ಕೋವಿಡ್-19: ವಿದೇಶಿ ಲಸಿಕೆಗಳಿಗೆ ಅನುಮತಿ ಪ್ರಕ್ರಿಯೆ ಮತ್ತಷ್ಟು ಸಡಿಲಗೊಳಿಸಿದ ಡಿಸಿಜಿಐ
ಭಾರತದಲ್ಲಿ ಲಸಿಕೆ ಅಭಿಯಾನಕ್ಕೆ ವೇಗ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿರಿಸಿದ್ದು, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI)ವಿದೇಶಿ ಲಸಿಕೆಗಳಿಗೆ ಅನುಮತಿ ನೀಡುವ ಪ್ರಕ್ರಿಯೆಯನ್ನು ಮತ್ತಷ್ಟು ಸಡಿಲಗೊಳಿಸಿದೆ.

ನವದೆಹಲಿ: ಭಾರತದಲ್ಲಿ ಲಸಿಕೆ ಅಭಿಯಾನಕ್ಕೆ ವೇಗ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿರಿಸಿದ್ದು, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI)ವಿದೇಶಿ ಲಸಿಕೆಗಳಿಗೆ ಅನುಮತಿ ನೀಡುವ ಪ್ರಕ್ರಿಯೆಯನ್ನು ಮತ್ತಷ್ಟು ಸಡಿಲಗೊಳಿಸಿದೆ.
ಹೌದು.. ವಿದೇಶಿ ಲಸಿಕೆಗಳಿಗೆ ಅನುಮತಿ ನೀಡುವ ಪ್ರಕ್ರಿಯೆಯನ್ನು ಮತ್ತಷ್ಟು ಸಡಿಲಗೊಳಿಸಿದ್ದು, ವಿದೇಶಗಳು ತಯಾರಿಸಿದ ಕೋವಿಡ್ ಲಸಿಕೆಗಳ ಪ್ರತಿ ಬ್ಯಾಚ್ ಅನ್ನು ಕಸೌಲಿಯ ಕೇಂದ್ರ ಔಷಧ ಪ್ರಯೋಗಾಲಯದಲ್ಲಿ ಪರೀಕ್ಷಿಸುವ ಮತ್ತು ಅವುಗಳ ಬಿಡುಗಡೆಗೂ ಮುನ್ನ ನಡೆಸಬೇಕಿದ್ದ ಪ್ರಯೋಗಗಳಿಗೆ ಭಾರತೀಯ ಪ್ರಧಾನ ಔಷಧ ನಿಯಂತ್ರಕ (ಡಿಸಿಜಿಐ) ಸಂಸ್ಥೆ ವಿನಾಯಿತಿ ನೀಡಿದೆ. ಇದು ದೇಶದಲ್ಲಿ ಲಸಿಕೆಗಳ ಲಭ್ಯತೆಯ ಪ್ರಮಾಣವನ್ನು ಹೆಚ್ಚಿಸಲು ನೆರವಾಗಲಿದೆ ಎಂದು ಹೇಳಲಾಗಿದೆ.
ವಿದೇಶಿ ಲಸಿಕೆಗಳನ್ನು ಪೂರೈಸುವ ಮಾತುಕತೆ ವೇಳೆ ಫೈಜರ್ ಮತ್ತು ಸಿಪ್ಲಾ ಕಂಪನಿಗಳು ಈ ಕುರಿತು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದವು. ಈ ಹಿನ್ನೆಲೆಯಲ್ಲಿ ಡಿಸಿಜಿಐ ಈ ನಿರ್ಧಾರ ಪ್ರಕಟಿಸಿದ್ದು, 'ದೇಶದಲ್ಲಿ ಕೋವಿಡ್ ವ್ಯಾಪಕವಾಗಿ ಪಸರಿಸುತ್ತಿದೆ. ಈ ಸಂದರ್ಭದಲ್ಲಿ ಭಾರಿ ಪ್ರಮಾಣದಲ್ಲಿ ಲಸಿಕೆಗಳ ಅವಶ್ಯಕತೆಗಳಿರುವ ಕಾರಣ ಆಮದು ಮಾಡಿಕೊಳ್ಳುವ ಲಸಿಕೆಗಳಿಗೆ ಈ ವಿನಾಯಿತಿ ನೀಡಲಾಗಿದೆ ಎಂದು ಡಿಸಿಜಿಐ ಹೇಳಿದೆ. ಈ ಹಿಂದೆ ದೇಶೀಯ ಲಸಿಕೆಗಳಾದ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳು ಕೂಡ ಕೊರೊನಾ ಸೋಂಕಿನ ವಿರುದ್ಧ ತುರ್ತು ಬಳಕೆಗೆ ಸ್ಥಳೀಯವಾಗಿ ಹಲವು ಹಂತದ ಪರೀಕ್ಷೆಗಳಿಗೆ ಒಳಪಟ್ಟಿದ್ದವು.
'ತುರ್ತು ಸ್ಥಿತಿ ಸಂದರ್ಭದಲ್ಲಿ ನಿರ್ಬಂಧಿತ ಬಳಕೆಗಾಗಿ ಭಾರತದಲ್ಲಿ ಕೋವಿಡ್ ಲಸಿಕೆಗಳನ್ನು ಅನುಮೋದಿಸಲಾಗಿದೆ. ಇದೇ ರೀತಿ ಈಗಾಗಲೇ ಅಮೆರಿಕದ ಎಫ್‌ಡಿಎ, ಇಎಂಎ, ಯುಕೆ ಎಂಎಚ್‌ಆರ್‌ಎ, ಪಿಎಂಆರ್‌ಡಿ ಜಪಾನ್‌ನಲ್ಲಿ ನಿರ್ಬಂಧಿತ ಬಳಕೆಗೆ ಅನುಮೋದನೆ ದೊರೆತಿರುವ ಅಥವಾ ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಬಳಕೆ ಪಟ್ಟಿಯಲ್ಲಿ ಇರುವ ಲಸಿಕೆಗಳಿಗೆ ಈ ವಿನಾಯಿತಿ ನೀಡಲಾಗಿದೆ ಎಂದು ಡಿಸಿಜಿಐ ಸ್ಪಷ್ಟನೆ ನೀಡಿದೆ.
ಆದಾಗ್ಯೂ, ಅವರ ಸಾರಾಂಶ ಲಾಟ್ ಪ್ರೋಟೋಕಾಲ್ ಮತ್ತು ಬ್ಯಾಚ್ ಅಥವಾ ಲಾಟ್ ವಿಶ್ಲೇಷಣೆಯ ಪ್ರಮಾಣಪತ್ರದ ಪರಿಶೀಲನೆಯನ್ನು ಸಿಡಿಎಲ್, ಕಸೌಲಿ ಪ್ರಮಾಣಿತ ಕಾರ್ಯವಿಧಾನಗಳ ಪ್ರಕಾರ ಬಿಡುಗಡೆ ಮಾಡಲು ಮತ್ತು ಲಸಿಕೆ ಬಿಡುಗಡೆ ಮೊದಲು ಸುರಕ್ಷತಾ ಫಲಿತಾಂಶಗಳಿಗಾಗಿ ಮೊದಲ 100 ಫಲಾನುಭವಿಗಳ ಮೇಲೆ ಏಳು ದಿನಗಳವರೆಗೆ ಮೌಲ್ಯಮಾಪನದ ಅಗತ್ಯವನ್ನು ಕೈಗೊಳ್ಳಬೇಕು ಎಂದು ಡಿಸಿಜಿಐ ಜೂನ್ 1 ರಂದು ನೀಡಿದ ನೋಟಿಸ್‌ನಲ್ಲಿ ತಿಳಿಸಿದೆ.
Related Article
ಭಾರತದಲ್ಲಿ ಪತ್ತೆಯಾದ ಕೊರೋನಾ ವೈರಸ್ ತಳಿಗಳ ಪೈಕಿ ಡೆಲ್ಟಾ ಅಪಾಯಕಾರಿ: ವಿಶ್ವ ಆರೋಗ್ಯ ಸಂಸ್ಥೆ ಕಳವಳ
'ಕೊರೋನಾ ವೈರಸ್ ಗೆ ಮಾನವರಲ್ಲಿ ಹಬ್ಬುವ ಮಾರಣಾಂತಿಕ 'ಬಾಲ' ನೀಡಿದ್ದೇ ಚೀನಾ'..!
ಕೊರೋನಾ ವೈರಸ್ 2ನೇ ಅಲೆ ವೇಳೆ ದೆಹಲಿಯ 107 ವೈದ್ಯರು ಸೇರಿದಂತೆ ದೇಶದಲ್ಲಿ 594 ವೈದ್ಯರ ಸಾವು: ಏಮ್ಸ್
ಕೋವಿಶೀಲ್ಡ್ ಎರಡು ಡೋಸ್ ವ್ಯವಸ್ಥೆ ಮುಂದುವರಿಕೆ; ಯಾವುದೇ ಸಂದರ್ಭದಲ್ಲೂ ಲಸಿಕೆಗಳ ಮಿಶ್ರಣವಿಲ್ಲ: ವಿಕೆ ಪೌಲ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


