Corona Vaccine

ನಿರ್ಗತಿಕರಿಗೆ ಕೊರೊನಾ ಲಸಿಕೆ ಹಂಚಿಕೆ ಕಾರ್ಯಕ್ರಮ: ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಫಲಶ್ರುತಿ
ಹಲವು ಮಂದಿ ನಿರ್ಗತಿಕರು ನಿರಾಶ್ರಿತ ಶಿಬಿರಗಳಲ್ಲಿ, ನಿರ್ಗತಿಕರಿಗಾಗಿ ಮೀಸಲಿರುವ ಕ್ಯಾಂಪುಗಳಲ್ಲಿ ಆಶ್ರಯ ಪಡೆದರು. ಇವರಲ್ಲಿ ಅನೇಕ ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿರಲಿಲ್ಲವಾದ್ದರಿಂದ ಕೊರೊನಾ ಹರಡುವ ಭೀತಿ ಎದುರಾಗಿತ್ತು. ಇದನ್ನು ಮನಗಂಡ ಇಂಡಿಯನ್ ಎಕ್ಸ್ ಪ್ರೆಸ್ ಸಂಸ್ಥೆ ಈ ಬಗ್ಗೆ ಸುದ್ದಿಯನ್ನು ಪ್ರಕಟಿಸಿತ್ತು.

ನೇಪಾಳಕ್ಕೆ 20 ಲಕ್ಷ ಡೋಸ್ ಕೊರೊನಾ ಲಸಿಕೆ ನೀಡಲಿರುವ ಚೀನಾ
ಕಳೆದ ತಿಂಗಳು ಚೀನಾ ಗಡಿ ಬಿಕ್ಕಟ್ಟಿನ ಕುರಿತು ಪರಾಮರ್ಶೆ ನಡೆಸಲು ನೇಪಾಳ ಸರ್ಕಾರ ಪ್ರತ್ಯೇಕ ಸಮಿತಿಯನ್ನು ರಚಿಸಿತ್ತು

ದುಷ್ಟ ಚೀನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಲು ವಿಯೆಟ್ನಾಂಗೆ ಅಮೆರಿಕ ಕರೆ
ಒಂದೊಮ್ಮೆ ವಿಯೆಟ್ನಾಂನಲ್ಲಿ ರಣ ಭೀಕರವಾಗಿ ಕಾದಾಡಿದ್ದ ಅಮೆರಿಕ ಈಗ ಚೀನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸುವಂತೆ ವಿಯೆಟ್ನಾಂಅನ್ನು ಕೋರಿದೆ. ಇದೇ ವೇಳೆ ಅಮೆರಿಕ ವಿಯೆಟ್ನಾಂಗೆ ಹೆಚ್ಚುವರಿ 10 ಲಕ್ಷ ಕೊರೊನಾ ಲಸಿಕೆಯನ್ನು ದೇಣಿಗೆಯಾಗಿ ನೀಡುವುದಾಗಿ ಕಮಲಾ ಹ್ಯಾರಿಸ್ ಘೋಷಿಸಿದ್ದಾರೆ.

ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಬಳಿ ಇನ್ನೂ 2.18 ಕೋಟಿ ಡೋಸ್ ಕೋವಿಡ್ ಲಸಿಕೆ ಇದೆ: ಕೇಂದ್ರ ಸರ್ಕಾರ
ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ 2.18 ಕೋಟಿಗೂ ಹೆಚ್ಚು ಡೋಸ್ ಕೋವಿಡ್-19 ಲಸಿಕೆಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಕೊರೋನಾ ವಿರುದ್ಧ ಕೋವಿಶೀಲ್ಡ್ ಶೇ.93ರಷ್ಟು ರಕ್ಷಣೆ; ಶೇ.98ರಷ್ಟು ಮರಣ ಕಡಿತ: ಎಎಫ್ಎಂಸಿ ಅಧ್ಯಯನ
ಕೋವಿಶೀಲ್ಡ್ ಕೋವಿಡ್ -19 ರ ವಿರುದ್ಧ ಶೇಖಡ 93ರಷ್ಟು ರಕ್ಷಣೆ ನೀಡುತ್ತದೆ. ಅಲ್ಲದೆ ಶೇ 98 ರಷ್ಟು ಮರಣ ಪ್ರಮಾಣ ಕಡಿತವಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಕೋವಿಡ್-19: ವಿದೇಶಿ ಲಸಿಕೆಗಳಿಗೆ ಅನುಮತಿ ಪ್ರಕ್ರಿಯೆ ಮತ್ತಷ್ಟು ಸಡಿಲಗೊಳಿಸಿದ ಡಿಸಿಜಿಐ
ಭಾರತದಲ್ಲಿ ಲಸಿಕೆ ಅಭಿಯಾನಕ್ಕೆ ವೇಗ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿರಿಸಿದ್ದು, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI)ವಿದೇಶಿ ಲಸಿಕೆಗಳಿಗೆ ಅನುಮತಿ ನೀಡುವ ಪ್ರಕ್ರಿಯೆಯನ್ನು ಮತ್ತಷ್ಟು ಸಡಿಲಗೊಳಿಸಿದೆ.

ಕೊರೋನಾ ಲಸಿಕೆ ಖರೀದಿಗೆ ಜಾಗತಿಕ ಟೆಂಡರ್: ಮುಖ್ಯಮಂತ್ರಿ ಯಡಿಯೂರಪ್ಪ
ರಾಜ್ಯದಲ್ಲಿರುವ ಕೊರೋನಾ ಲಸಿಕೆ ಕೊರತೆ ಸದ್ಯದಲ್ಲಿಯೇ ಬಗೆಹರಿಯುವ ವಿಶ್ವಾಸವನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವ್ಯಕ್ತಪಡಿಸಿದ್ದಾರೆ.

ಕದ್ದ ಲಸಿಕೆಯನ್ನು ವಾಪಸ್ ತಂದಿಟ್ಟು ಕ್ಷಮೆ ಕೋರಿದ ಕಳ್ಳರು: ಚೋರರಲ್ಲೂ ಕರುಣೆ ಹುಟ್ಟಿಸಿದ ಕೊರೋನಾ!
ಕಳ್ಳತನ ಮಾಡಿದ್ದ ಬಾಕ್ಸ್ನಲ್ಲಿ ಕೊರೋನಾ ವ್ಯಾಕ್ಸಿನ್ ಇದ್ದಿದ್ದನ್ನು ಕಂಡ ಕಳ್ಳರು ಬಾಕ್ಸನ್ನು ಪೊಲೀಸ್ ಠಾಣೆಯ ಬಳಿ ಬಿಟ್ಟು ಹೋಗಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.

ಶಿವಮೊಗ್ಗದಲ್ಲಿ ನಾಲ್ಕು ಕೊರೋನಾ ಲಸಿಕಾ ಸಂಗ್ರಹ ಕೇಂದ್ರ ಸ್ಥಾಪನೆ
ಕೊರೋನಾ ಲಸಿಕೆ ತಯಾರಾದ ನಂತರ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ.

