CM Basavaraja Bommai

ಆಟಗಾರರನ್ನು ಯಾವ್ಯಾವ ಸಮಯದಲ್ಲಿ ತೆಗೆದುಕೊಳ್ಳಬೇಕೆಂಬುದು ಕ್ಯಾಪ್ಟನ್ ಗೆ ಬಿಟ್ಟ ವಿಚಾರ: ಎಸ್.ಎ. ರಾಮದಾಸ್
ಸಚಿವ ಸ್ಥಾನ ತಪ್ಪಿದ ಶಾಸಕರ ಸಿಎಂ ಬೊಮ್ಮಾಯಿ ಮನೆಗೆ ಪರೇಡ್ ಮುಂದುವರಿದಿದೆ. ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಬಳಿಕ ಮೈಸೂರು ಜಿಲ್ಲೆಯ ಶಾಸಕ ಎಸ್ ಎ ರಾಮದಾಸ್ ಭೇಟಿ ಕೊಟ್ಟಿದ್ದಾರೆ.

ಸಚಿವ ಸ್ಥಾನ ಸಿಗದಿದ್ದಕ್ಕೆ ಯಾವುದೇ ಅಸಮಾಧಾನ ಇಲ್ಲ; ಪಕ್ಷ ಸಂಘಟನೆ ಮಾಡುತ್ತೇನೆ: ಸಿ.ಪಿ. ಯೋಗೇಶ್ವರ್
ನೂತನ ಮುಖ್ಯಮಂತ್ರಿಗಳು ಸಚಿವ ಸಂಪುಟ ರಚನೆ ಮಾಡಿದ ನಂತರ ಎರಡು ಮೂರು ಸಾರಿ ಭೇಟಿ ಮಾಡಿದ್ದೇನೆ, ಮಾಧ್ಯಮಗಳ ಮುಂದೆ ಬಹಿರಂಗವಾಗಿರಲಿಲ್ಲ, ಇವತ್ತು ಕೂಡ ಭೇಟಿಯಾಗಿದ್ದೇನೆ. ಈ ಭೇಟಿಯಲ್ಲೇನು ವಿಶೇಷವಿಲ್ಲ ಎಂದು ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಹೇಳಿದ್ದಾರೆ.

ಕೊರೋನಾ 3ನೇ ಅಲೆ ನಿಯಂತ್ರಣ ಸಂಬಂಧ ಇಂದು ಸಿಎಂ ನೇತೃತ್ವದಲ್ಲಿ ಸಭೆ: ಬೆಂಗಳೂರಲ್ಲಿ ಜಾರಿಯಾಗುತ್ತಾ ವೀಕೆಂಡ್ ಲಾಕ್?
ಕೊರೋನಾ ಮೂರನೇ ಅಲೆ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಾಳೆ ಸ್ವಾತಂತ್ರ್ಯ ದಿನಾಚರಣೆ ಬಳಿಕ ಕಠಿಣ ನಿಯಮ ಜಾರಿಗೆ ತರುವ ಸಾಧ್ಯತೆ ಬಹುತೇಕ ನಿಚ್ಚಳ ಎಂದು ಹೇಳಲಾಗುತ್ತಿದೆ.

ಕೇರಳಿಗರ ಪ್ರತಿಭಟನೆ, ಆಕ್ರೋಶದ ಸುಳಿವು: ಸಿಎಂ ಬೊಮ್ಮಾಯಿ ತಲಪ್ಪಾಡಿ ಚೆಕ್ ಪೋಸ್ಟ್ ಭೇಟಿ ರದ್ದು!
ಕೋವಿಡ್ 3ನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೆರೆ ರಾಜ್ಯ ಕೇರಳದಿಂದ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಕರ್ನಾಟಕದೊಳಗೆ ಬರುವುದನ್ನು ತಡೆಯಲು ತಲಪಾಡಿ ಚೆಕ್ ಪೋಸ್ಟ್ ಬಳಿ ಕಟ್ಟುನಿಟ್ಟಿನ ತಪಾಸಣೆ ಕ್ರಮವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಇದು ಸಹಜವಾಗಿ ಕೇರಳಿಗರನ್ನು ಕೆರಳಿಸಿದೆ.

ಆಸ್ಪತ್ರೆಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ: ಬೊಮ್ಮಾಯಿ ಖಡಕ್ ಸೂಚನೆ
ಗ್ರಾಮೀಣ ಪ್ರದೇಶಗಳಿಗೆ ತಾರತಮ್ಯವಿಲ್ಲದ ಮತ್ತು ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕು ವಿಶೇಷವಾಗಿ ಸೋರಿಕೆ ತಡೆಗಟ್ಟಿ, ಸ್ವಾವಲಂಬನೆ ಜೊತೆಗೆ ಸಮರ್ಪಕ ನಿರ್ವಹಣೆ ಹೆಚ್ಚಿನ ಕಾಳಜಿ ವಹಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಎಲ್ಲಾ ನಾಯಕರೂ ಮಾತನಾಡಿದ ಮೇಲೆ ಆನಂದ್ ಸಿಂಗ್ ಅವರಿಗೆ ವಿಚಾರ ಮನದಟ್ಟಾಗುತ್ತದೆ ಎಂಬ ವಿಶ್ವಾಸವಿದೆ: ಸಿಎಂ ಬೊಮ್ಮಾಯಿ
ನಮ್ಮದು ರಾಷ್ಟ್ರೀಯ ಪಕ್ಷ, ಇಲ್ಲಿ ರಾಜ್ಯದ ಮತ್ತು ರಾಷ್ಟ್ರ ಪ್ರಮುಖ ನಾಯಕರು ಸಚಿವ ಆನಂದ್ ಸಿಂಗ್ ಅವರ ಜೊತೆ ಮಾತನಾಡಿದ ಮೇಲೆ ಅವರಿಂದ ಸಕಾರಾತ್ಮಕ ಸ್ಪಂದನೆ ಬರುತ್ತದೆ, ಮುಂದೆ ಒಳ್ಳೆಯದಾಗುತ್ತದೆ ಎಂಬ ವಿಶ್ವಾಸವಿದ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸಂಪುಟ ರಚನೆ ಮುಗಿದ ನಂತರ ಸಿಎಂ ಬೊಮ್ಮಾಯಿಗೆ ಮತ್ತಷ್ಟು ಸಮಸ್ಯೆ, ಅತೃಪ್ತರ, ಭಿನ್ನರ ಸಂಖ್ಯೆಯಲ್ಲಿ ಹೆಚ್ಚಳ!
ರಾಜ್ಯ ಸಚಿವ ಸಂಪುಟ ರಚನೆಯಾಗಿ ಒಂದು ವಾರವಾಗಿದೆ. ಆದರೆ ಅತೃಪ್ತರ ಸಂಖ್ಯೆ ಜಾಸ್ತಿಯಾಗುತ್ತಿದೆ. ಸಚಿವ ಸಂಪುಟದಲ್ಲಿ ಸ್ಥಾನ ಸಿಗದವರು ದೆಹಲಿಗೆ ಎಡತಾಕುತ್ತಿದ್ದಾರೆ. ಇನ್ನು ಸಚಿವ ಸ್ಥಾನ ಸಿಕ್ಕಿದವರಲ್ಲಿ ಕೆಲವರಿಗೆ ಖಾತೆ ಬಗ್ಗೆ ಅತೃಪ್ತಿಯುಂಟಾಗಿದ್ದು ವಿವಿಧ ಮಟ್ಟದಲ್ಲಿ ಲಾಬಿ ಮಾಡುತ್ತಿದ್ದಾರೆ.

ಆನಂದ್ ಸಿಂಗ್ ಬಳಿ ಮಾತನಾಡುತ್ತೇನೆ, ಅಂತಿಮವಾಗಿ ಎಲ್ಲ ಸರಿ ಹೋಗುತ್ತದೆ: ಸಿಎಂ ಬಸವರಾಜ ಬೊಮ್ಮಾಯಿ
ಸಚಿವ ಆನಂದ್ ಸಿಂಗ್ ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ, ಅವರು ತಮ್ಮ ಅಸಮಾಧಾನ, ನೋವನ್ನು ತೋಡಿಕೊಂಡಿದ್ದಾರೆ. ಅವರ ಜೊತೆ ನಾನು ಕೂಡ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದೇನೆ, ಬೆಂಗಳೂರಿಗೆ ಬಂದ ಮೇಲೆ ಮಾತನಾಡಿ ಎಲ್ಲವನ್ನೂ ಬಗೆಹರಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ-ತುರಾಯಿ ಸನ್ಮಾನ ಬೇಡ, ಕನ್ನಡ ಪುಸ್ತಕ ನೀಡಿ: ಸರ್ಕಾರದ ಆದೇಶ
ರಾಜ್ಯ ಸರ್ಕಾರ ಮತ್ತು ಸರ್ಕಾರದ ಸ್ವಾಮ್ಯಕ್ಕೊಳಪಡುವ ಸಂಸ್ಥೆಗಳ ಸಭೆ-ಸಮಾರಂಭಗಳಲ್ಲಿ ಇನ್ನು ಮುಂದೆ ಹಾರ-ತುರಾಯಿಗಳನ್ನು ಸನ್ಮಾನಗಳಿಗೆ ಬಳಸದೆ ಬದಲಾಗಿ ಕನ್ನಡ ಪುಸ್ತಕಗಳನ್ನು ಕಾಣಿಕೆ ರೂಪದಲ್ಲಿ ನೀಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

