constitution

ಕಾಂಗ್ರೆಸ್ ಹಾಗೂ ಬಿಜೆಪಿಗೆ ಬೇರೆ ಬೇರೆ ಸಂವಿಧಾನವಿದೆಯೆ? ಸಿದ್ದರಾಮಯ್ಯಗೆ ಸಚಿವ ಈಶ್ವರಪ್ಪ ಪ್ರಶ್ನೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪ ಆಯುಕ್ತರೊಂದಿಗೆ ಸಭೆ ನಡೆಸಲು ಅನುಮತಿ ನೀಡದ ಕಾರಣ ಹಕ್ಕುಚ್ಯುತಿ ನಿರ್ಣಯ ಮಂಡಿಸಲು ತೀರ್ಮಾನಿಸಿದ ಬಗ್ಗೆ ಪ್ರತಿಕ್ರಯಿಸಿರುವ ಆರ್‌ಡಿಪಿಆರ್ ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ಮತ್ತು ಬಿಜೆಪಿಗೆ ಬೇರೆ ಬೇರೆ ಸಂವಿಧಾನಗಳಿದೆಯೆ ಎಂದು ಪ್ರಶ್ನಿಸಿದ್ದಾರೆ.

ಸಮಾಜ ತನ್ನ ಕರ್ತವ್ಯ ನಿಭಾಯಿಸಿದಾಗಲಷ್ಟೇ ಸಂವಿಧಾನದ ಹಕ್ಕುಗಳೂ ಸುರಕ್ಷಿತ: ಯೋಗಿ ಆದಿತ್ಯನಾಥ್
"ಸಮಾಜ ತನ್ನ ಮೂಲಭೂತ ಕರ್ತವ್ಯಗಳನ್ನು ಜಾಗೃತೆಯಿಂದ ನಿಭಾಯಿಸಿದಾಗಲಷ್ಟೇ ಭಾರತದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನ ನೀಡಿರುವ ಹಕ್ಕುಗಳು ಸುರಕ್ಷಿತವಾಗಿರಲು ಸಾಧ್ಯ" ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ವಿಧಾನಸಭಾ ಅಧಿವೇಶನ: ಸಂವಿಧಾನ ಕುರಿತು ಸದಸ್ಯರಿಂದ ವಿಸ್ತೃತ ಚರ್ಚೆ
ವಿಧಾನಸಭೆಯಲ್ಲಿಂದು ಸಂವಿಧಾನ ಕುರಿತು ವಿಶೇಷ ಕಲಾಪದಲ್ಲಿ ಬಹುತೇಕ ಸದಸ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಚುನಾಯಿತ ಪ್ರತಿನಿಧಿಗಳ ದ್ವಂದ್ವ; ಸಂವಿಧಾನದ ಆಶಯಗಳಿಗೆ ಪೆಟ್ಟು- ರಮೇಶ್ ಕುಮಾರ್
ಸಂವಿಧಾನದ ಆಶಯ, ಗುರಿ ನಿಜವಾದ ಅರ್ಥದಲ್ಲಿ ಜಾರಿಗೆ ಬಾರದೇ ಇರಲು ಚುನಾಯಿತ ಪ್ರತಿನಿಧಿಗಳಲ್ಲಿರುವ ದ್ವಂದ್ವ ನೀತಿಗಳೇ ಕಾರಣ ಎಂದು ಕಾಂಗ್ರೆಸ್ ಹಿರಿಯ ಸದಸ್ಯ ಹಾಗೂ ಮಾಜಿ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ

ಸಂವಿಧಾನ ರಚನೆಯ ಸಕಲ ಗೌರವವೂ ಡಾ. ಅಂಬೇಡ್ಕರ್ ಅವರೊಬ್ಬರಿಗೇ ಸಲ್ಲಬೇಕು: ವಿವಾದಕ್ಕೆ ತೆರೆ ಎಳೆದ ಯಡಿಯೂರಪ್ಪ
ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಒಬ್ಬರೇ ಸಂವಿಧಾನ ಕರಡು ಸಿದ್ಧಪಡಿಸಿದ್ದರು. ದಮನಿತರು, ತುಳಿತಕ್ಕೆ ಒಳಗಾದವರಿಗೆ ನೆರವಾಗಬೇಕು, ಅವರನ್ನು ಮೇಲೆತ್ತಬೇಕು ಎಂಬುದು ಅಂಬೇಡ್ಕರ್ ಅವರ ಉದ್ದೇಶವಾಗಿತ್ತು.

ಶಾಸಕರಿಗೆ ಸಂವಿಧಾನದ ಕನ್ನಡ ಪ್ರತಿ ಹಂಚಿಕೆ- ಬಿಎಸ್ ಯಡಿಯೂರಪ್ಪ
ಮಾರ್ಚ್ 2 ರಿಂದ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಮಾರ್ಚ್ 4 ಮತ್ತು 5 ರಂದು ಎಲ್ಲಾ ಶಾಸಕರಿಗೂ ಸಂವಿಧಾನದ ಬಗ್ಗೆ ಮಾತನಾಡಲು ಅವಕಾಶ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಪ್ರತಿಯೊಬ್ಬ ಶಾಸಕರಿಗೂ ಸಂವಿಧಾನದ ಕನ್ನಡ ಪ್ರತಿ ನೀಡುತ್ತೇವೆ: ಯಡಿಯೂರಪ್ಪ
ಈ ಬಾರಿಯ ಬಜೆಟ್ ವೇಳೆ ಸಂವಿಧಾನವನ್ನು ಅನುವಾದಿಸಿ ಕನ್ನಡಕ್ಕೆ ಮುದ್ರಿಸಿ ಎಲ್ಲ ಶಾಸಕರಿಗೂ ಓದಿ ಮಾತನಾಡಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಬಿ.ಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.

ವಿಧಾನಸಭೆಯಲ್ಲಿ ಮಾರ್ಚ್ 2 ಮತ್ತು 3 ರಂದು ಸಂವಿಧಾನ ಕುರಿತ ವಿಶೇಷ ಚರ್ಚೆಗೆ ಅವಕಾಶ- ಕಾಗೇರಿ
ರಾಜ್ಯ ವಿಧಾನಸಭೆಯಲ್ಲಿ ಮಾರ್ಚ್ 2 ಮತ್ತು 3 ರಂದು ಭಾರತ ಸಂವಿಧಾನದ ಆಶಯಗಳು, ಸ್ವರೂಪ ಹಾಗೂ ಸಾಕಾರ ಕುರಿತಂತೆ ಎರಡು ದಿನಗಳ ವಿಶೇಷ ಚರ್ಚೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ವಿಧಾನಸಭಾ ಸ್ಪೀಖರ್ ವಿಶ್ವೇಶರ ಹೆಗಡೆ ಕಾಗೇರಿ ಹೇಳಿದ್ದಾರೆ

ಸಂವಿಧಾನದ ಮೂಲಭೂತ ಅಂಶವನ್ನು ಬದಲಿಸಲು ಕೋರ್ಟ್ ಗೆ ಅನುಮತಿ ಇಲ್ಲ: ಮೀಸಲಾತಿ ಕುರಿತ ತೀರ್ಪಿಗೆ ಸಿದ್ದರಾಮಯ್ಯ
ಮೀಸಲಾತಿ ಮೂಲಭುತ ಹಕ್ಕಲ್ಲ ಎಂದಿರುವ ಸುಪ್ರೀಂ ಕೋರ್ಟ್ ಸಂವಿಧಾನದ ಆಶಯದ ವಿರುದ್ಧವಾಗಿ ತೀರ್ಪು ನೀಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

