Congress party

ಸಿಎಂ ಕಾನೂನು ಸಲಹೆಗಾರರಾಗಿ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ನೇಮಕ
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರರಾಗಿ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ನೇಮಕವಾಗಿದ್ದು, ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಮುಖ್ಯಕಾರ್ಯದರ್ಶಿಗೆ ಟಿಪ್ಪಣಿ ಬರೆದಿದ್ದಾರೆ.

ನನ್ನಿಂದ ಯಾರಿಗೂ ಭಯವಿಲ್ಲ, ನಾನು ಯಾರಿಗೂ ಭಯಪಡುವುದಿಲ್ಲ: ಯುಡಿಎಫ್ ನಾಯಕರ ಭೇಟಿ ಬಳಿಕ ಶಶಿ ತರೂರ್
ಕಾಂಗ್ರೆಸ್ ಸಂಸದ ಶಶಿ ತರೂರ್ ಮಲಬಾರ್ ಪ್ರವಾಸದಲ್ಲಿದ್ದು, ಯುಡಿಎಫ್- ಮಿತ್ರ ಪಕ್ಷ ಐಯುಎಂಎಲ್ ನಾಯಕರನ್ನು ಭೇಟಿ ಮಾಡಿದ್ದಾರೆ.

ಇಡೀ ಕಾಂಗ್ರೆಸ್ ಪಕ್ಷದ ನಾಯಕರು ಬೇಲ್ ಮೇಲೆ ಹೊರಗಿದ್ದಾರೆ, ಅಂಥವರು ನಮಗೆ ಭ್ರಷ್ಟಾಚಾರದ ನೈತಿಕ ಪಾಠ ಮಾಡುತ್ತಾರೆ: ಸಿಎಂ ಬೊಮ್ಮಾಯಿ
ರಾಜ್ಯದ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ನವರು ಮಾತನಾಡುತ್ತಾರೆ, ಪೇ ಸಿಎಂ ಅಭಿಯಾನ ಮಾಡಿದ್ದಾರೆ. ರಾಹುಲ್ ಗಾಂಧಿ, ಅವರ ರಾಷ್ಟ್ರೀಯ ಅಧ್ಯಕ್ಷರು ಸೋನಿಯಾ ಗಾಂಧಿಯವರು ಬೇಲ್ ಮೇಲೆ ಹೊರಗಿದ್ದಾರೆ. ಇಲ್ಲಿನ ಅಧ್ಯಕ್ಷರು ಕೂಡ ಬೇಲ್ ಮೇಲೆ ಹೊರಗಿದ್ದಾರೆ. ಇಂತಹವರಿಂದ ನಾವು ನೈತಿಕತೆಯ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

'ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಲು ರಾಹುಲ್ ಗಾಂಧಿ ಬಿಟ್ಟರೆ ಯಾರಿದ್ದಾರೆ ಹೇಳಿ, ನನಗೆ ಪರ್ಯಾಯ ನಾಯಕ ಕಾಣುತ್ತಿಲ್ಲ': ಮಲ್ಲಿಕಾರ್ಜುನ ಖರ್ಗೆ
ರಾಹುಲ್ ಗಾಂಧಿ ಅವರನ್ನು ಬಿಟ್ಟು ಬೇರೆ ಯಾರೂ ಕಾಂಗ್ರೆಸ್ ನಲ್ಲಿ ದೇಶ ಮಟ್ಟದಲ್ಲಿ ನಾಯಕನ ವರ್ಚಸ್ಸು, ಖ್ಯಾತಿ ಗಳಿಸಿರುವ ನಾಯಕ ಇಲ್ಲದ ಕಾರಣ ಅವರನ್ನು ಮತ್ತೆ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಲು ಮನವೊಲಿಸಲಾಗುವುದು ಎಂದು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

'ನನಗೆ ವ್ಯಕ್ತಿಪೂಜೆ ಮುಖ್ಯವಲ್ಲ, ಪಕ್ಷಪೂಜೆ ಮುಖ್ಯ': ಪರೋಕ್ಷವಾಗಿ ಸಿದ್ದರಾಮೋತ್ಸವಕ್ಕೆ ಡಿಕೆ ಶಿವಕುಮಾರ್ ಟಾಂಗ್?
ನಮಗೆ ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ ಎನ್ನುವ ಮೂಲಕ ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿಪಕ್ಷ ನಾಯಕ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ.

ಕಾಂಗ್ರೆಸ್ ಪಕ್ಷಕ್ಕೆ ನೂತನ ಸಾರಥಿಯ ನೇಮಕ 2022 ಸೆಪ್ಟೆಂಬರ್ ತಿಂಗಳಲ್ಲಿ: ಮಧುಸೂದನ್ ಮಿಸ್ತ್ರಿ
ಭಾರತೀಯ ಕಾಂಗ್ರೆಸ್ ಪಕ್ಷಕ್ಕೆ ನೂತನ ಅಧ್ಯಕ್ಷರ ನೇಮಕ ಮುಂದಿನ ವರ್ಷ 2022ರ ಸೆಪ್ಟೆಂಬರ್ ನಲ್ಲಿ ನಡೆಯಲಿದೆ. ಪಕ್ಷದಲ್ಲಿ ಚುನಾವಣೆ ನಡೆಸಲು ತಯಾರಿ ನಡೆಯುತ್ತಿದೆ ಎಂದು ಕಾಂಗ್ರೆಸ್ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಹೇಳಿದ್ದಾರೆ.

ಎಐಯುಡಿಎಫ್ ಜೊತೆಗಿನ ಮೈತ್ರಿ ಮುರಿದುಕೊಳ್ಳಲು ಕಾಂಗ್ರೆಸ್ ನಿರ್ಧಾರ
ಬಿಜೆಪಿ ಜೊತೆಗಿನ ಸಂಬಂಧ ಹಿನ್ನೆಲೆಯಲ್ಲಿ ಬದ್ರುದ್ದೀನ್ ಅಜ್ಮಲ್ ಅವರ ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಾಂಟ್ ಜೊತೆಗಿನ ಸಂಬಂಧವನ್ನು ಮುರಿದುಕೊಳ್ಳಲು ಅಸ್ಸಾಂ ಕಾಂಗ್ರೆಸ್ ನಿರ್ಧರಿಸಿದೆ.

'ಅಮರ್, ಅಕ್ಬರ್, ಆಂಟನಿ' ಎಂದು ಕರೆಸಿಕೊಳ್ಳುತ್ತಿದ್ದ ಕಾಂಗ್ರೆಸ್ ನ ಮೂವರು ನಾಯಕರು ಇವರು!
ಕೋವಿಡ್-19 ಮಹಾಮಾರಿಯಿಂದ 71 ವರ್ಷದ ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ನಿಧನ ಹೊಂದಿದ್ದಾರೆ. ಗಾಂಧಿ ಕುಟುಂಬದ ಬಲಗೈ ಬಂಟ, ನಿಷ್ಠಾವಂತ ಎಂದು ಕರೆಸಿಕೊಂಡಿದ್ದ ಅಹ್ಮದ್ ಪಟೇಲ್ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರ ಕಾಲದಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಪ್ರಮುಖ ಕಾರ್ಯತಂತ್ರರಾಗಿದ್ದರು.

'ಗಾಂಧಿ ಕುಟುಂಬದ ನಿಷ್ಠಾವಂತ, ಕಾಂಗ್ರೆಸ್ ಪಕ್ಷದಲ್ಲಿ ಜ್ಞಾನ, ಅನುಭವದ ಭಂಡಾರವಾಗಿದ್ದ ನಾಯಕ' ಅಹ್ಮದ್ ಪಟೇಲ್
ಅಹ್ಮದ್ ಪಟೇಲ್, ಕಾಂಗ್ರೆಸ್ ನಲ್ಲಿ ಬಹುಮುಖ್ಯ ವ್ಯಕ್ತಿ. ನೆಹರೂ-ಗಾಂಧಿ ಕುಟುಂಬದ ನಿಷ್ಠಾವಂತ ನಾಯಕ, ಬಹಳ ಪ್ರಭಾವಿ ವ್ಯಕ್ತಿ.

