲ್ಲ, ಮುಂದೂಡಲಾಗಿದೆಯಷ್ಟೇ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

ಕೊರೋನಾ ವೈರಸ್: ಲಾಕ್ ಡೌನ್ ನಿಂದಾಗಿ ನಿತ್ಯ ಜೀವನ ಅಸ್ತವ್ಯವಸ್ಥ ಆಗಿದೆ, ಕ್ಷಮೆ ಇರಲಿ: ಸಚಿವ ಸುಧಾಕರ್
ನಮಸ್ತೇ ಕರ್ನಾಟಕ! ಇಂದು ಎರಡನೇ ದಿವಸದ ಕರ್ಫ್ಯೂ. ಜೀವನ ಬೇಕು ಆದರೆ ಜೀವ ಅದಕ್ಕಿಂತ ಮುಖ್ಯ. ನಿತ್ಯ ಜೀವನ ಅಸ್ತವ್ಯವಸ್ಥೆ ಆಗಿದೆ. ಕ್ಷಮೆ ಇರಲಿ ಇದು ನಿಮ್ಮ ಕ್ಷೇಮಕ್ಕಾಗಿ, ಧನ್ಯವಾದಗಳು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮೂಲಕ ನಾಡಿನ ಜನರ ಕ್ಷಮೆಯಾಚನೆ ಮಾಡಿದ್ದಾರೆ.

ಲಾಕ್ ಡೌನ್ ವೇಳೆ ಬೈಕ್ ತಡೆದಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದಾತನ ಕಾಲಿಗೆ ಗುಂಡೇಟು
ದೇಶಾದ್ಯಂತ ಲಾಕ್ಡೌನ್ ಸಂದರ್ಭದಲ್ಲಿ ಬುಧವಾರ ಪೊಲೀಸ್ ಪೇದೆಗೆ ಹಲ್ಲೆ ನಡೆಸಿ ಪೊಲೀಸ್ ವಶದಲ್ಲಿರುವ ಆರೋಪಿ ತಾಜುದ್ದೀನ್ ಎಂಬಾತನ ಕಾಲಿಗೆ ಪೊಲೀಸರು ಗುರುವಾರ ಬೆಳಗ್ಗೆ ಗುಂಡು ಹೊಡೆದಿದ್ದಾರೆ.

