ದೇಶ

ನಿರ್ಗತಿಕರಿಗೆ ಕೊರೊನಾ ಲಸಿಕೆ ಹಂಚಿಕೆ ಕಾರ್ಯಕ್ರಮ: ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಫಲಶ್ರುತಿ

ಹಲವು ಮಂದಿ ನಿರ್ಗತಿಕರು ನಿರಾಶ್ರಿತ ಶಿಬಿರಗಳಲ್ಲಿ, ನಿರ್ಗತಿಕರಿಗಾಗಿ ಮೀಸಲಿರುವ ಕ್ಯಾಂಪುಗಳಲ್ಲಿ ಆಶ್ರಯ ಪಡೆದರು. ಇವರಲ್ಲಿ ಅನೇಕ ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿರಲಿಲ್ಲವಾದ್ದರಿಂದ ಕೊರೊನಾ ಹರಡುವ ಭೀತಿ ಎದುರಾಗಿತ್ತು. ಇದನ್ನು ಮನಗಂಡ ಇಂಡಿಯನ್ ಎಕ್ಸ್ ಪ್ರೆಸ್ ಸಂಸ್ಥೆ ಈ ಬಗ್ಗೆ ಸುದ್ದಿಯನ್ನು ಪ್ರಕಟಿಸಿತ್ತು.

ನಿರ್ಗತಿಕರಿಗೆ ಕೊರೊನಾ ಲಸಿಕೆ ಹಂಚಿಕೆ ಕಾರ್ಯಕ್ರಮ: ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಫಲಶ್ರುತಿ
ನಿರ್ಗತಿಕ ವ್ಯಕ್ತಿಗೆ ಕೊರೊನಾ ಲಸಿಕೆ ನೀಡುತ್ತಿರುವ ವೈದ್ಯೆ
Published On :

ತಿರುಚ್ಚಿ: ಕಳೆದ ಹಲವು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೇರಳ ರಾಜ್ಯಾದ್ಯಂತ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಭಾರೀ ಮಳೆಯಿಂದಾಗಿ ನಿರ್ಗತಿಕರು ವಸತಿ ಇಲ್ಲದೆ ನರಳುವಂತಾಗಿತ್ತು. 

ಹಲವು ಮಂದಿ ನಿರ್ಗತಿಕರು ನಿರಾಶ್ರಿತ ಶಿಬಿರಗಳಲ್ಲಿ, ನಿರ್ಗತಿಕರಿಗಾಗಿ ಮೀಸಲಿರುವ ಕ್ಯಾಂಪುಗಳಲ್ಲಿ ಆಶ್ರಯ ಪಡೆದರು. ನಗರದಾದ್ಯಂತ ಹರಡಿಕೊಂಡಿದ್ದ ಅನೇಕ ನಿರ್ಗತಿಕರು ಒಂದೇ ಸೂರಿನಡಿ ಆಶ್ರಯ ಪಡೆಯುವಂತಾಯಿತು.

ಇವರಲ್ಲಿ ಅನೇಕ ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿರಲಿಲ್ಲವಾದ್ದರಿಂದ ಕೊರೊನಾ ಹರಡುವ ಭೀತಿ ಎದುರಾಗಿತ್ತು. ಇದನ್ನು ಮನಗಂಡ ಇಂಡಿಯನ್ ಎಕ್ಸ್ ಪ್ರೆಸ್ ಸಂಸ್ಥೆ ಈ ಬಗ್ಗೆ ಸುದ್ದಿಯನ್ನು ಪ್ರಕಟಿಸಿತ್ತು. ಇದೀಗ ತಿರುಚ್ಚಿಯಲ್ಲಿನ ನಿರ್ಗತಿಕ ಶಿಬಿರಗಳಲ್ಲಿನ ಮಂದಿಗೆ ಉಚಿತ ಕೊರೊನಾ ಲಸಿಕೆ ನೂಡುವ ಕಾರ್ಯಕ್ರಮವನ್ನು ನಗರಾಡಳಿತ ಹಮ್ಮಿಕೊಂಡಿದೆ. 

ನಗರಾಡಳಿತ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ನಿರ್ಗತಿಕರು, ಭಿಕ್ಷುಕರು ನಗರಪ್ರದೇಶದಾದ್ಯಂತ ತಿರುಗಾಡುವುದರಿಂದ ಅವರಲ್ಲಿ ಒಬ್ಬರಿಗೆ ಕೊರೊನಾ ತಗುಲಿದರೂ ವ್ಯಾಪಕವಾಗಿ ಹರಡುವ ಸಾಧ್ಯತೆ ಹೆಚ್ಚು ಎಂದು ನಿವಾಸಿಗಳು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಎರಡು ಬಾರಿ ಲಸಿಕೆ ನೀಡುವ ಬಗ್ಗೆಯೂ ಮುತುವರ್ಜಿ ವಹಿಸಬೇಕಾಗಿ ಅವರು ಕೋರಿಕೊಂಡಿದ್ದಾರೆ.

Related Article

ಕೊರೊನಾ ಪೂರ್ವ ಕಾಲಕ್ಕೆ ಮರಳಿದ ಜಾಗತಿಕ ಮಾಲಿನ್ಯ ಪ್ರಮಾಣ: ಚೀನಾ ಪಾಲು ಹೆಚ್ಚು!

ನೇಪಾಳಕ್ಕೆ 20 ಲಕ್ಷ ಡೋಸ್ ಕೊರೊನಾ ಲಸಿಕೆ ನೀಡಲಿರುವ ಚೀನಾ

ರಾಜ್ಯದಲ್ಲಿ ಆತ್ಮಹತ್ಯೆ ಪ್ರಮಾಣ ಹೆಚ್ಚಳ: ಕೊರೊನಾ ಹಿನ್ನೆಲೆಯ ಬಡತನ ಮತ್ತು ನಿರುದ್ಯೋಗ ಕಾರಣ

ಕೊರೊನಾ ಮಾರ್ಗಸೂಚಿ ಸಡಿಲಿಕೆ, ಪಾನಮತ್ತರಾಗಿ ಬೀದಿಗಳಲ್ಲಿ ಸಂಭ್ರಮಾಚರಣೆಗಿಳಿದ ನಾಗರಿಕರಿಂದ ಗೂಂಡಾ ಪ್ರವೃತ್ತಿ: ಹಲವೆಡೆ ಗುಂಪು ಘರ್ಷಣೆ

ಕೊರೊನಾ ಎಫೆಕ್ಟ್: ಎಂಜಿನಿಯರಿಂಗ್ ಪದವಿಯಲ್ಲಿ ಬಯಾಲಜಿ ಸೇರ್ಪಡೆ; ವಿಟಿಯು ಮಹತ್ವದ ನಿರ್ಧಾರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.